ಹೈದರಾಬಾದ್: ಸಮಂತಾ ಋತು ಪ್ರಭು (Samantha Ritu Prabhu) ಜೊತೆ ವಿಚ್ಛೇದನದ ಬಳಿಕ ಸಾಕಷ್ಟು ಸುದ್ದಿಯಲ್ಲಿರುವ ನಟ ನಾಗ ಚೈತನ್ಯ (Shobita-Naga Chaitanya Wedding) ಅವರ ವಿವಾಹದ ಪ್ರತಿಯೊಂದು ವಿಚಾರವೂ ಈಗ ಚರ್ಚೆಯಲ್ಲಿದೆ. ಇದೀಗ ಶೋಭಿತಾ ಧೂಳಿಪಾಲ ಅವರೊಂದಿಗೆ ಎರಡನೇ ಬಾರಿಗೆ ಹಸೆಮಣೆ ಏರುತ್ತಿರುವ ನಾಗ ಚೈತನ್ಯ ಅವರ ಮದುವೆಗೆ ಉಡುಗೊರೆಗಾಗಿ ನಟ, ತಂದೆ ನಾಗಾರ್ಜುನ (Actor Nagarjuna) 2.5 ಕೋಟಿ ರೂ. ಖರ್ಚು ಮಾಡಿದ್ದಾರೆ.
ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಡಿಸೆಂಬರ್ 4 ರಂದು ಆತ್ಮೀಯರ ಸಮ್ಮುಖದಲ್ಲಿ ಶೋಭಿತಾ ಧೂಳಿಪಾಲ ಮತ್ತು ನಾಗ ಚೈತನ್ಯ ವಿವಾಹವಾಗಲಿದ್ದಾರೆ. ಈ ಜೋಡಿಯ ವಿವಾಹ ಪೂರ್ವ ಸಂಭ್ರಮದ ಹಲವಾರು ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈಗಾಗಲೇ ಶೋಭಿತಾ ಅವರ ಮದುವೆಯ ಬಟ್ಟೆ ಮತ್ತು ಮದುವೆಯ ಪೂರ್ವ ಕಾರ್ಯಕ್ರಮಗಳ ಬಗ್ಗೆ ಹಲವಾರು ಆಸಕ್ತಿದಾಯಕ ವಿವರಗಳನ್ನು ಸಹ ಬಹಿರಂಗಪಡಿಸಲಾಗಿದೆ.
ಇದೀಗ ನಾಗ ಚೈತನ್ಯ ಅವರ ತಂದೆ ಹಿರಿಯ ನಟ ನಾಗಾರ್ಜುನ ಈ ಜೋಡಿಗೆ ಉಡುಗೊರೆಯಾಗಿ ಸುಮಾರು 2.5 ಕೋಟಿ ಮೌಲ್ಯದ ಹೊಚ್ಚ ಹೊಸ ಕಾರನ್ನು ಖರೀದಿಸಿದ್ದಾರೆ ಎನ್ನಲಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ನಾಗಾರ್ಜುನ ಅವರು ತಮ್ಮ ಹೊಸ ಮೆರೂನ್ ಫೋರ್-ವೀಲರ್ ಲೆಕ್ಸಸ್ ಎಲ್ಎಂ ವಿಐಪಿಯಲ್ಲಿ ಪ್ರಯಾಣಿಸಿದ್ದನ್ನು ತೋರಿಸುವ ವೀಡಿಯೊವೊಂದು ವೈರಲ್ ಆಗಿದೆ. ಹೈದ್ರಾಬಾದ್ನ ಖೈರತಾಬಾದ್ನಲ್ಲಿರುವ ಆರ್ಟಿಎ ಕಚೇರಿಯಲ್ಲಿ ಕಾರನ್ನು ನೋಂದಾಯಿಸಲು ಅವರು ಬಂದಿದ್ದರು.
ನಾಗಾರ್ಜುನ ಅವರು ಉನ್ನತ ಮಟ್ಟದ ಐಷಾರಾಮಿ ಲೆಕ್ಸಸ್ ಕಾರು ಎಲ್ಎಂ350ಹೆಚ್ 7-ಸೀಟರ್ ವಿಐಪಿ ಅನ್ನು ಖರೀದಿಸಿದ್ದಾರೆ ಮತ್ತು ಅವರ ಹೊಸ ವಾಹನದ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆರ್ಟಿಎ ಕಚೇರಿಗೆ ಭೇಟಿ ನೀಡಿದ್ದಾರೆ ಎನ್ನುವ ಶೀರ್ಷಿಕೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.