ಮುಂಬೈ: ಭಾರತೀಯ ಚಿತ್ರರಂಗದ (Indian cinema) ಮಹಾನ್ ನಟ ರಾಜ್ ಕಪೂರ್ (Raj Kapoor) ಅವರ ಜನ್ಮ ಶತಮಾನೋತ್ಸವದ (centenary) ಪ್ರಯುಕ್ತ ಕಪೂರ್ ಕುಟುಂಬದ ಸದಸ್ಯರು ಡಿ.10ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ, ರಾಜ್ ಕಪೂರ್ ಜನ್ಮ ಶತಮಾನತ್ಸವ ಕಾರ್ಯಕ್ರಮಕ್ಕೆ ಪ್ರದಾನಿಯವರಿಗೆ ಆಹ್ವಾನವನ್ನು ನೀಡಿದರು. ಈ ಸಂದರ್ಭದಲ್ಲಿ ಪ್ರದಾನಿ ಅವರು ಕಪೂರ್ ಕುಟುಂಬಸ್ಥರೊಂದಿಗೆ ಲೋಕಾಭಿರಾಮವಾಗಿ ಕೆಲ ಹೊತ್ತು ಮಾತನಾಡಿ, ಅವರೊಂದಿಗೆ ಒಂದಷ್ಟು ಸಮಯವನ್ನು ಕಳೆದರು.
ನಟ ರಾಜ್ ಕಪೂರ್ ಅವರ ಜನ್ಮಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಅವರ ಸಿನಿ ಪಯಣದ ಹೆಗ್ಗುರುತುಗಳನ್ನು ಸಂಭ್ರಮಿಸುವ ಸಲುವಾಗಿ ಏರ್ಪಡಿಸಲಾಗಿರುವ ಕಾರ್ಯಕ್ರಮಕ್ಕೆ ಕಪೂರ್ ಕುಟುಂಬ ಪ್ರದಾನಿಯವರನ್ನು ಆಹ್ವಾನಿಸಲು ಅವರನ್ನು ಭೇಟಿಯಾಗಿತ್ತು.
ಇದೀಗ ಕಪೂರ್ ಕುಟುಂಬಸ್ಥರೊಂದಿಗೆ ಪ್ರದಾನಿ ಮೋದಿ ಅವರ ಮಾತುಕೆಯ ಕೆಲವೊಂದು ವಿಶೇಷ ಕ್ಷಣಗಳ ವಿಡಿಯೋವನ್ನು ಇದೀಗ ಪ್ರದಾನ ಮಂತ್ರಿಗಳ ಕಚೇರಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಪ್ರದಾನಿಯವರು ರಾಜ್ ಕಪೂರ್ ಕುಟುಂಬಸ್ಥರೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ಸಂದರ್ಭದಲ್ಲಿ ಭಾರತಿಯ ಚಿತ್ರರಂಗಕ್ಕೆ ರಾಜ್ ಕಪೂರ್ ಅವರ ಅಮೂಲ್ಯ ಕೊಡುಗೆಯನ್ನು ಪ್ರದಾನಿ ಮೋದಿ ಅವರು ಸ್ಮರಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಒಂದು ಹಾಸ್ಯದ ಘಟನೆಯೂ ನಡೆದು ಹೋಗಿದ್ದು, ಆ ಘಟನೆ ಇದೀಗ ವೈರಲ್ ಆಗುತ್ತಿದೆ. ರಾಜ್ ಕಪೂರ್ ಅವರ ಮಗಳು ರೀಮಾ ಜೈನ್ ಅವರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಪ್ರದಾನಿ ಅವರು ‘ಕಟ್’ ಎಂದು ಹೇಳಿದ್ದು ಕ್ಷಣಕಾಲ ಅಲ್ಲಿದ್ದವರನ್ನು ತಬ್ಬಿಬ್ಬಾಸಿಗಿತು.
