Wednesday, 4th December 2024

Viral News: ಲೀಕ್ ಆಯ್ತು ಪಾಕ್ ಟಿಕ್‌ಟಾಕ್‌ ಸ್ಟಾರ್ ಮರ್ಯಮ್ ಫೈಸಲ್‌ ಖಾಸಗಿ ವಿಡಿಯೊ; ಈ ಜಾಲಕ್ಕೆ ಬಲಿಯಾದ 5ನೇ ಸಂತ್ರಸ್ತೆ ಈಕೆ

ಇಸ್ಲಾಮಾಬಾದ್‌: ಕಳೆದ ಕೆಲವು ಸಮಯಗಳಿಂದ ಸೋಶಿಯಲ್ ಮೀಡಿಯಾ ಇನ್ ಫ್ಲ್ಯುವೆನ್ಸರ್‌ಗಳ ಖಾಸಗಿ ವಿಡಿಯೊಗಳು ವೈರಲ್ ಆಗಿ ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ಅಂತಹುದ್ದೇ ಒಂದು ಸುದ್ದಿ ಇದೀಗ ಪಾಕಿಸ್ತಾನದಿಂದ ಹೊರಬಿದ್ದಿದ್ದು, ಅಲ್ಲಿನ ಟಿಕ್‌ಟಾಕ್ ಸ್ಟಾರ್ ಒಬ್ಬರ ಆಕ್ಷೇಪಾರ್ಹ ಎಂಎಂಎಸ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ (Viral News).

ಪಾಕ್ ಟಿಕ್‌ಟಾಕ್ ಸ್ಟಾರ್ ಮರ್ಯಾಮ್ ಫೈಸಲ್ ಎಂಬವರ ಖಾಸಗಿ ವಿಡಿಯೊ ಇದೀಗ ಲಿಕ್ ಆಗಿದ್ದು, ಈ ರಿತಿಯಾಗಿ ಸೋಶಿಯಲ್ ಮೀಡಿಯಾ ಇನ್ ಫ್ಲ್ಯುಯೆನ್ಸರ್‌ಗಳ ಖಾಸಗಿ ವಿಡಿಯೊ ಲೀಕ್ ಪಟ್ಟಿಯಲ್ಲಿ ಫೈಸಲ್ ಐದನೇಯವರು.

ಈ ಹಿಂದೆ ಸೋಶಿಯಲ್ ಮೀಡಿಯಾ ಇನ್ ಫ್ಲ್ಯುಯೆನ್ಸರ್‌ಗಳಾದ ಕನ್ವಲ್ ಅಫ್ತಾಬ್, ಮಿನಾಹಿಲ್ ಮಲಿಕ್, ಮಥಿರಾ ಮಹಮ್ಮದ್ ಮತ್ತು ಇಮ್ಷಾ ರೆಹಮಾನ್ ಅವರ ಖಾಸಗಿ ವಿಡಿಯೊ ಲೀಕ್ ಆಗಿ ವೈರಲ್ ಆಗುವ ಮೂಲಕ ಸಖತ್ ಸುದ್ದಿಯಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ 0.6 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಮರ್ಯಾಮ್ ಅವರು ಯುವಕನೊಬ್ಬನ ಜತೆ ಖಾಸಗಿ ಕ್ಷಣಗಳನ್ನು ಹಂಚಿಕೊಂಡಿರುವ ವಿಡಿಯೊ ಇದಾಗಿದೆ. ಈ ವಿಡಿಯೊ ಮರ್ಯಾಮ್ ಅವರದ್ದೇ ಎಂದು ಹಲವರು ಹೇಳುತ್ತಿದ್ದರೂ ಇದರ ಬಗ್ಗೆ ಸ್ವತಃ ಮರ್ಯಮ್ ಇನ್ನಷ್ಟೇ ಅಧಿಕೃತ ಹೇಳಿಕೆಯನ್ನು ಬಿಡುಗಡೆಗೊಳಿಸಬೇಕಿದೆ.

ಕಳೆದ ವಾರದಲ್ಲಿ ಕನ್ವಾಲ್ ಅಫ್ತಾಬ್ ಎಂಬ ಸೋಶಿಯಲ್ ಮೀಡಿಯಾ ಇನ್ ಫ್ಲ್ಯುವೆನ್ಸರ್‌ನ ಖಾಸಗಿ ವಿಡಿಯೊ ಲೀಕ್ ಆಗಿ ವೈರಲ್ ಆಗಿತ್ತು. 26 ವರ್ಷದ ಅಫ್ತಾಬ್ ಲೈಫ್ ಸ್ಟೈಲ್, ಬ್ಯೂಟಿ ಮತ್ತು ಫ್ಯಾಮಿಲಿ ಸಂಬಂಧಿತ ಕಂಟೆಂಟ್‌ಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ.

ಕನ್ವಲ್ ಅಫ್ತಾಬ್ ಇನ್ನೋರ್ವ ಟಿಕ್ ಟಾಕ್ ಸ್ಟಾರ್ ಝಲ್ಕರ್ ನೈನ್ ಸಿಕಂದರ್ ಜತೆ 2021ರಲ್ಲಿ ಮದುವೆಯಾಗಿದ್ದರು ಮತ್ತು 2023ರಲ್ಲಿ ಈ ದಂಪತಿಗೆ ಮೊದಲ ಮಗು ಜನಿಸಿತ್ತು.

