Thursday, 12th December 2024

Actor Rajinikanth: ಶ್ರೀ ರಜನಿ ದೇವಸ್ಥಾನದಲ್ಲಿ ರಜನಿಕಾಂತ್ ಪ್ರತಿಮೆ!

Actor Rajinikanth

ಚೆನ್ನೈ :ಕಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್(Actor Rajinikanth) ಅವರ 74ನೇ ಹುಟ್ಟುಹಬ್ಬದಂದು ಮಧುರೈನ ತಿರುಮಂಗಲಂನಲ್ಲಿರುವ “ಅರುಲ್ಮಿಗು ಶ್ರೀ ರಜನಿ ದೇವಸ್ಥಾನ”ದಲ್ಲಿ ಅವರ ಹೊಸ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಈ ಪ್ರತಿಮೆಯು ‘ಮಾಪಿಳ್ಳೈ’ ಚಿತ್ರದ ರಜನಿಕಾಂತ್ ಅವರ ಪಾತ್ರದಿಂದ ಸ್ಫೂರ್ತಿ ಪಡೆದು ಇದನ್ನು ಮಾಡಲಾಗಿದೆಯಂತೆ.

ನಿವೃತ್ತ ಸೇನಾಧಿಕಾರಿ ಕಾರ್ತಿಕ್ ಮೇಲ್ವಿಚಾರಣೆ ನಡೆಸುತ್ತಿರುವ ಈ ದೇವಾಲಯವು ರಜನಿಕಾಂತ್ ಅವರ ಅಭಿಮಾನಿಗಳಿಗೆ ನಟನಿಗೆ ಗೌರವ ಸಲ್ಲಿಸುವ ಸ್ಥಳವಾಗಿದೆ. ರಜನಿಕಾಂತ್ ಅವರ ಕಟ್ಟಾ ಅಭಿಮಾನಿಯಾದ ಕಾರ್ತಿಕ್, ಸೂಪರ್‌ ಸ್ಟಾರ್ ಮೇಲಿನ ಅತೀಯಾದ ಅಭಿಮಾನದಿಂದ ದೇವಾಲಯವನ್ನು ನಿರ್ಮಿಸಿದ್ದಾರೆ. ವರ್ಷಗಳಿಂದ, ಅವರು ದೇವಾಲಯದಲ್ಲಿ ದೈನಂದಿನ ಪ್ರಾರ್ಥನೆ ಮತ್ತು ವಿಶೇಷ ಪೂಜಾ ಸೇವೆಗಳನ್ನು ನಡೆಸುತ್ತಿದ್ದಾರಂತೆ.

ಕಾರ್ತಿಕ್ ಅವರ ಮನೆಯ ಮೇಲಿನ ಕೋಣೆಯಲ್ಲಿರುವ ಈ ದೇವಾಲಯದಲ್ಲಿ ರಜನಿಕಾಂತ್ ಅವರ ಚಿತ್ರಗಳು ಮತ್ತು ಪ್ರತಿಮೆಗಳನ್ನು ಕಾಣಬಹುದು. ಈ ವರ್ಷ, ರಜನಿಕಾಂತ್ ಅವರ 74 ನೇ ಹುಟ್ಟುಹಬ್ಬದ ಗೌರವಾರ್ಥವಾಗಿ, ಮಾಪಿಳ್ಳೈನಲ್ಲಿನ ನಟನ ಪಾತ್ರದಿಂದ ಸ್ಫೂರ್ತಿ ಪಡೆದ 3 ಅಡಿ ಎತ್ತರದ, 300 ಕೆಜಿ ತೂಕದ ಹೊಸ ಪ್ರತಿಮೆಯನ್ನು ಅನಾವರಣಗೊಳಿಸಿ ಹಿಂದಿನ ಪ್ರತಿಮೆಯನ್ನು ಬದಲಾಯಿಸಲಾಗಿದೆಯಂತೆ. ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಮತ್ತು ಆಚರಣೆಗಳನ್ನು ಯೋಜಿಸಲಾಗಿತ್ತು.

ಮಾಧ್ಯಮದ ಜೊತೆ ಮಾತನಾಡಿದ ಕಾರ್ತಿಕ್, “ರಜನಿಕಾಂತ್ ಅವರ 74 ನೇ ಹುಟ್ಟುಹಬ್ಬದ ನೆನಪಿಗಾಗಿ, ಸೂಪರ್‌ಸ್ಟಾರ್‌ ಅವರ ಹೊಸ 3 ಅಡಿ ಎತ್ತರ, 300 ಕೆಜಿ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಜನಿಕಾಂತ್ ಅವರ ಪ್ರತಿಮೆಯನ್ನು ಸ್ಥಾಪಿಸಿ ಪೂಜಿಸಲಾಗಿತ್ತು. ಈಗ ಹೊಸ ಪ್ರತಿಮೆಯನ್ನು ನಿರ್ಮಿಸಲಾಗಿದೆ” ಎಂದು ಹೇಳಿದ್ದಾರೆ.

ದೇವಾಲಯದಲ್ಲಿ ಆಚರಣೆಗಳ ಬಗ್ಗೆ ಮಾತನಾಡಿದ ಕಾರ್ತಿಕ್, “ಇಂದು, ಹೊಸ ಪ್ರತಿಮೆಗೆ ವಿಶೇಷ ಅಭಿಷೇಕ ಆಚರಣೆಗಳನ್ನು ನಡೆಸಲಾಯಿತು. ಕೆಲವು ತಿಂಗಳ ಹಿಂದೆ, ರಜನಿಕಾಂತ್ ಅವರ ಪಿಆರ್‌ಒ ದೇವಾಲಯದ ಬಗ್ಗೆ ವಿಚಾರಿಸಲು ನಮ್ಮನ್ನು ಸಂಪರ್ಕಿಸಿದ್ದಾರೆ.  ಅವರನ್ನು ಭೇಟಿ ಮಾಡಲು ಮತ್ತು ಅವರ ಆಶೀರ್ವಾದ ಪಡೆಯಲು ನಾವು ಕಾಯುತ್ತಿದ್ದೇವೆ. ಹುಟ್ಟುಹಬ್ಬದ ಶುಭಾಶಯಗಳು, ತಲೈವಾ!” ಎಂದಿದ್ದಾರೆ.

Actor Rajinikanth

ಈ ಸುದ್ದಿಯನ್ನೂ ಓದಿ:ಒಂದೇ ದಿನ ಬರೋಬ್ಬರಿ 100 ಪುರುಷರೊಂದಿಗೆ ಲೈಂಗಿಕ ಕ್ರಿಯೆ- ಸೋಶಿಯಲ್‌ ಮೀಡಿಯಾ ಸ್ಟಾರ್‌ ಕೊನೆಗೆ ಅಳುತ್ತಾ ಹೇಳಿದ್ದೇನು?

ಅಭಿಮಾನಿಗಳಿಂದ ತಲೈವಾ (ನಾಯಕ) ಎಂದು ಕರೆಯಲ್ಪಡುವ ರಜನಿಕಾಂತ್ ಭಾರತೀಯ ಚಿತ್ರರಂಗದ ಅತ್ಯಂತ ಪ್ರೀತಿಯ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರಾಗಿದ್ದಾರೆ. ನಾಲ್ಕು ದಶಕಗಳ ವೃತ್ತಿಜೀವನದಲ್ಲಿ, ಅವರು ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.