ಬಾಗೇಪಲ್ಲಿ : ಬೃಹತ್ ಶಿಲಾಯುಗದ ಜಡಮಡುಗು ಅಕ್ಕಮ್ಮಬೆಟ್ಟ ಹಾಗೂ ಅವಿಭಜಿತ ಕೋಲಾರ ಜಿಲ್ಲೆಯ “ಹಾಳುಹಂಪೆ” ಎಂದೇ ಹೆಸರಾ ಗಿರುವ ಬಾಗೇಪಲ್ಲಿ ತಾಲ್ಲೂಕಿನ ಗುಮ್ಮನಾಯಕನ ಪಾಳ್ಯವನ್ನು ಅಭಿವೃದ್ಧಿಪಡಿಸಿ, ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದು ಲೋಕಸಭಾ ಸದಸ್ಯ ಡಾ|| ಕೆ.ಸುಧಾಕರ್ ರವರಲ್ಲಿ ಹಿರಿಯ ಪತ್ರಕರ್ತ, ಲೇಖಕ ಹಾಗೂ ಸಂಶೋಧಕ ಬಿ.ಆರ್.ಕೃಷ್ಣ ಮನವಿಸಿದರು.
ಅವರು ಕೇಂದ್ರ ಸರ್ಕಾರದ “ದಿಲ್ಲಿಯಿಂದ-ಹಳ್ಳಿಗೆ” ಯೋಜನೆಯಡಿಯಲ್ಲಿ ಚೇಳೂರು ತಾಲ್ಲೂಕು ಚಾಕವೇಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ “ಗುಮ್ಮನಾಯಕನ ಪಾಳ್ಯದ ಪಾಳೇಗಾರರು”, “ಬಾಗೇಪಲ್ಲಿ ತಾಲ್ಲೂಕಿನ ಪ್ರಾಗೈತಿಹಾಸಿಕ ನೆಲೆಗಳು” ಹಾಗೂ “ವಿಜಯನಗರ ಸಾಮ್ರಾಜ್ಯದ ದೇವಾಲಯಗಳ ಸಂಸ್ಕೃತಿ ಲೇಪಾಕ್ಷಿ” ಕೃತಿಗಳನ್ನು ಲೋಕಸಭಾ ಸದಸ್ಯರಿಗೆ ನೀಡಿ, ಗಮನ ಸೆಳೆದರು.
ಆನಂತರ ಸಂಸದರಿಗೆ ಮಾಹಿತಿ ನೀಡುತ್ತಾ, ಈ ಭಾಗಕ್ಕೆ ೫೦೦೦ ವರ್ಷಗಳ ಇತಿಹಾಸವಿದೆ, ಇಲ್ಲಿ ಆದಿಮಾನವ ನಡೆದಾಡಿರುವ ಕುರುಹುಗಳು ಕಂಡುಬರುತ್ತವೆ, ಬೃಹತ್ ಶಿಲಾಯುಗದ ನೆಲೆಯಾದ ಜಡಮಡುಗು ಅಕ್ಕಮ್ಮಬೆಟ್ಟ, ಸೂಕ್ಷ್ಮ ಶಿಲಾಯುಗದ ನೆಲೆಯಾದ ಜಡಮಡುಗು ನದಿ, ಮಸಾಲ ಮಡುಗು, ನವಿಲುಗುಟ್ಟ ಇತ್ಯಾದಿ ಸ್ಥಳಗಳನ್ನು ಉಲ್ಲೇಖ ಮಾಡಿ, ಇವುಗಳನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿ ಅಭಿವೃದ್ಧಿ ಪಡಿಸಬೇಕು ಎಂದು ಗಮನ ಸೆಳೆದರು.