ಸೋಷಿಯಲ್ ಇನ್ ಫ್ಲ್ಯುವೆನ್ಸರ್‌ಗಳ ಖಾಸಗಿ ವಿಡಿಯೊ ಲೀಕ್ ಆಗುವ ಈ ಸರಣಿ 2024ರಲ್ಲಿ ಪ್ರಾರಂಭಗೊಂಡಿದ್ದು, ಮಿನಾಹಿಲ್ ಮಲಿಕ್ ಇದರ ಮೊದಲ ಸಂತ್ರಸ್ತೆಯಾಗಿದ್ದರು. ಆದರೆ ಆ ಬಳಿಕ ಮಿನಾಹಿಲ್ ಈ ವಿಡಿಯೊ ಫೇಕ್ ಎಂದು ಸ್ಪಷ್ಟನೆ ನೀಡಿದ್ದರಲ್ಲದೇ ಅದರಲ್ಲಿ ಇರುವ ವ್ಯಕ್ತಿ ತಾನಲ್ಲ ಎಂದೂ ಹೇಳಿಕೊಂಡಿದ್ದರು.

ಪಾಕಿಸ್ತಾನಿ ನಟಿ ಮತ್ತು ಗಾಯಕಿ ಮಿಶಿ ಖಾನ್ ಮಿನಾಹಿಲ್‌ನ ಈ ಖಾಸಗಿ ವಿಡಿಯೊ ಬಗ್ಗೆ ಕಮೆಂಟ್ ಮಾಡಿ, ಇದನ್ನು ಮಿನಾಹಿಲ್ ಅವಳೇ ಬಿಟ್ಟಿ ಪ್ರಚಾರಕ್ಕಾಗಿ ತನ್ನ ವಿಡಿಯೊವನ್ನು ಸೋಸಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿದ್ದಾಳೆ ಎಂದು ಆರೋಪಿಸಿದ್ದಳು.

ಇದನ್ನೂ ಓದಿ: Viral News: 6 ನಕಲಿ ಮ್ಯಾಟ್ರಿಮನಿ ಸೈಟ್ ಮೂಲಕ 500 ಜನಕ್ಕೆ ವಂಚನೆ; ಮದುವೆಯಾಗಲು ಹೋಗಿ ಹಳ್ಳಕ್ಕೆ ಬಿದ್ದವರ ಗೋಳಿನ ಕಥೆಯಿದು!

“ಈ ಇನ್ ಫ್ಲ್ಯುಯೆನ್ಸರ್‌ಗಳಿಗೆ ನಾಚಿಕೆಯಾಗಬೇಕು. ಖ್ಯಾತಿ ಮತ್ತು ಹೆಸರಿಗಾಗಿ ಇವರೆಲ್ಲ ಇಷ್ಟು ಕೆಳ ಮಟ್ಟಕ್ಕೆ ಇಳಿಯುವ ಮೂಲಕ ತಮ್ಮ ಕುಟುಂಬ, ಹೆತ್ತವರು ಹಾಗೂ ಸಮಾಜಕ್ಕೆ ಕಳಂಕ ತರುತ್ತಿದ್ದಾರೆ. ಇವರನ್ನೆಲ್ಲ ಸೋಷಿಯಲ್ ಮೀಡಿಯಾ ಬಳಸುವುದರಿಂದ ಬ್ಯಾನ್ ಮಾಡಬೇಕುʼʼ ಎಂದು ನಟಿ ಮಿಶಿ ಕಿಡಿ ಕಾರಿದ್ದರು.

ಖಾಸಗಿ ವಿಡಿಯೊ ಲೀಕ್ ಆಗಿರುವ ಪಟ್ಟಿಯಲ್ಲಿ ಐದನೇ ಸೋಶಿಯಲ್ ಇನ್ ಫ್ಲ್ಯುಯೆನ್ಸರ್ ಆಗಿರುವ ಮರ್ಯಾಮ್ ಪಾಕಿಸ್ತಾನದ ಟಿಕ್‌ಟಾಕ್ ಸ್ಟಾರ್ ಆಗಿದ್ದು, 6 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇವರು ಮಾಡುವ ವಿಡಿಯೊಗಳಿಗೆ ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್ ಸಿಗುತ್ತದೆ. ಇವರು ಡ್ಯಾನ್ಸ್ ವಿಡಿಯೊಗಳು, ಲಿಪ್ –ಸಿಂಕ್ ಕ್ಲಿಪ್ಸ್ ವಿಡಿಯೊಗಳ ಸಹಿತ ಲೈಫ್ ಸ್ಟೈಲ್ ಕಂಟೆಂಟ್‌ಗಳನ್ನು ಸಹ ಪೋಸ್ಟ್ ಮಾಡುತ್ತಿರುತ್ತಾರೆ. ಟಿಕ್‌ಟಾಕ್‌ನಲ್ಲಿರುವ ಇವರು ಬಾಲಿವುಡ್ ಕಿಂಗ್ ಖಾನ್ ಶಾರುಖ್‌ ಖಾನ್‌ನ ಅಭಿಮಾನಿ ಎಂದು ಉಲ್ಲೇಖಿಸಿದ್ದಾರೆ.