ಬೆಂಗಳೂರು: ‘ಜೋಡಿ ಹಕ್ಕಿ’, ‘ಭೂಮಿಗೆ ಬಂದ ಭಗವಂತ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ವೀಕ್ಷಕರ ಮೆಚ್ಚುಗೆ ಗಳಿಸಿದ್ದ ನಟ ತಾಂಡವ್ ರಾಮ್ (Thandav Ram) ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಬೇಕೆಂಬ ಕನಸು ಕಾಣುತ್ತಿದ್ದಾರೆ. ಅದರಂತೆ ಒಂದೊಳ್ಳೆ ಕಥೆ ಆಯ್ಕೆ ಮಾಡಿಕೊಂಡು ‘ದೇವನಾಂಪ್ರಿಯ’ ಸಿನಿಮಾ (Devanampriya Movie) ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.
‘ದೇವನಾಂಪ್ರಿಯ’ ಚಿತ್ರದಲ್ಲಿ ಬ್ಯುಸಿಯಾಗಿರುವ ಅವರ ಜನ್ಮದಿನದ ಪ್ರಯುಕ್ತ ವಿಶೇಷವಾಗಿ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಪೋಸ್ಟರ್ ಮೂಲಕ ಇದೊಂದು ಕೌಟುಂಬಿಕ ಚಿತ್ರ ಎನ್ನುವುದು ಸಾಬೀತಾಗಿದೆ. ʼದೇವನಾಂಪ್ರಿಯʼ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿದೆ. ಶೀಘ್ರದಲ್ಲೇ 2ನೇ ಹಂತದ ಚಿತ್ರೀಕರಣಕ್ಕೆ ಹೊರಡಲು ಚಿತ್ರತಂಡ ಸಜ್ಜಾಗಿದೆ. ಫ್ಯಾಮಿಲಿ ಹಾಗೂ ರಿವೇಂಜ್ ಕಥಾಹಂದರ ಹೊಂದಿರುವ ‘ದೇವನಾಂಪ್ರಿಯ’ ಸಿನಿಮಾ ಎ ಕ್ಯೂಬ್ ಫಿಲಂಸ್ ಸಂಸ್ಥೆಯ ಅಡಿಯಲ್ಲಿ ಮೂಡಿ ಬರಲಿದೆ.
ಹಿರಿಯ ನಟಿ ಉಮಾಶ್ರೀ, ತಾರಾ ಅನುರಾಧಾ, ಚರಣ್ ರಾಜ್, ವೀಣಾ ಸುಂದರ್, ಧರ್ಮ, ತಬಲಾ ನಾಣಿ, ರವಿಶಂಕರ್ ಸೇರಿದಂತೆ ಮತ್ತಿತರರು ತಾರಾಬಳಗದ ಚಿತ್ರದಲ್ಲಿದೆ. ಕಾರ್ತಿಕ್ ಶರ್ಮಾ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಚಿತ್ರಕ್ಕಿದೆ. ‘ಅಡಚಣೆಗಾಗಿ ಕ್ಷಮಿಸಿ’ ಮತ್ತು ‘ಮುಗಿಲ್ ಪೇಟೆ’ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಭರತ್ ಎಸ್. ನಾವುಂದ ಅವರ 3ನೇ ಸಿನಿಮಾ ಇದಾಗಿದೆ. ʼದೇವನಾಂಪ್ರಿಯʼ ಸಿನಿಮಾ ಕನ್ನಡ ಹಾಗೂ ತೆಲುಗು ಸೇರಿ ಎರಡು ಭಾಷೆಯಲ್ಲಿ ನಿರ್ಮಾಣವಾಗಲಿದೆ.
ಸ್ಯಾಂಡಲ್ವುಡ್ನಲ್ಲಿ ಸದ್ಯ ಹೊಸ ಅಲೆಗಳ ಚಿತ್ರಗಳು ಸದ್ದು ಮಾಡುತ್ತಿವೆ. ಕಥೆ ಆಧಾರಿತ ಸಿನಿಮಾಗಳು ತಯಾರಾಗುತ್ತಿದ್ದು, ʼದೇವನಾಂಪ್ರಿಯʼ ಕೂಡ ಅದೇ ಸಾಲಿಗೆ ಸೇರುತ್ತದೆ. ಇದು ಯಾವ ರೀತಿ ಗಮನ ಸೆಳೆಯುತ್ತದೆ ಎನ್ನುವುದು ಕಾದು ನೋಡಬೇಕಿದೆ.
ಈ ಸುದ್ದಿಯನ್ನೂ ಓದಿ: Actor Thandav Ram: ನಿರ್ದೇಶಕನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನ; ನಟ ತಾಂಡವ್ ರಾಮ್ ಅರೆಸ್ಟ್