Sunday, 24th November 2024

ಫೋರ್ಬ್ಸ್ ಪಟ್ಟಿಯಲ್ಲಿ ನಿರ್ಮಲಾ, ರೋಷನಿ, ಕಿರಣ್ ಮಜುಂದಾರ್’ಗೆ ಸ್ಥಾನ

ನವದೆಹಲಿ: ಫೋರ್ಬ್ಸ್ ಪ್ರಕಟಿಸಿರುವ ವಿಶ್ವದ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎಚ್​ಸಿಎಲ್ ಕಾರ್ಪೊರೇಷನ್ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ರೋಷನಿ ನಾಡಾರ್ ಮಲ್ಹೋತ್ರಾ ಹಾಗೂ ಬಯೋಕಾನ್ ಸ್ಥಾಪಕಿ ಕಿರಣ್ ಮಜುಂದಾರ್ ಸತತ ಎರಡನೇ ವರ್ಷ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್ 2020ರ ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿ ಬಿಡುಗಡೆಯಾಗಿದ್ದು, ನಿರ್ಮಲಾ ಸೀತಾರಾಮನ್ ಕಳೆದ ವರ್ಷ ಏಳನೇ ಸ್ಥಾನದಲ್ಲಿ ಇದ್ದವರು ಈ ಬಾರಿ 41ಕ್ಕೆ, ರೋಷನಿ 55ಕ್ಕೆ, ಕಿರಣ್ 68ಕ್ಕೆ ಕುಸಿದಿದ್ದಾರೆ.

ಅಗ್ರಸ್ಥಾನದಲ್ಲಿ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಇದ್ದು, ಸತತವಾಗಿ 10 ವರ್ಷಗಳಿಂದಲೂ ಮೊದಲ ಸ್ಥಾನವನ್ನೇ ಕಾಯ್ದುಕೊಂಡಿದ್ದಾರೆ. 2006ರಿಂದ ನಂಬರ್ ಒನ್ ಸ್ಥಾನದಲ್ಲಿ ಇರುವ ಮರ್ಕೆಲ್, 2010ರಲ್ಲಿ ಮಾತ್ರ ಅಮೆರಿಕದ ಆಗಿನ ಪ್ರಥಮ ಮಹಿಳೆ ಮಿಷೆಲ್ ಒಬಾಮ ಅವರಿಗೆ ಅಗ್ರ ಸ್ಥಾನ ಬಿಟ್ಟುಕೊಟ್ಟಿದ್ದರು.

ಯುರೋಪಿಯರ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷೆ ಕ್ರಿಸ್ಟಿಯಾನ್ ಲಗರ್ಡೆ, ಯುಎಸ್ ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಇದ್ದಾರೆ. ಕಮಲಾ ಇದೇ ಮೊದಲ ಬಾರಿಗೆ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.