ಜಡಮಡುಗು ಅಕ್ಕಮ್ಮ ಬೆಟ್ಟದ ಬೃಹತ್ ಶಿಲಾಯುಗದ ಅನೇಕ ಕುರುಹುಗಳು ಕಂಡುಬ0ದಿದ್ದು, ಇಡೀ ದಕ್ಷಿಣ ಭಾರತದಲ್ಲೇ ಎಲ್ಲಿಯೂ ಕಂಡುಬರದAತಹ ಅಪರೂಪವಾದ ಕಲ್ಗೋರಿಗಳನ್ನು ಹೊಂದಿದೆ. ಅದೇ ರೀತಿಯಲ್ಲಿ ಬಂಡೆ ವರ್ಣಚಿತ್ರಗಳು, ಕುಟ್ಟುಚಿತ್ರಗಳು, ಆರಾಧನೆಗೆ ಒಳಪಟ್ಟಿರುವ ಆದಿಮಾನವನ ಶಿಲಾಯುಧಗಳು ದೊರೆತಿರುವುದು ಪುಷ್ಠಿ ನೀಡಿವೆ. ಈ ಸ್ಥಳ ಇತಿಹಾಸ ಪೂರ್ವಕಾಲಕ್ಕೆ ಸೇರಿದ್ದು ಬೆಟ್ಟಕ್ಕೆ ಉತ್ತಮವಾದ ರಸ್ತೆ, ಕುಡಿಯುವ ನೀರು, ಇತ್ಯಾದಿಗಳನ್ನು ಅನುಷ್ಠಾನ ಮಾಡಬೇಕು ಅದರಂತೆ ಇತಿಹಾಸ ಕಾಲಕ್ಕೆ ಸಂಬAಧಿಸಿವೆ ಎಂಬುದನ್ನು ಸಂಸದರಿಗೆ ಮನವರಿಕೆ ಮಾಡಿಕೊಟ್ಟರು.
ಗುಮ್ಮನಾಯಕನ ಪಾಳ್ಯವು ಮಹತ್ತರ ಸ್ಥಾನವನ್ನು ಹೊಂದಿದ್ದು, ಗುಮ್ಮನಾಯಕನಪಾಳ್ಯದ ಪಾಳೇಗಾರರು ಈ ಭಾಗದಲ್ಲಿ ಅನೇಕ ಕೆರೆ ಕುಂಟೆ ಕಾಲುವೆಗಳನ್ನು ನಿರ್ಮಿಸಿ ನೀರಾವರಿ ವ್ಯವಸ್ಥೆಗೆ ನೀಡಿರುವ ಕೊಡುಗೆ ಅಪಾರವಾಗಿದೆ, ತೆರಿಗೆ ಪದ್ಧತಿ, ನ್ಯಾಯಾಡಳಿತ ಪದ್ಧತಿ, ಇತ್ಯಾದಿಗಳನ್ನು ಯಾವುದೇ ಸಾಮ್ರಾಟ್ರಿಗೂ ಕಡಿಮೆಯಾಗದ ರೀತಿಯಲ್ಲಿ ಅಳವಡಿಸಿಕೊಂಡು ಆಡಳಿತ ನಡೆಸಿರುವ ಹಗ್ಗಳಿಕೆಯಿದೆ, ಅದರಂತೆ ಈ ಪಾಳೇ ಗಾರರು ಕಲಾ ಜಗತ್ತಿಗೆ ನೀಡಿರುವ ಕೊಡುಗೆ ಅಪಾರ.ಪಾಳ್ಯದ ವ್ಯಾಪ್ತಿಯಲ್ಲಿ ಅನೇಕ ಗುಡಿಗೋಪುರಗಳನ್ನು, ವಿದ್ಯಾಕ್ಷೇತ್ರಗಳನ್ನು, ವೈದ್ಯಶಾಲೆ, ಕಲಾಶಾಲೆ ಇತ್ಯಾದಿಗಳನ್ನು ನೀಡಿದ್ದಾರೆ. ಒಟ್ಟಾರೆ ಈ ಭಾಗಕ್ಕೆ ಪಾಳೇಗಾರರು ನೀಡಿರುವ ಕೊಡುಗೆ ಸ್ಮರಣೀಯವಾಗಿದೆ. ಈ ಭಾಗದ ಎಲ್ಲಾ ಇತಿಹಾಸವನ್ನು ಈ ಕೃತಿಗಳು ಒಳಗೊಂಡಿದ್ದು, ದಯವಿಟ್ಟು ಓದಬೇಕೆಂದು ಮನವಿ ಮಾಡಿದರು.
