Thursday, 12th December 2024

Viral Video: ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಕೈಯಿಂದ ಚಿನ್ನದ ಬಳೆಗಳನ್ನು ಕದ್ದ ಕಿಡಿಗೇಡಿ- ಶಾಕಿಂಗ್‌ ವಿಡಿಯೊ ವೈರಲ್‌

Viral Video

ಮುಂಬೈ : ಮುಂಬೈ ಕುರ್ಲಾ ಬಸ್ ಅಪಘಾತದ ನಂತರ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಅಪಘಾತದಲ್ಲಿ  ಮೃತ ಮಹಿಳೆಯ ಕೈಗಳಿಂದ ಕಿಡಿಗೇಡಿಯೋರ್ವ ಚಿನ್ನದ ಬಳೆಗಳನ್ನು ಕದಿಯುತ್ತಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಕನ್ನಿಸ್ ಅನ್ಸಾರಿ (55) ಎಂಬ ಮಹಿಳೆಯ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಕಳ್ಳನೊಬ್ಬ ಕದ್ದಿದ್ದು, ಈ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಈ ದೃಶ್ಯ ಎಲ್ಲೆಡೆ ವೈರಲ್‌(Viral Video) ಆಗಿದೆ.

ಅಪಘಾತದ ಸಮಯದಲ್ಲಿ ಈ ಕಳ್ಳತನ ಸಂಭವಿಸಿದ್ದು, ಅಪಘಾತವಾದ ಸ್ಥಳದಲ್ಲಿ ಗೊಂದಲ ಉಂಟಾಗಿದ್ದರಿಂದ ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳ ಮೃತ ಮಹಿಳೆಯ ಕೈಯಿಂದ ಬಳೆಗಳನ್ನು ಕಳ್ಳತನ ಮಾಡಿದ್ದಾನೆ ಎಂದು ವರದಿಯಾಗಿದೆ. ಮೃತ ಮಹಿಳೆಯ ದೇಹದಿಂದ ಚಿನ್ನದ ಬಳೆಗಳನ್ನು ತೆಗೆದುಕೊಳ್ಳುವ  ಮೂಲಕ ಕಳ್ಳನು ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸಿದ್ದಾನೆ ಎಂದು ತಿಳಿಸಿದ್ದಾರೆ. ಪೊಲೀಸರು ಅಪಘಾತ ಪ್ರಕರಣದ ಜೊತೆಗೆ ಕಳ್ಳತನದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮುಂಬೈನ ಕುರ್ಲಾದಲ್ಲಿ ಬೆಸ್ಟ್ ಬಸ್ ಚಾಲಕನ ಅತಿವೇಗದ ಚಾಲನೆಯಿಂದ ಪಾದಚಾರಿಗಳು ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದು, 42 ಜನರು ಗಾಯಗೊಂಡಿದ್ದಾರೆ.  ಬಸ್ಸಿನೊಳಗಿನ ಕ್ಯಾಮೆರಾದಲ್ಲಿ ಅಪಫಾತದ ದೃಶ್ಯ ಸೆರೆಯಾಗಿದೆ. ಕುರ್ಲಾ ನಿಲ್ದಾಣದಿಂದ ಸಕಿನಾಕಾಗೆ ತೆರಳುತ್ತಿದ್ದಾಗ ಇ-ಬಸ್ ಮೊದಲ ವಾಹನಕ್ಕೆ ಡಿಕ್ಕಿ ಹೊಡೆದು ಅಂತಿಮವಾಗಿ ಎಸ್‌ಜಿ ಬಾರ್ವೆ ರಸ್ತೆಯಲ್ಲಿರುವ ಹೌಸಿಂಗ್ ಸೊಸೈಟಿಯ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿದೆ.

ಜನರು ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಕೊನೆಗೆ ಪೊಲೀಸರು ಮತ್ತು ಸ್ಥಳೀಯ ವಕೀಲರು ಮಧ್ಯಪ್ರವೇಶಿಸಿ ಕೋಪಗೊಂಡ ಜನಸಮೂಹದಿಂದ ಹಲ್ಲೆಗೊಳಗಾದ ಚಾಲಕ ಮೋರೆ ಅವರ ಜೀವವನ್ನು ಉಳಿಸಿದ್ದಾರೆ. ಜನರ ಹಲ್ಲೆಯಿಂದ  ತಪ್ಪಿಸಿಕೊಳ್ಳಲು ಬಸ್ ಕಂಡಕ್ಟರ್ ಹತ್ತಿರದ ದಂತವೈದ್ಯರ ಚಿಕಿತ್ಸಾಲಯದಲ್ಲಿ ಅಡಗಿಕೊಂಡಿದ್ದನಂತೆ.

ಈ ಸುದ್ದಿಯನ್ನೂ ಓದಿ:ಒಂದೇ ದಿನ ಬರೋಬ್ಬರಿ 100 ಪುರುಷರೊಂದಿಗೆ ಲೈಂಗಿಕ ಕ್ರಿಯೆ- ಸೋಶಿಯಲ್‌ ಮೀಡಿಯಾ ಸ್ಟಾರ್‌ ಕೊನೆಗೆ ಅಳುತ್ತಾ ಹೇಳಿದ್ದೇನು?

ಒಲೆಕ್ಟ್ರಾ ನಿರ್ಮಿತ ಎಲೆಕ್ಟ್ರಿಕ್ ಬಸ್‍ನ ಬ್ರೇಕ್‍ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತನಿಖಾ ತಂಡವು ಕಂಡುಕೊಂಡಿದ್ದರೂ, ಸರಿಯಾದ ತರಬೇತಿಯ ಕೊರತೆ ಅಪಘಾತಕ್ಕೆ ಕಾರಣವಾಗಿದೆ ಎಂದು ಮುಂಬೈ ಆರ್‌ಟಿಒ ಅಧಿಕಾರಿಗಳು ಶಂಕಿಸಿದ್ದಾರೆ.