ಅಡಿಲೇಡ್: ಆಸ್ಟ್ರೇಲಿಯಾ(IND vs AUS) ವಿರುದ್ಧದ ಅಡಿಲೇಡ್ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಮೊದಲ ದಿನವಾದ ಶುಕ್ರವಾರದಂದು ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್(Mohammed Siraj) ಅವರು ಗಂಟೆಗೆ 181.6 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದೆ.
ಆಸ್ಟ್ರೇಲಿಯಾ ಬ್ಯಾಟಿಂಗ್ ಇನಿಂಗ್ಸ್ ವೇಳೆ ಮೊಹಮ್ಮದ್ ಸಿರಾಜ್ ಎಸೆದ ಇನಿಂಗ್ಸ್‌ನ 25ನೇ ಓವರ್‌ನ 5ನೇ ಎಸೆತ ಗಂಟೆಗೆ 181.6 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದಾಗಿ ಸ್ಕೋರ್‌ಬೋರ್ಡ್‌ನಲ್ಲಿ ತೋರಿಸಲಾಯಿತು. ಈ ವೇಳೆ ಎಲ್ಲರು ಎಂದು ಕ್ಷಣ ಅಚ್ಚರಿಗೆ ಒಳಪಟ್ಟರು. ಆದರೆ ವಾಸ್ತವದಲ್ಲಿ ಸಿರಾಜ್ 181.6 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿರಲಿಲ್ಲ. ಸ್ವಯಂಚಾಲಿತ ಸ್ಕೋರ್‌ಬೋರ್ಡ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಸಿರಾಜ್ 181.6 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದಾಗಿ ತಪ್ಪಾಗಿ ತೋರಿಸಲಾಗಿತ್ತು.
ಆಸ್ಟ್ರೇಲಿಯದ ಇನಿಂಗ್ಸ್‌ನ 25ನೇ ಓವರ್‌ನ ಕೊನೆಯ ಎಸೆತವನ್ನು ಬೌಲ್ ಮಾಡುವಾಗ ಮೊಹಮ್ಮದ್ ಸಿರಾಜ್ ಅವರನ್ನು ಮಾರ್ನಸ್ ಲಾಬುಶೇನ್ ಹಠಾತ್ತನೆ ನಿಲ್ಲಿಸಿದರು. ಇದರಿಂದ ಕೆರಳಿದ ಮೊಹಮ್ಮದ್ ಸಿರಾಜ್, ಮರ್ನಸ್ ಲಾಬುಶೇನ್ ಕಡೆಗೆ ಚೆಂಡನ್ನು ಬಲವಾಗಿ ಎಸೆದರು. ಈ ವೇಳೆ ಸಿರಾಜ್ ಮುಖದಲ್ಲಿ ಆಕ್ರೋಶ ಎದ್ದು ಕಾಣುತ್ತಿತ್ತು. ಬ್ಯಾಟಿಂಗ್‌ಗೆ ನೇರವಾಗಿ ಸ್ಕ್ರೀನ್ ಸಮೀಪ ಒಬ್ಬ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಲಾಬುಶೇನ್, ಬೌಲ್ ಮಾಡಲು ಬಡುತ್ತಿದ್ದ ಸಿರಾಜ್ ಅವರನ್ನು ತಡೆದರು. ಇದಾದ ಬಳಿಕ ಮುಂದಿನ ಎಸೆತದಲ್ಲಿ ಸಿರಾಜ್‌ಗೆ ಲಾಬುಶೇನ್ ಬೌಂಡರಿ ಬಾರಿಸಿದ್ದರು.
ಇದನ್ನೂ IND vs AUS: ಮಾರ್ನಸ್ ಲಾಬುಶೇನ್ ಕಡೆಗೆ ಚೆಂಡನ್ನು ಎಸೆದ ಮೊಹಮ್ಮದ್ ಸಿರಾಜ್! ವಿಡಿಯೊ
ಸ್ಟಾರ್ಕ್ ದಾಳಿಗೆ ನಲುಗಿದ ಭಾರತ 44.1 ಓವರ್‌ಗಳಲ್ಲಿ 180 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. ಬಳಿಕ ಇನಿಂಗ್ಸ್ ಆರಂಭಿಸಿದ ಆಸೀಸ್ ಸಾಧಾರಣ ಆರಂಭ ಪಡೆಯಿತು. ಎಡಗೈ ಬ್ಯಾಟರ್ ಉಸ್ಮಾನ್ ಖವಾಜ (13) ವಿಕೆಟ್ ಕಬಳಿಸಿದ ಬುಮ್ರಾ ಭಾರತಕ್ಕೆ ಮೊದಲ ಯಶಸ್ಸು ತಂದರು. ಆಗ ಜತೆಯಾದ ಮೆಕ್‌ಸ್ವೀನಿ ಹಾಗೂ ಮಾರ್ನಸ್ ಲಬುಶೇನ್ ಮುರಿಯದ 2ನೇ ವಿಕೆಟ್‌ಗೆ 133 ಎಸೆತಗಳಲ್ಲಿ 63 ರನ್ ಕಲೆಹಾಕಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಶನಿವಾರ ಮೊದಲ ಅವಧಿಯಲ್ಲೇ ಆತಿಥೇಯರನ್ನು ನಿಯಂತ್ರಿಸಿ ಪಂದ್ಯದಲ್ಲಿ ಕಂಬ್ಯಾಕ್ ಮಾಡುವ ಸವಾಲು ರೋಹಿತ್ ಶರ್ಮ ಬಳಗದ ಮುಂದಿದೆ.