ಈ ಹಿಂದೆ ದಿವಂಗತ ಜಿ.ವಿ.ಶ್ರೀರಾಮರೆಡ್ಡಿಯವರು ಶಾಸಕರಾಗಿದ್ದ ಸಂದರ್ಭದಲ್ಲಿ ನನ್ನ ಮನವಿಗೆ ಸ್ಪಂಧಿಸಿ, ಪಾಳ್ಯಕ್ಕೆ ಸುಗಮವಾದ ರಸ್ತೆ ವ್ಯವಸ್ಥೆ, ಪ್ರಪ್ರಥಮವಾಗಿ ಬಸ್ ಸಂಪರ್ಕ, ಬಾಲವನ, ಅತಿಥಿಗೃಹ, ದೋಣಿ ವಿಹಾರ ಕೇಂದ್ರ ಇತ್ಯಾದಿಗಳನ್ನು ಅಭಿವೃದ್ಧಿಪಡಿಸಿ, ಈ ಚಾರಿತ್ರಾ ತ್ಮಕ ಸ್ಥಳಕ್ಕೆ ಒಂದಷ್ಷು ಮೆರುಗು ನೀಡಿದ್ದರು. ಆನಂತರದ ದಿನಗಳಲ್ಲಿ ಜಿಲ್ಲಾಧಿಕಾರಿ ಅನಿರುದ್ಧಶ್ರವಣ್ ರವರು ಭೇಟಿ ನೀಡಿ, ಸುಮಾರು ೫೦ ಲಕ್ಷ ರೂ. ವೆಚ್ಚದಲ್ಲಿ ಕೋಟೆಗೆ ಕಾಯಕಲ್ಪ, ಮತ್ತಿತರೆ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದರು. ಮ್ಯೂಸಿಯಂ, ಕಲ್ಯಾಣಿಗಳಲ್ಲಿ ಹೂಳು ಎತ್ತುವುದು, ದೇವಾಲಯಗಳ ಜೀರ್ಣೋದ್ಧಾರ, ಕೋಟೆಯ ಬಳಿ ಕಾರಂಜಿ ಇತ್ಯಾದಿಗಳ ಅನುಷ್ಠಾನ ಮಾಡುವ ಯೋಜನೆ ರೂಪಿಸುತ್ತಿರುವ ಸಂದರ್ಭದಲ್ಲಿ ಅನಿರುದ್ಧಶ್ರವಣ್ ವರ್ಗಾವಣೆ ಆಗಿ, ಕೆಲಸಗಳು ನನೆಗುದಿಗೆ ಬಿದ್ದಿವೆ. ಆದ್ದರಿಂದ ತಾವು ಇತ್ತಾ ಗಮನಹರಿಸಿ ಈ ಐತಿಹಾಸಿಕ ಸ್ಥಳವನ್ನು ಅಭಿವೃದ್ಧಿ ಪಡಿಸಿದರೆ ಚಿತ್ರದುರ್ಗದಂತೆ ಒಂದು ಸುಂದರ ಪ್ರವಾಸಿ ತಾಣವಾಗುತ್ತದೆ ಜೊತೆಗೆ ಈ ಭಾಗದ ಒಂದಷ್ಷು ಜನತೆಗೆ ಬದುಕುವ ದಾರಿ ಸಿಗುತ್ತದೆ ಎಂದು ಮನವಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹರಿನಾಥರೆಡ್ಡಿ, ಕೋನಪರೆಡ್ಡಿ, ಗುಜ್ಜೇಪಲ್ಲಿ ಸುಧಾಕರ್ರೆಡ್ಡಿ, ಪ್ರೊ||ಕೆ.ಟಿ.ವೀರಾಂಜನೇಯ, ಜಿಂಕಪಲ್ಲಿ ಚಂದ್ರಶೇಖರರೆಡ್ಡಿ, ಪೆಟ್ರೋಲ್ಬಂಕ್ ಕೃಷ್ಣಾರೆಡ್ಡಿ ಮತ್ತಿತರೆ ಮುಖಂಡರು, ಪಂಚಾಯಿತಿ ವ್ಯಾಪ್ತಿಯ ಮುಖಂಡರು ನಾಗರೀಕರು ಹಾಜರಿದ್ದರು.