Wednesday, 4th December 2024

Viral Video: ಬಂಡೆಗಳ ಮೇಲೆ ಧ್ಯಾನ ಮಾಡ್ತಿದ್ದ ನಟಿ ಸಮುದ್ರ ಪಾಲು! ಘಟನೆಯ ಶಾಕಿಂಗ್ ವಿಡಿಯೋ ಇಲ್ಲಿದೆ

ಥಾಯ್ಲೆಂಡ್‌: 2024 ನಿಜಕ್ಕೂಕರಾಳ ವರ್ಷವಾಗಿ ಬದಲಾಗಿದೆ. ಒಂದು ಕಡೆ ಪ್ರವಾಹ, ಚಂಡಮಾರುತ – ಗುಡ್ಡಕುಸಿತದ ಭೀತಿ ಮತ್ತೊಂದು ಕಡೆ ಸಾವುಗಳ ಸರಣಿ. ಅದರಲ್ಲೂ ಸಿನಿ ರಂಗದಲ್ಲಂತೂ ತುಂಬಾ ಮಂದಿ ಅಗಲುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಸಾವುಗಳ ಸರಣಿ ಮುಂದುವರೆಯುತ್ತಲೇ ಇದೆ. ಒಂದರ ಹಿಂದೆ ಒಂದರಂತೆ ಕಲಾವಿದರ ಸಾವಿನ ಸುದ್ದಿ ಸಿನಿಪ್ರಿಯರಿಗೆ ಆಘಾತ ನೀಡುತ್ತಲೇ ಇದೆ(Viral Video).

ಸದ್ಯ ನಮ್ಮ ಸಿನಿ ಜಗತ್ತಿಗೆ ಯಾವ ಕರಿ ಛಾಯೆ ಅವರಿಸಿದೆಯೋ ಗೊತ್ತಿಲ್ಲ… ಅನೇಕ ಸಾವು – ನೋವು ದುರ್ಘಟನೆಗಳಿಗೆ ಫಿಲ್ಂ ಇಂಡಸ್ಟ್ರಿ ಸಾಕ್ಷಿಯಾಗುತ್ತಿದೆ. ದಿನಕ್ಕೊಬ್ಬರು ನಟ-ನಟಿಯರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಅಭಿಮನಿಗಳು ಒಬ್ಬರು ಸಾವನ್ನು ಅರಗಿಸಿಕೊಳ್ಳುವಷ್ಟರಲ್ಲಿ ಮತ್ತೊಬ್ಬರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಇದೀಗ ಅಂತಹದ್ದೆ ಮತ್ತೊಂದು ಘಟನೆ ನಡೆದಿದೆ. ನಟಿಯೊಬ್ಬರು ನೋಡ ನೋಡುತ್ತಿದ್ದಂತೆ ಸಮುದ್ರದ ಅಲೆಗಳ ಜೊತೆ ಕೊಚ್ಚಿ ಹೋಗಿದ್ದಾರೆ.

24 ವರ್ಷದ ರಷ್ಯಾದ ಖ್ಯಾತ ನಟಿ(Russian Actress) ಕ್ಯಾಮಿಲ್ಲಾ ಬೆಲ್ಲಾಟಸ್ಕಾಯ(Kamilla Belyatskaya) ದುರಂತ ಅಂತ್ಯಕಂಡಿದ್ದು, ಯೋಗದಲ್ಲಿ ನಿರತಳಾಗಿದ್ದ ನಟಿ ಮೇಲೆ ಭೀಕರ ಅಲೆ ಅಪ್ಪಳಿಸಿದ ಪರಿಣಾಮ ನೋಡ ನೋಡುತ್ತಿದ್ದಂತೆ ನಟಿ ಕೊಚ್ಚಿ ಹೋಗಿದ್ದಾರೆ. ನಟಿಯ ಕೊನೆಯ ಕ್ಷಣದ ವಿಡಿಯೋ(Viral Video) ಸೆರೆಯಾಗಿದೆ.

