Thursday, 12th December 2024

India: ಕ್ರಿಕೆಟ್‌ ಇತಿಹಾಸದಲ್ಲಿಯೇ ಅನಗತ್ಯ ಹ್ಯಾಟ್ರಿಕ್‌ ಹೆಗಲೇರಿಸಿಕೊಂಡ ಭಾರತ!

Team India complete unwanted hat-trick on December 8 in cricket history

ನವದೆಹಲಿ: 1983ರ ಜೂನ್ 25, 2007ರ ಸೆಪ್ಟೆಂಬರ್ 24, 2011ರ ಏಪ್ರಿಲ್ 2, 2024ರ ಜೂನ್‌ 29… ಇವು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕೆಲವು ಆಯ್ದ ದಿನಾಂಕಗಳು, ಅವು ಶಾಶ್ವತವಾಗಿ ಅಮರವಾಗಿವೆ. ಈ ವರ್ಷಗಳು ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಚಿನ್ನದ ನೆನಪುಗಳಂತಿವೆ. ಈ ದಿನಾಂಕಗಳಲ್ಲಿ ಭಾರತ (India) ವಿಶ್ವಕಪ್ ಗೆದ್ದಿತು. ಆದರೆ 2024ರ 8ನೇ ಡಿಸೆಂಬರ್ ಅಂದರೆ ಇಂದು ಭಾರತೀಯ ಕ್ರಿಕೆಟ್‌ನ ಕರಾಳ ದಿನ ಎಂದು ಕರೆಯಲಾಗುತ್ತಿದೆ. ಈ ‘ಕಪ್ಪು ಭಾನುವಾರ’ದಲ್ಲಿ ಟೀಮ್ ಇಂಡಿಯಾ ಮೂರು ಬಾರಿ ಸೋತಿದೆ. ಪುರುಷರು ಮತ್ತು ಮಹಿಳೆಯರ ನಂತರ, ಅಂಡರ್‌ 19 ಹುಡುಗರು ಕೂಡ ಸೋಲು ಅನುಭವಿಸಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿ ಆಡಲು ಭಾರತ ಪುರುಷರ ತಂಡ ಆಸ್ಟ್ರೇಲಿಯಾಕ್ಕೆ ತೆರಳಿದೆ. ಅಲ್ಲಿ ನಾವು ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ಇದಾದ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡವೂ ಆಸ್ಟ್ರೇಲಿಯಾ ಎದುರು ಸೋತಿತ್ತು. ಬ್ರಿಸ್ಬೇನ್ ಏಕದಿನ ಪಂದ್ಯದಲ್ಲಿ ನಮ್ಮ ಮಹಿಳಾ ತಂಡ 122 ರನ್‌ಗಳ ಸೋಲನ್ನು ಅನುಭವಿಸಿತು. ನಂತರ ಅಂಡರ್-19 ಏಷ್ಯಾಕಪ್‌ನ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ದ ಭಾರತ ತಂಡ ಸೋತಿದೆ.

ಡೇ-ನೈಟ್‌ ಟೆಸ್ಟ್‌ನಲ್ಲಿ ಭಾರತಕ್ಕೆ 10 ವಿಕೆಟ್‌ ಸೋಲು

ಆಸ್ಟ್ರೇಲಿಯಾ ತಂಡ ಎರಡನೇ ಹಾಗೂ ಪಿಂಕ್‌ ಬಾಲ್‌ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಭಾರತ ತಂಡವನ್ನು ಮಣಿಸಿದೆ. ಹಗಲು-ರಾತ್ರಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು, ಭಾನುವಾರ ಮೂರನೇ ದಿನದ ಮೊದಲ ಸೆಷನ್‌ನಲ್ಲಿ ಪಂದ್ಯವನ್ನು ಗೆದ್ದು ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಇದರೊಂದಿಗೆ ಪರ್ತ್‌ನಲ್ಲಿ ಆಸ್ಟ್ರೇಲಿಯಾ 295 ರನ್‌ಗಳ ನಿರಾಶಾದಾಯಕ ಸೋಲನುಭವಿಸಿತು. ಆಸ್ಟ್ರೇಲಿಯಕ್ಕೆ ಇದು 13 ಹಗಲು-ರಾತ್ರಿ ಟೆಸ್ಟ್‌ಗಳಲ್ಲಿ 12ನೇ ಜಯವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ಗುಲಾಬಿ ಚೆಂಡಿನೊಂದಿಗೆ ಆಸೀಸ್‌ಗೆ ಏಕೈಕ ಸೋಲು. ಅಡಿಲೇಡ್‌ನಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಎಲ್ಲಾ ಎಂಟು ಪಂದ್ಯಗಳನ್ನು ಗೆದ್ದಿದೆ.

ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡಕ್ಕೆ ಸೋಲು

ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧ 122 ರನ್‌ಗಳ ಬೃಹತ್ ಅಂತರದಿಂದ ಸೋತಿದೆ. ಈ ಮೂಲಕ ಆಸ್ಟ್ರೇಲಿಯಾ ಮಹಿಳಾ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಜಾರ್ಜಿಯಾ ವೋಲ್ ಮತ್ತು ಎಲಿಸ್ ಪೆರಿ ಅವರ ಶತಕಗಳ ಸಹಾಯದಿಂದ ಆಸ್ಟ್ರೇಲಿಯಾ ಈ ಗೆಲುವು ಪಡೆಯಿತು. ಆಸ್ಟ್ರೇಲಿಯಾ ಮೊದಲು ಬ್ಯಾಟ್‌ ಮಾಡಿ ಎಂಟು ವಿಕೆಟ್‌ಗೆ 371 ರನ್ ಗಳಿಸಿತು, ಇದು ಭಾರತದ ವಿರುದ್ಧದ ಗರಿಷ್ಠ ಸ್ಕೋರ್ ಆಗಿದೆ. ನಂತರ ಭಾರತವನ್ನು 45.5 ಓವರ್‌ಗಳಲ್ಲಿ 249 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಆಸ್ಟ್ರೇಲಿಯಾ ಸುಲಭ ಜಯ ದಾಖಲಿಸಿತು.

ಏಷ್ಯಾ ಕಪ್‌ ಫೈನಲ್‌ ಸೋತ ಭಾರತ ಅಂಡರ್‌-19 ತಂಡ

ದುಬೈನಲ್ಲಿ ನಡೆದಿದ್ದ ಅಂಡರ್‌ 19 ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 19 ವರ್ಷದೊಳಗಿನವರ ತಂಡ 59 ರನ್ ಗಳಿಂದ ಸೋತಿದೆ. ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಯಾಗಿದ್ದ ಭಾರತ 199 ರನ್‌ಗಳ ಗುರಿಯನ್ನು ಹೊಂದಿತ್ತು, ಆದರೆ 35.2 ಓವರ್‌ಗಳಲ್ಲಿ 139 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಬಾಂಗ್ಲಾದೇಶ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಸುದ್ದಿಯನ್ನು ಓದಿ: IND vs AUS: ರೋಹಿತ್‌ ಶರ್ಮಾ ವೈಫಲ್ಯಕ್ಕೆ ಕಾರಣ ತಿಳಿಸಿದ ಸುನೀಲ್‌ ಗವಾಸ್ಕರ್‌!