Thursday, 5th December 2024

Book Release: ಬೆಂಗಳೂರಿನಲ್ಲಿ ಡಿ.8ರಂದು ಹರಿವು ಬುಕ್ಸ್‌ನ ಎರಡು ಪುಸ್ತಕಗಳ ಬಿಡುಗಡೆ

Book Release

ಬೆಂಗಳೂರು: ಹರಿವು ಬುಕ್ಸ್‌ ಪ್ರಕಾಶನದ ಡಾ. ಸುಕನ್ಯಾ ಸೂನಗಹಳ್ಳಿ ಅವರ ಸಂಪಾದಕತ್ವದ ‘ಲಾಲ್ ಬಾಗ್ ಕಲ್ಲಿನೊಂದಿಗೆ ಸಲ್ಲಾಪ’ ಮತ್ತು ಅನಂತಮುಖಿ (ಡಾ. ಟಿ. ಆರ್‌. ಅನಂತರಾಮು ಅಭಿನಂದನ ಗ್ರಂಥ) ಪುಸ್ತಕಗಳ ಬಿಡುಗಡೆ (Book Release) ಕಾರ್ಯಕ್ರಮ ಡಿ. 8ರಂದು ಭಾನುವಾರ ಸಂಜೆ 4 ಗಂಟೆಗೆ ಬೆಂಗಳೂರು ನಗರದ ಬಸವನಗುಡಿಯಲ್ಲಿರುವ ಪತ್ತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಈ ಸುದ್ದಿಯನ್ನೂ ಓದಿ | KKRTC Jobs: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಕೆಎಸ್‌ಆರ್‌ಟಿಸಿ ಉದ್ಯೋಗ, ಶೀಘ್ರವೇ ಅರ್ಜಿ ಸಲ್ಲಿಸಿ

ಕಾರ್ಯಕ್ರಮದಲ್ಲಿ ನಿವೃತ್ತ ಕನ್ನಡ ಪ್ರಾಧ್ಯಾಪಕ ಮತ್ತು ಹಿರಿಯ ವಿದ್ವಾಂಸ ಪ್ರೊ. ಜಿ. ಅಶ್ವತ್ಥನಾರಾಯಣ ಅಧ್ಯಕ್ಷತೆ ವಹಿಸುವರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬೆಂಗಳೂರು, ಹಿರಿಯ ರಸಾಯನ ವಿಜ್ಞಾನಿ ಡಾ. ಎಂ. ಬಿ. ದೀಪಾ, ನಿವೃತ್ತ ಪ್ರಾಂಶುಪಾಲ ಡಾ. ಟಿ. ಎ. ಬಾಲಕೃಷ್ಣ ಅಡಿಗ, ಭೂವಿಜ್ಞಾನಿ ಮತ್ತು ಜನಪ್ರಿಯ ವಿಜ್ಞಾನ ಲೇಖಕ ಡಾ. ಟಿ.ಆರ್‌. ಅನಂತರಾಮು ಮತ್ತು ಹರಿವು ಬುಕ್ಸ್‌ ಮುಖ್ಯಸ್ಥ ರತೀಶ ಬಿ.ಆರ್‌. ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.