ಚೆನ್ನೈ: ತಮಿಳು ಚಿತ್ರರಂಗದ ಹೆಸರಾಂತ ನಟಿ ವಿ.ಜೆ.ಚಿತ್ರಾ ಆತ್ಮಹತ್ಯೆಗೆ ಶರಣಾಗಿದ್ದು, ಪಾಂಡಿಯನ್ ಸ್ಪೋರ್ಸ್ನಲ್ಲಿ ಮುಲ್ಲೈ ಪಾತ್ರದಲ್ಲಿ ಖ್ಯಾತಿಗಳಿಸಿದ್ದ ನಟಿಯ ಶವ ನಜರೆತ್ಪಟ್ಟೈನ ಪಂಚತಾರಾ ಹೋಟೆಲ್ನಲ್ಲಿ ಪತ್ತೆಯಾಗಿದೆ.
ಚಿತ್ರಾ ಇವಿಪಿ ಫಿಲಂ ಸಿಟಿಯಲ್ಲಿ ಶೂಟಿಂಗ್ ಮುಗಿಸಿ ತಮ್ಮ ಹೋಟೆಲ್ ಕೋಣೆಗೆ ಮರಳಿದ್ದರು ಎನ್ನಲಾಗಿದೆ. ಮೃತ ನಟಿಗೆ ಉದ್ಯಮಿ ಹೇಮಂತ್ ಎಂಬವರ ಜೊತೆ ವಿವಾಹ ಕೂಡ ನಿಶ್ಚಯವಾಗಿತ್ತು. ವಿಜೆ ಚಿತ್ರಾ ತಮಿಳು ಚಿತ್ರರಂಗದಲ್ಲಿ ವಿವಿಧ ಚಾನೆಲ್ಗಳ ನಿರೂಪಕರಾಗಿ ಕೆಲಸ ಮಾಡಿದ್ದಾರೆ.
ಪ್ರಸ್ತುತ ಪಾಂಡಿಯನ್ ಸ್ಟೋರ್ಸ್ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ವಿಜೆ ಚಿತ್ರಾ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎಂದು ಶಂಕಿಸಲಾಗಿದೆ. ಪ್ರತಿಭಾವಂತ ನಟಿ ನಿಧಕ್ಕೆ ಅಭಿಮಾನಿ ಬಳಗ ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲ ತಾಣದ ವೇದಿಕೆಗಳಲ್ಲಿ ಕಂಬನಿ ಮಿಡಿದಿದೆ.