ಕಪೂರ್ ಕುಟುಂಬದ ಸದಸ್ಯರು ಪ್ರದಾನಿ ಮೋದಿ ಅವರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ, ರೀಮಾ ಜೈನ್ ಅವರು ಪ್ರದಾನಿ ಅವರೊಂದಿಗೆ ಮಾತುಕತೆ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಲು ತಡವರಿಸುತ್ತಾ, ‘ಆದರಣೀಯ ಪ್ರದಾನ ಮಂತ್ರಿ ನರೇಂದ್ರ ಮೋದಿಜಿ..’ ಎಂದು ಹೇಳುತ್ತಿದ್ದಂತೆ, ಪ್ರದಾನಿಯವರು ‘ಕಟ್’ ಎಂದು ಹೇಳುತ್ತಾರೆ. ಇದು ಅಲ್ಲಿದ್ದವರನ್ನು ಒಮ್ಮೆಗೆ ತಬ್ಬಿಬ್ಬಾಗಿಸಿತು. ಆದರೆ ಪ್ರಧಾನಿ ಅವರು ಬಳಿಕ ನಕ್ಕು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಕಪೂರ್ ಕುಟುಂಬ ಸದಸ್ಯರೊಂದಿಗಿನ ಮಾತುಕತೆಯ ಸಂದರ್ಭದಲ್ಲಿ ಪ್ರದಾನಿ ಮೋದಿ ಅವರು, ರಾಜ್ ಕಪೂರ್ ಅವರ ಸಿನಿ ಜರ್ನಿಯ ಬಗ್ಗೆ ಹಾಗೂ ಅವರ ಜೀವನದ ಬಗ್ಗೆ ಒಂದು ಸಿನೆಮಾ ಮಾಡುವಂತೆ ಸಲಹೆ ನೀಡಿದರು. ಈ ಚಿತ್ರ ಕೇವಲ ಭಾರತವನ್ನು ಕೇಂದ್ರೀಕರಿಸಿ ಮಾತ್ರವಲ್ಲ, ಬದಲಾಗಿ ಮಧ್ಯ ಏಷ್ಯಾವನ್ನು ಕೇಂದ್ರಿಕರಿಸಿ ನಿರ್ಮಿಸುವಂತೆಯೂ ಪ್ರದಾನಿಯವರು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.
ಚಿತ್ರರಂಗದ ಲೆಜೆಂಡ್ ರಾಜ್ ಕಪೂರ್ ಅವರ ಸಾಧನೆ-ಸಾಹಸಗಳ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವಂತಹ ಕಾರ್ಯ ಈ ಮೂಲಕ ನಡೆಯಬೇಕು ಎಂದೂ ಪ್ರದಾನಿಯವರು ಇದೇ ಸಂದರ್ಭದಲ್ಲಿ ಹೇಳಿದರು.
ಜಗತ್ತಿನಾದ್ಯಂತ ಪ್ರಿತಿ ಮತ್ತು ಆದರಗಳನ್ನು ಪಡೆದುಕೊಂಡಿರುವ ರಾಜ್ ಕಪೂರ್ ಅವರನ್ನು ‘ಸಾಂಸ್ಕೃತಿಕ ರಾಯಭಾರಿ’ ಎಂದು ಬಣ್ಣಿಸಿದ ರಿಮಾ ಕಪೂರ್, ಪ್ರದಾನಿ ನರೇಂದ್ರ ಮೋದಿ ಅವರನ್ನು ಭಾರತದ ‘ಜಾಗತಿಕ ರಾಯಭಾರಿ’ ಎಂದು ಬಣ್ಣಿಸಿದರು. ಹಾಗೂ ಕಪೂರ್ ಕುಟುಂಬ ಪ್ರದಾನಿ ಮೋದಿ ಅವರ ಬಗ್ಗೆ ಹೆಮ್ಮೆಯನ್ನು ಹೊಂದಿದೆ ಎಂದೂ ಹೇಳಿದರು.