Saturday, 21st September 2024

ಪುಲ್ವಾಮಾ ಎನ್ಕೌಂಟರ್: ಮೂವರು ಉಗ್ರರ ಹತ್ಯೆ, ಓರ್ವ ನಾಗರೀಕ ಸಾವು

ಪುಲ್ವಾಮ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ಟಿಕನ್ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಬುಧವಾರ ನಡೆದ ಎನ್’ಕೌಂಟರ್’ನಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಜೊತೆಗೆ ಓರ್ವ ನಾಗರೀಕನಿಗೆ ಗಾಯವಾಗಿದೆ ಎಂದು ವರದಿ ತಿಳಿಸಿವೆ.

http://vishwavani.news/terrorist-killed-in-pulwama/

ಎನ್ ಕೌಂಟರ್ ನಡೆದ ಸ್ಥಳದಿಂದ ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಅವುಗಳ ಗುರುತು ಪತ್ತೆ ಕಾರ್ಯ ನಡೆ ಯುತ್ತಿದೆ. ಗುಂಡಿನ ಚಕಮಕಿಯಲ್ಲಿ ನಾಗರಿಕನೂ ಗಾಯಗೊಂಡಿದ್ದು, ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಜಂಟಿ ತಂಡ, ಸೇನೆಯ 55 ಆರ್ ಆರ್ ಮತ್ತು ಸಿಆರ್ ಪಿಎಫ್ ಜಂಟಿ ತಂಡ ಟಿಕೆನ್ ನಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ ನಂತರ ಎನ್ ಕೌಂಟರ್ ಆರಂಭವಾಯಿತು.