ಹೌದು ನಟಿ ಕ್ಯಾಮಿಲ್ಲಾ ಸಮುದ್ರದ ದಡದ ಮೇಲಿನ ಬಂಡೆಗಳ ಮೇಲೆ ಕುಳಿತು, ಪ್ರಾಣಾಯಾಮ ಮಾಡುತ್ತಿದ್ದರು. ಇದೇ ವೇಲೆ ಜೋರಾಗಿ ಅಪ್ಪಳಿಸಿದ ಅಲೆಗಳು ನಟಿಯತ್ತ ಬಂದಿದ್ವು, ನೋಡ ನೋಡುತ್ತಿದ್ದಂತೆ ಅಲೆಗಳು ತೇಲಿ ಬಂದ ರಭಸಕ್ಕೆ ನಟಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ದುರ್ಘಟನೆ ಥಾಯ್ಲೆಂಡ್‌ನ ಕೊಹ್ ಸಮುಯಿ ದ್ವೀಪದಲ್ಲಿ ನಡೆದಿದ್ದು, ರಷ್ಯಾದ ಖ್ಯಾತ ನಟಿ ಕ್ಯಾಮಿಲ್ಲಾ ಬೆಲ್ಲಾಟಸ್ಕಾಯ (24) ಅನ್ಯಾಯವಾಗಿ ಅಸುನೀಗಿದ್ದಾರೆ.

ಘಟನೆ ನಡೆದದ್ದು ಹೇಗೆ…?
ಥಾಯ್ಲೆಂಡ್‌ನ ಕೊಹ್ ಸಮುಯಿ ದ್ವೀಪಕ್ಕೆ ಪ್ರವಾಸ ಬಂದಿದ್ದ ನಟಿ ಕಮಿಲ್ಲಾ ದ್ವೀಪದಲ್ಲಿ ಸಮುದ್ರಕ್ಕೆ ಸಮೀಪವಿರುವ ಬಂಡೆಗಳ ಮೇಲೆ ತನ್ನ ಯೋಗ ಮ್ಯಾಟ್ ಇಟ್ಟು ಧಾನ್ಯ ಮಾಡುತ್ತಿದ್ದರು. ಈ ವೇಳೆ ಮೃತ್ಯುವಿನ ರೂಪದಲ್ಲಿ ಬಂದು ದೈತ್ಯಕಾರದ ಅಲೆಯೊಂದು ಬಂಡೆಗೆ ಅಪ್ಪಳಿಸಿದೆ. ಅಲೆ ಹೊಡೆದ ರಭಸಕ್ಕೆ ಯೋಗದ ಮ್ಯಾಟ್‌ ಸಹಿತ ಕಮಿಲ್ಲಾ ಅವರನ್ನು ಅಲೆ ಸಮುದ್ರಕ್ಕೆ ಎಳೆದುಕೊಂಡು ಹೋಗಿದ್ದು, ಸಮುದ್ರದಲ್ಲಿ ಬಿದ್ದ ಕಮಿಲ್ಲಾ ಸಾವು ಬದುಕಿನ ನಡುವೆ ಹೋರಾಡುವ ದೃಶ್ಯ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಇನ್ನು ಕಮಿಲ್ಲಾ ಅವರ ಮೃತದೇಹ ಅವಳು ಧ್ಯಾನ ಮಾಡುತ್ತಿದ್ದ ಬಂಡೆಯಿಂದ 3-4 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದ್ದು, ಕಮ್ಮಿಲ್ಲಾ ಗೆಳೆಯನೊಂದಿಗೆ ಥಾಯ್ಲೆಂಡ್‌ಗೆ ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದೆ. ಸಾವಿಗೂ ಮುನ್ನ ಕೆಮ್ಮಿಲ್ಲಾ ಬಂಡೆಗಳ ಮೇಲೆ ಕೂತು ಧ್ಯಾನ ಮಾಡುತ್ತಿರುವ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: Posh Committee: ಕವಿತಾ ಲಂಕೇಶ್‌ ನೇತೃತ್ವದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಮಿಟಿ ರಚನೆ