ಬೀದರ್: ಬೀದರ್ ಹಾಗೂ ವಿಜಯಪುರದಲ್ಲಿ (Vijayapura news) ವಕ್ಫ್ ಮಂಡಳಿ (Waqf Board) ಎಬ್ಬಿಸಿದ ಕೋಲಾಹಲ ಇನ್ನೂ ತಣ್ಣಗಾಗಿಲ್ಲ. ಬದಲಾಗಿ ಹೊಸ ಹೊಸ ಜಾಗಗಳು ವಕ್ಫ್ ಮಂಡಳಿಯ ಹೆಸರಿಗೆ ಸೇರ್ಪಡೆಯಾಗುತ್ತಲೇ ಇವೆ. ಇದೀಗ ಬೀದರ್ನಲ್ಲಿರುವ (Bidar news) ವಿಶ್ವಗುರು ಬಸವಣ್ಣನವರು (Basavanna) ಪಠಿಸುತ್ತಿದ್ದ ವಚನ ಮಹಾಮಠ ಬಸವಗಿರಿಯ ಜಾಗವು ಕೂಡ ವಕ್ಫ್ ಎಂದು ನಮೂದಾಗಿದೆ.
ವಕ್ಫ್ ವಿವಾದದ ಕುರಿತಂತೆ ಈಗಾಗಲೇ ಪ್ರತಿಪಕ್ಷಗಳು ಹೋರಾಟ ಕೈಗೆತ್ತಿಕೊಂಡು ಮುನ್ನಡೆಯುತ್ತಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ನಿದ್ದೆಗೆಡಿಸಿವೆ. ಇದುವರೆಗೂ ರೈತರ ಜಮೀನುಗಳು, ಶಾಲೆ, ಸರ್ಕಾರಿ ಕಚೇರಿಗಳು ಹಾಗೂ ಹಲವು ದೇವಸ್ಥಾನಗಳ ಮೇಲೆ ವಕ್ಫ್ ನ ಕರಿನೆರಳು ಬಿದ್ದಿತ್ತು. ಇದೀಗ ಬೀದರ್ನಲ್ಲಿರುವ ವಿಶ್ವಗುರು ಬಸವಣ್ಣನವರು ಪಠಿಸುತ್ತಿದ್ದ ವಚನ ಮಹಾಮಠ ಬಸವಗಿರಿಯ ಜಾಗವು ಕೂಡ ವಕ್ಫ್ ಎಂದು ನಮೂದಾಗಿದೆ.
ಬೀದರ್ನ ಪಾಪನಾಶ ದೇವಸ್ಥಾನದ ಬಳಿಯಿರುವ ಬಸವಗಿರಿಯ ಸರ್ವೇ ನಂ.37ರ 5 ಎಕರೆ 19 ಗುಂಟೆ ಜಾಗ 2019ರಲ್ಲಿ ವಕ್ಫ್ಗೆ ಸೇರಿಸಿದ್ದು ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. 2008ರಲ್ಲಿ ಈ ಬಸವಗಿರಿ ಉದ್ಘಾಟನೆಯಾಗಿದ್ದು, ಬಹುತೇಕ 16 ವರ್ಷದಿಂದ ಪ್ರತಿ ದಿನ ಇಲ್ಲಿಗೆ ನೂರಾರು ಭಕ್ತರು ಭೇಟಿ ನೀಡಿ ಬಸವಣ್ಣನವರ ಭಾವಚಿತ್ರಕ್ಕೆ ನಮಿಸಿ ವಚನಗಳ ಪಠನ ಮಾಡುತ್ತಾರೆ.
ಬೀದರ್ನಲ್ಲಿ ಇದುವರೆಗೂ ರೈತರ ಜಮೀನು, ಐತಿಹಾಸಿಕ ಸ್ಮಾರಕಗಳು, ಸರ್ಕಾರಿ ಜಾಗಗಳು ಸೇರಿದಂತೆ ಒಟ್ಟು 13 ಸಾವಿರಕ್ಕೂ ಹೆಚ್ಚು ಎಕರೆ ಜಾಗ ವಕ್ಫ್ ಪಾಲಾಗಿದೆ. ಇದೀಗ ಮತ್ತೆ ಬಗೆದಷ್ಟು ಬಯಲಾಗುತ್ತಿದ್ದು, ವಿಶ್ವಗುರು ಬಸವಣ್ಣನವರ ವಚನಮಂತ್ರ ಪಠಿಸುವ ಲಿಂಗಾಯತ ಮಹಾಮಠದ ಬಸವಗಿರಿ ಕೂಡ ವಕ್ಫ್ ಆಸ್ತಿಯಾಗಿ ಕ್ಲೇಮ್ ಮಾಡಲಾಗಿದೆ. ಪ್ರತಿವರ್ಷ ಇಲ್ಲಿ ವಚನ ವಿಜಯೋತ್ಸವ ಕಾರ್ಯಕ್ರಮ ಮಾಡಿ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ. ಆದರೆ ಇದೀಗ ಈ ಒಂದು ಜಾಗ ಕೂಡ ವಕ್ಫ್ ಪಾಲಾಗಿದ್ದು, ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಈಗಾಗಲೇ ವಕ್ಫ್ ಮಂಡಳಿ ನೋಟೀಸ್ ಪಡೆದಿರುವ ರೈತರಿಂದ ನೋಟೀಸ್ ವಾಪಸ್ ಪಡೆಯಲು ಸಿಎಂ ಸೂಚಿಸಿದ್ದಾರೆ. ಆದರೆ ವಕ್ಫ್ ಎಂದು ನಮೂದಾಗಿರುವ ರೈತರ ಪಹಣಿ ಪತ್ರಗಳಲ್ಲಿ ಅದ್ನು ತೆಗೆದುಹಾಕಲು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ಇದನ್ನೂ ಓದಿ: DK Shivakumar: ವಕ್ಫ್ ಹೆಸರಲ್ಲಿ ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ; ಡಿ.ಕೆ. ಶಿವಕುಮಾರ್