ಚೆನ್ನೈ : ಫೆಂಗಲ್ ಚಂಡಮಾರುತ (Cyclone Fengal) ತಮಿಳು ನಾಡು (Tamil Nadu) ಹಾಗೂ ಪುದುಚೇರಿಯಲ್ಲಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿ ಮಾಡಿದೆ. ರಾಜ್ಯದಲ್ಲಿ ಸುರಿದ ನಿರಂತರ ಮಳೆಯ ಕಾರಣ ಹಲವೆಡೆ ಪ್ರವಾಹ ಹಾಗೂ ಭೂ ಕುಸಿತ ಸಂಭವಸಿದೆ. ತಮಿಳು ನಾಡಿನ ತಿರುವಣ್ಣಾಮಲೈನ ಅಣ್ಣಾಮಲೈಯಾರ್ ಬೆಟ್ಟದ ತಪ್ಪಲಿನಲ್ಲಿರುವ ವಿಒಸಿ ನಗರದಲ್ಲಿ ಭೂಕುಸಿತ (Land Fall) ಸಂಭವಿಸಿತ್ತು. ಮಂಗಳವಾರ ಅವಶೇಷಗಳಡಿ ಸಿಲುಕಿದ್ದ ಮೃತ ದೇಹವನ್ನು ಹೊರತೆಗೆಯಲಾಗಿದೆ.
ಭಾನುವಾರ ಸಂಜೆ ಭೂಕುಸಿತ ಸಂಭವಿಸಿತ್ತು, ಐದು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಭಾರೀ ಮಳೆಯಿಂದ ಸಡಿಲಗೊಂಡ ಬೃಹತ್ ಬಂಡೆಯೊಂದು ಸಂಜೆ 4:30 ಕ್ಕೆ ಅಣ್ಣಾಮಲೈಯಾರ್ ಬೆಟ್ಟದ ಕೆಳ ಇಳಿಜಾರಿನಲ್ಲಿರುವ ಮನೆಯೊಂದಕ್ಕೆ ಅಪ್ಪಳಿಸಿದಾಗ ಈ ಘಟನೆ ಸಂಭವಿಸಿದೆ.
#WATCH | Tamil Nadu: Visuals from Tiruvannamalai where 7 people, including 5 children, died when a huge rock fell on their house, following continuous rainfall because of #FengalCyclone.
— ANI (@ANI) December 3, 2024
4 bodies have been recovered and sent to the hospital. Deputy CM Udhayanidhi Stalin… pic.twitter.com/YsOgDJFCJy
ಚೆನ್ನೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಜ್ಞರು ಸೇರಿದಂತೆ ರಕ್ಷಣಾ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಈಗಾಗಲೇ ಮೃತರ ದೇಹಗಳನ್ನು ಹೊರತೆಗೆಯಲಾಗಿದೆ. ಸೋಮವಾರ ದೇವಸ್ಥಾನದ ಬಳಿ ಎರಡನೇ ಬಾರಿ ಭೂಕುಸಿತ ಸಂಭವಿಸಿದ್ದು, ಯವುದೇ ಸಾವುನೋವುಗಳಾಗಿಲ್ಲ ಎಂದು ವರದಿಯಾಗಿದೆ.
ಫೆಂಗಲ್ ಚಂಡಮಾರುತವು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ದಾಖಲೆಯ ಮಳೆಗೆ ಕಾರಣವಾಗಿದೆ. ಶನಿವಾರ ರಾತ್ರಿಯಿಂದ ಚಂಡಮಾರುತ ಈ ಪ್ರದೇಶವನ್ನು ಹಾದುಹೋಗಿದ್ದು, ಭಾನುವಾರ ಬೆಳಗ್ಗೆ 9 ಗಂಟೆವರೆಗೆ 24 ಗಂಟೆಗಳ ಅವಧಿಯಲ್ಲಿ 46 ಸೆಂಟಿ ಮೀಟರ್ ಮಳೆಯಾಗಿದೆ. ಇದು 30 ವರ್ಷಗಳಲ್ಲೇ ಅತ್ಯಧಿಕ ಮಳೆಯಾಗಿದೆ.
ಕೇರಳಕ್ಕೂ ಫೆಂಗಲ್ ಎಂಟ್ರಿ
ಸೋಮವಾರ ಕೇರಳಕ್ಕೆ ಫೆಂಗಲ್ ಚಂಡಮಾರುತ ಎಂಟ್ರಿ ಕೊಟ್ಟಿದ್ದು, ಕೇರಳದ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ರಾಜ್ಯದಲ್ಲಿ ಫೆಂಗಲ್‌ನಿಂದ ಮಳೆಯಾಗಿತ್ತಿದ್ದು, ಕೆಲವು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಜನರು ಪರೆದಾಡುತ್ತಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ.
ಈ ಸುದ್ದಿಯನ್ನೂ ಓದಿ : Cyclone Fengal: ಫೆಂಗಲ್ ಎಫೆಕ್ಟ್, ಮೂರು ಜಿಲ್ಲೆಗಳ ಶಾಲೆ ಕಾಲೇಜುಗಳಿಗೆ ರಜೆ, ಬೆಂಗಳೂರಿನಲ್ಲೂ ಮಳೆ