ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹತ್ತನೇ ವಾರಕ್ಕೆ ಕಾಲಿಟ್ಟಿದೆ. ದೊಡ್ಮನೆಯಲ್ಲಿ ಕಠಿಣ ಟಾಸ್ಕ್ಗಳು ಶುರುವಾಗಿವೆ. ಈ ವಾರ ಸ್ಪರ್ಧಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಟಿವಿ ಚಾನೆಲ್ ಟಾಸ್ಕ್ ನೀಡಲಾಗಿದೆ. ಈ ವಾರ ಬಿಗ್ ಬಾಸ್ ಮನೆ ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಯಾಗಿದೆ. ಇದು ಬಿಗ್ ಬಾಸ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಯ ಪ್ರಯುತ್ನ ಆಗಿದೆ. ಈ ಎರಡು ಟಿವಿ ಚಾನೆಲ್ ಪೈಕಿ ಯಾರು ಹೆಚ್ಚು ಮನೋರಂಜನೆ ನೀಡುತ್ತಾರೆ ಆ ತಂಡ ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆಯುತ್ತಾರೆ.
ಇನ್ನೊಂದು ವಿಶೇಷ ಎಂದರೆ ಈ ಎರಡು ಟಿವಿ ಚಾನೆಲ್ ಪೈಕಿ ಯಾರು ಉತ್ತಮ ಪ್ರದರ್ಶನ ನೀಡಿದರು ಎಂಬುದನ್ನು ಈ ಬಾರಿ ನಿರ್ಧರಿಸುವುದು ಸ್ವತಃ ವೀಕ್ಷಕರೆ. ಇದಕ್ಕಾಗಿ ಜಿಯೋ ಸಿನಿಮಾ ಆ್ಯಪ್ನಲ್ಲಿ ವೀಕ್ಷಕರಿಗೆ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಬುಧವಾರ ಬೆಳಗ್ಗಿನ ತನಕ ವೋಟಿಂಗ್ ಲೈನಪ್ ತೆರೆದಿರುತ್ತದೆ.
ಧನರಾಜ್, ಹನುಮಂತ, ಶಿಶಿರ್, ರಜತ್, ಮೋಕ್ಷಿತಾ, ಚೈತ್ರಾ ಒಂದು ತಂಡದಲ್ಲಿದ್ದರೆ, ಐಶ್ವರ್ಯಾ, ಸುರೇಶ್, ತ್ರಿವಿಕ್ರಮ್, ಭವ್ಯ, ಗೌತಮಿ ಮಂಜಣ್ಣ ಮತ್ತೊಂದು ತಂಡದಲ್ಲಿದ್ದಾರೆ. ನಿನ್ನೆ ನ್ಯೂಸ್ ರೀಡಿಂಗ್ ಮತ್ತು ಅಡುಗೆ ಮಾಡುವ ವಿಭಿನ್ನ ಟಾಸ್ಕ್ಗಳನ್ನು ನೀಡಲಾಗಿತ್ತು. ಇಂದು ಎಸ್ ಅಥವಾ ನೋ ಎಂಬ ಟಾಸ್ಕ್ ನೀಡಲಾಗಿದೆ.
ಈ ಟಾಸ್ಕ್ ಮಧ್ಯೆ ಚೈತ್ರಾ ಕುಂದಾಪುರ ಹಾಗು ತ್ರಿವಿಕ್ರಮ್ ನಡುವೆ ದೊಡ್ಡ ಜಗಳ ನಡೆದಿದೆ. ಬಾರಲೋ ಹೋಗಲೋ ಎಂದು ಏಕವಚನದಲ್ಲೇ ಚೈತ್ರಾ ಕೂಗಾಡಿದ್ದಾರೆ. ಮಾತಿನ ಬರದಲ್ಲಿ ಚೈತ್ರಾ ಮುಚ್ಚಿಕೊಂಡು ಕೂತ್ಕೋಬೇಕು ಎಂದು ಹೇಳಿದ್ದಾರೆ. ಅದಕ್ಕೆ ಸಿಟ್ಟಿಗೆದ್ದ ತ್ರಿವಿಕ್ರಮ್ ಚೈತ್ರಾ ಜೊತೆ ಮಾತಿಗೆ ಇಳಿದಿದ್ದು ದೊಡ್ಡ ಗಲಾಟೆ ಆಗಿದೆ.
ಹ್ಞೂಂ ಅಂತೀಯಾ? ಊಹ್ಞೂಂ ಅಂತೀಯಾ?
— Colors Kannada (@ColorsKannada) December 3, 2024
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30 #BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/FrcQkeZz4x
ಇನ್ನು ಶಿಶಿರ್ ಅವರು ಐಶ್ವರ್ಯಾ ಅವರಿಗೆ ಮೂರು ಹಾಗಲಕಾಯಿ ತಿನ್ನುವಂತೆ ಹೇಳಿದ್ದಾರೆ. ಇದಕ್ಕೆ ಯೆಸ್ ಎಂದು ಐಶ್ವರ್ಯಾ ಈ ಸವಾಲು ಸ್ವೀಕರಿಸಿದ್ದಾರೆ. ಕಷ್ಟಪಟ್ಟು ಹಾಗಲಕಾಯಿ ತಿನ್ನುವ ಪ್ರಯತ್ನ ಮಾಡಿದ್ದಾರೆ. ಅದೇ ರೀತಿ ಗೌತಮಿಗೆ ಎರಡು ಹಸಿ ಮೆಣಸಿನಕಾಯಿ ತಿನ್ನುವ ಟಾಸ್ಕ್ ನೀಡಲಾಗಿದೆ. ಮೆಣಸಿನಕಾಯಿ ತಿಂದ ಗೌತಮಿ ನೆಲಕ್ಕೆ ಬಿದ್ದು ಹೊರಳಾಡಿ ಕಣ್ಣೀರು ಇಟ್ಟಿದ್ದಾರೆ. ಉಳಿದ ಸ್ಪರ್ಧಿಗಳು ಅವರಿಗೆ ನೀರು ಕೊಟ್ಟು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.