-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿವಾಹಿತರು ಹಾಗೂ ಅವಿವಾಹಿತರು ಒಂದೇ ಫ್ಯಾಷನ್ ರ‍್ಯಾಂಪ್ ಮೇಲೆ ಭಾಗವಹಿಸಿದ್ದ, ಮಿಸ್ & ಮಿಸೆಸ್ ಇಂಡಿಯಾ ರೋಲ್ ಮಾಡೆಲ್ 2024 ಬ್ಯೂಟಿ ಪೇಜೆಂಟ್ (Fashion Pageant News), ಉದ್ಯಾನನಗರಿಯಲ್ಲಿ ವರ್ಣರಂಜಿತವಾಗಿ ಹಾಗೂ ಯಶಸ್ವಿಯಾಗಿ ನಡೆಯಿತು. ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ, ಸರಿ ಸುಮಾರು 60 ಕ್ಕೂ ಹೆಚ್ಚು ಮಾಡೆಲ್‌ಗಳು ಈ ಬ್ಯೂಟಿ ಪೇಜೆಂಟ್‌ನಲ್ಲಿ ಭಾಗವಹಿಸಿ, ನಾನಾ ರೌಂಡ್‌ಗಳಲ್ಲಿ ಪಾಲ್ಗೊಂಡರು. ಅತ್ಯಾಕರ್ಷಕ ಡಿಸೈನರ್‌ವೇರ್‌ಗಳನ್ನು ಧರಿಸಿದ್ದ, ಮಾಡೆಲ್‌ಗಳು ಜ್ಯೂರಿ ಸದಸ್ಯರ ಪ್ರತಿ ಪ್ರಶ್ನೆಗೆ ಉತ್ತರ ನೀಡಿ, ತಮ್ಮದೇ ಆದ ಟ್ಯಾಲೆಂಟ್ ಪ್ರದರ್ಶಿಸಿದರು.
ಮಿಸ್ ಇಂಡಿಯಾ ರೋಲ್ ಮಾಡೆಲ್ ವಿಜೇತರು
ಮಿಸ್ ಇಂಡಿಯಾ ರೋಲ್ ಮಾಡೆಲ್ ಟೈಟಲ್ ಹಾಗೂ ಕಿರೀಟವನ್ನು ಕ್ರಮವಾಗಿ ದೇವಾಂಶಿ, ಕವನಾ ಹಾಗೂ ಜೆನಿಫರ್ ತಮ್ಮ ಮುಡಿಗೇರಿಸಿಕೊಂಡರು.
ಮಿಸೆಸ್ ಇಂಡಿಯಾ ರೋಲ್ ಮಾಡೆಲ್ ಟೈಟಲ್ ವಿಜೇತರು
ಶಾಮಲಿ, ಸ್ವಾತಿ ಸಜ್ಜನ್, ಇಂದೂ, ವಿಂಧ್ಯಾ, ಸುಜಾತ, ಸ್ವಾತಿ ರಾಹುಲ್, ದಿವ್ಯಾ ಶೆಟ್ಟಿ ಕ್ರಮವಾಗಿ ನಾನಾ ಟೈಟಲ್‌ಗಳನ್ನು ತಮ್ಮದಾಗಿಸಿಕೊಂಡರು. ಇನ್ನು ಮಿಸೆಸ್ ಇಂಡಿಯಾ ಕ್ಲಾಸಿಕ್, ಸೂಪರ್ ಕ್ಲಾಸಿಕ್ ಹಾಗೂ ಕರ್ವಿ ಟೈಟಲ್ ಹಾಗೂ ಕಿರೀಟವನ್ನು, ಕ್ರಮವಾಗಿ ಡಾ. ರೂಪಾ, ಸಾರಾ ಹಾಗೂ ಜ್ಯೋತಿ ಮೆನನ್ ತಮ್ಮದಾಗಿಸಿಕೊಂಡು, ಸಂತೋಷಪಟ್ಟರು.
ನಂದಿನಿ ನಾಗರಾಜ್ ನೇತೃತ್ವದ ಬ್ಯೂಟಿ ಪೇಜೆಂಟ್
ಈ ಬ್ಯೂಟಿ ಪೇಜೆಂಟ್‌ನ ನೇತೃತ್ವ ವಹಿಸಿದ್ದ ನಂದಿನಿ ನಾಗರಾಜ್ ಮಾತನಾಡಿ, ಪ್ರತಿ ಮಹಿಳೆಯು ಮತ್ತೊಬ್ಬ ಮಹಿಳೆಗೆ ಸ್ಪೂರ್ತಿ ನೀಡಬೇಕು. ಈ ನಿಟ್ಟಿನಲ್ಲಿ ಮಿಸೆಸ್ ಇಂಡಿಯಾ ರೋಲ್ ಮಾಡೆಲ್ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿದೆ ಹಾಗೂ ಮಹಿಳೆಯರಲ್ಲಿನ ಟ್ಯಾಲೆಂಟ್ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುತ್ತಿದೆ ಎಂದರು.
ಈ ಸುದ್ದಿಯನ್ನೂ ಓದಿ | Winter Hoodie Fashion: ಚಳಿ-ಗಾಳಿಗೆ ಹೂಡಿ ಫ್ಯಾಷನ್ ತಮ್ಮದಾಗಿಸಿಕೊಳ್ಳಿ
ಪೇಜೆಂಟ್‌ನಲ್ಲಿ ಬ್ಯೂಟಿ ರಾಯಬಾರಿಗಳು
ಪೇಜೆಂಟ್‌ನಲ್ಲಿ ಮಿಸೆಸ್ ಗ್ಲೋಬಲ್ ಯೂನಿವರ್ಸ್ ಸವಿತಾ ರೆಡ್ಡಿ, ಮಿಸೆಸ್ ಇಂಡಿಯಾ ರಾಯಬಾರಿ ಸುಚಿತ್ರಾ ವೇಣುಗೋಪಾಲ್, ಕಾವ್ಯಾ, ಮಿಸೆಸ್ ಇಂಡಿಯಾ ವರ್ಲ್ವೈಡ್ ಶ್ವೇತಾ ನಿರಂಜನ್, ಶ್ವೇತಾ ಮಯೂರ, ಮಿಸೆಸ್ ಗ್ಲೋಬಲ್ ಯೂನಿವರ್ಸ್ ಸಪ್ನಾ ಸಾವಂತ್ ಅತಿಥಿಗಳಾಗಿ ಭಾಗವಹಿಸಿದ್ದರು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)