ಬೆಂಗಳೂರು: ಟ್ರಾಫಿಕ್ ದಟ್ಟಣೆಯಲ್ಲಿ (Bengaluru traffic) ಬಾಕಿಯಾಗಿ ಮೃತಪಡುವ, ಆರೋಗ್ಯ ಸಮಸ್ಯೆ ಬಿಗಡಾಯಿಸುವ ರೋಗಿಗಳನ್ನು ಹೆಲ್ತ್ ಎಮರ್ಜೆನ್ಸಿ (Health Emergency) ಸ್ಥಿತಿಯಲ್ಲಿ ತುರ್ತು ಆಸ್ಪತ್ರೆಗೆ ಸೇರಿಸಲು ರಾಜ್ಯ ಸರ್ಕಾರ ಹೊಸ ಯೋಜನೆ ಮಾಡಿದೆ. ಅದರಂತೆ, ಏರ್ ಆಂಬ್ಯುಲೆನ್ಸ್ (Air Ambulance) ಬಳಸಲು ಮುಂದಾಗಿದೆ.
ಆರೋಗ್ಯ ಇಲಾಖೆ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು, ಇದೇ ಮೊದಲ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಮುಂದಾಗಿದೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಲಾಂಚ್ ಆಗಲಿದೆ. ಇಲ್ಲಿಗೆ ಏರ್ ಆಂಬ್ಯುಲೆನ್ಸ್ ಅಥವಾ ಹೆಲಿಕಾಪ್ಟರ್ ಮೂಲಕ ರೋಗಿಯನ್ನು ಶಿಫ್ಟ್ ಮಾಡುವುದು ಪ್ಲಾನು.
ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆ ಸಮಸ್ಯೆಯಿಂದಾಗಿಯೇ ಆಂಬ್ಯುಲೆನ್ಸ್ನಲ್ಲಿ ಅದೆಷ್ಟೋ ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನೊಂದಡೆ ಅಂಗಾಂಗ ದಾನದ ಸಂದರ್ಭದಲ್ಲಿ ಅಂಗಾಂಗವನ್ನು ಟ್ರಾಫಿಕ್ನಲ್ಲಿ ಸಾಗಿಸುವುದು ದೊಡ್ಡ ಸವಾಲಾಗಿದೆ. ಹೀಗಾಗಿ ಸರ್ಕಾರ ತುರ್ತು ಆರೋಗ್ಯ ಸೇವೆ ನೀಡಲು ಹೊಸ ಪ್ಲ್ಯಾನ್ ಮಾಡಿದ್ದು, ಹೆಲ್ತ್ ಎಮರ್ಜೆನ್ಸಿಗೆ ಏರ್ ಆಂಬ್ಯುಲೆನ್ಸ್ ಪರಿಚಯಿಸುವ ಬ್ಲ್ಯೂ ಪ್ರಿಂಟ್ ರೆಡಿ ಮಾಡಿದೆ.
ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆಯಲ್ಲಿ ರೋಗಿಗಳನ್ನು ಒಯ್ಯಲು ಸರ್ಕಾರ ಬೈಕ್ ಆಂಬ್ಯುಲೆನ್ಸ್ ಅನ್ನು ಕೂಡ ಪರಿಚಯಿಸಿತ್ತು. ಆದರೆ ಈ ಯೋಚನೆ ಸಮರ್ಪಕವಾಗಿ ಕಾರ್ಯಗತವಾಗಿಲ್ಲ. ಹೀಗಾಗಿ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಹೆಲಿಪ್ಯಾಡ್ ಮಾಡಲು ಸರ್ಕಾರ ಮುಂದಾಗಿದೆ. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಏರ್ ಆಂಬ್ಯುಲೆನ್ಸ್ ಮೂಲಕ ಸರ್ವಿಸ್ ನೀಡಲಾಗುತ್ತದೆ.
ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಸಂದರ್ಭದಲ್ಲಿ ತುರ್ತು ಆಸ್ಪತ್ರೆಗೆ ವರ್ಗಾಯಿಸಲು ಈ ಏರ್ ಆಂಬ್ಯುಲೆನ್ಸ್ ಸಾಕಷ್ಟು ಸಹಾಯಕವಾಗಲಿದೆ. ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಒಂದು ಸಾವಿರ ಬೆಡ್ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಇದರ ಮೇಲೆ ಹೆಲಿಪ್ಯಾಡ್ ಅಳವಡಿಸಿಕೊಳ್ಳಲು ಪ್ಲಾನ್ ಮಾಡಲಾಗುತ್ತಿದೆ.
ಇದನ್ನೂ ಓದಿ: Women Health: ಮಹಿಳೆ ಆರೋಗ್ಯದಲ್ಲಿದೆ ಸಮಾಜದ ಆರೋಗ್ಯ -ಡಾ.ಎಸ್.ಪರಮೇಶ್