Wednesday, 4th December 2024

Pushpa 3 : ಪುಷ್ಪ3 ತೆರೆ ಮೇಲೆ ಬರೋದು ಗ್ಯಾರಂಟಿನಾ? ಆ ಸಂಗೀತ ನಿರ್ದೇಶಕ ಮಾಡಿದ್ದ ಪೋಸ್ಟ್‌ನಲ್ಲೇನಿತ್ತು?

Pushpa 3

ಹೈದರಾಬಾದ್‌: ಡಿಸೆಂಬರ್‌ 5 ರಂದು ವಿಶ್ವದಾದ್ಯಂತ ಅಬ್ಬರಿಸಲು ಪುಷ್ಪಾ 2 (Pushpa 2 ) ಸಜ್ಜಾಗಿದೆ. ಅಲ್ಲು ಅರ್ಜುನ್‌ ಹಾಗೂ ರಶ್ಮಿಕಾ ಸೇರಿದಂತೆ ಹಲವು ತಾರಾಗಣಗಳು ಚಿತ್ರದಲ್ಲಿ ನಟಿಸಿದ್ದು, ಪ್ಯಾನ್‌ ಇಂಡಿಯಾ ಸಿನಿಮಾಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ದೊರಕಿದೆ. ಪುಷ್ಪ3 (Pushpa 3) ತೆರೆ ಮೇಲೆ ಬರುತ್ತಾ ಎನ್ನುವ ಅನುಮಾನಕ್ಕೆ ಇದೀಗ ಸಂಗೀತ ನಿರ್ದೇಶಕನ ಪೋಸ್ಟ್‌ವೊಂದು ಮತ್ತಷ್ಟು ಪುಷ್ಠಿ ಕೊಟ್ಟಿದೆ.

ಆಸ್ಕರ್ ಪ್ರಶಸ್ತಿ ವಿಜೇತ ಸೌಂಡ್ ಡಿಸೈನರ್ ರೆಸುಲ್ ಪೂಕುಟ್ಟಿ ( Resul Pookutty) ಅವರು ಮಂಗಳವಾರ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಮುಖ ಫೋಟೊವನ್ನು ಹಂಚಿಕೊಂಡಿದ್ದರು. ಫೋಟೊದಲ್ಲಿ ಅವರು ಹಾಗೂ ಅವರ ತಂಡವಿದೆ. ಆದರೆ ಆ ಫೋಟೋಗಿಂತ ಅದರ ಹಿಂಬದಿಯಿರುವ ಪೋಸ್ಟರ್‌ ಎಲ್ಲರ ಗಮನ ಸೆಳೆದಿತ್ತು. ಅದರಲ್ಲಿ ಪುಷ್ಪ 3 ಎಂದು ಬರೆದಿತ್ತು. ಇನ್ನು ಈ ಪೋಸ್ಟ್‌ ಮಾಡಿದ ಕೆಲವೇ ನಿಮಿಷಗಳ ಒಳಗೆ ತಾವು ಮಾಡಿರುವ ಇನ್ಸ್ಟಾ ಪೋಸ್ಟ್‌ನ್ನು ಅವರು ಡಿಲೀಟ್‌ ಮಾಡಿದ್ದು, ಪುಷ್ಪದ ಮೂರನೇ ಭಾಗ ಬರಲಿದೆಯೇ ಎಂಬ ಅನುಮಾನ ಬಲವಾಗಿ ಮೂಡಿದೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಕೂಡ ಪುಷ್ಪ 3 ರ ಬಗ್ಗೆ ಸುಳಿವು ನೀಡಿದ್ದರು. ಖಂಡಿತವಾಗಿಯೂ ಇನ್ನೂ ಸಾಕಷ್ಟು ಕೆಲಸಗಳು ಉಳಿದುಕೊಂಡಿವೆ. ಪ್ರಾಯಶಃ ಪಾರ್ಟ್​ 3 ಕೂಡ ಇದೆ’ ಎಂದು ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ. ಈ ಮಾತನ್ನು ಕೇಳಿ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಮೂರನೇ ಪಾರ್ಟ್​ ಬಗ್ಗೆ ಅಲ್ಲು ಅರ್ಜುನ್ ಅವರು ಸದ್ಯಕ್ಕೆ ಏನೂ ಹೇಳಿಲ್ಲ. ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್​’ ಏನು ಹೇಳುತ್ತದೆ ಎಂಬ ಕೌತುಕ ಕೂಡ ಅಭಿಮಾನಿಗಳಿಗೆ ಇದೆ.

ಇತ್ತೀಚೆಗೆ ವಿಜಯ್‌ ದೇವರಕೊಂಡ ಸುಕುಮಾರ್ ಅವರ ಜನ್ಮದಿನದಂದು ಶುಭ ಹಾರೈಸುವಾಗ, ಜನ್ಮದಿನದ ಶುಭಾಶಯಗಳು 2021 – 2022 – ದಿ ರೂಲ್ 2023 – ರಾಂಪೇಜ್ ಎಂದು ಚಿತ್ರದ ಮೂರನೇ ಆವೃತ್ತಿಯ ಬಗ್ಗೆ ಹೇಳಿದ್ದರು. ಒಟ್ಟಿನಲ್ಲಿ ಪುಷ್ಪ 2 ಬೆನ್ನಲ್ಲೇ ಅದರ ಮುಂದುವರಿದ ಭಾಗದ ತೆರೆ ಮೇಲೆ ಬರುವುದು ಬಹುತೇಕ ಖಚಿತ ಎಂಬಂತಿದೆ.

ಮತ್ತೊಂದೆಡೆ ಪುಷ್ಪ ದಿ ರೂಲ್‌ ಚಿತ್ರದ ಟಿಕೆಟ್‌ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್‌ ಆಂಧ್ರಪ್ರದೇಶ ಸರ್ಕಾರಕ್ಕೆ ಧನ್ಯಾವಾದ ತಿಳಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್‌ ಮಾಡಿ ಧನ್ಯವಾದ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Pushpa 2 : ʼಪುಷ್ಪ 2ʼ ಗೆ ಸೆನ್ಸಾರ್‌ ಬೋರ್ಡ್‌ನಿಂದ ಆಕ್ಷೇಪಣೆ – ಹಿಂಸಾತ್ಮಕ ದೃಶ್ಯಗಳಿಗೆ ಕತ್ತರಿ!