ಬೆಂಗಳೂರು: ಜಾಮೀನು (Bail) ಯಾವಾಗ ಸಿಗುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡಗೆ (Pavithra Gowda) ಕೊನೆಗೂ ಜಾಮೀನು ದೊರೆತಿದೆ. ಆದರೆ ಜೈಲಿನಿಂದ ಬಿಡುಗಡೆ ಆಗಲು ಸೋಮವಾರದವರೆಗೂ ಕಾಯಬೇಕಿದೆ. ಅತ್ತ ದರ್ಶನ್ (Actor Darshan) ಬೆನ್ನಿನ ಸರ್ಜರಿ ಪ್ರಕ್ರಿಯೆಗೆ ವೈದ್ಯರು ಮುಂದಾಗಿದ್ದಾರೆ.
ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಡಿಸೆಂಬರ್ 13)ರಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ಧ ನಟ ದರ್ಶನ್ ಇತ್ತೀಚೆಗಷ್ಟೇ ಬೆನ್ನು ನೋವು ಹಿನ್ನೆಲೆ ಸರ್ಜರಿಗೆಂದು ಹೈಕೋರ್ಟ್ ಮಧ್ಯಂತರ ಜಾಮೀನಿನ ಮೇಲೆ ಹೊರಗಡೆ ಬಂದಿದ್ದರು. ಇದರ ನಡುವೆಯೇ ಜಾಮೀನಿಗಾಗಿ ದರ್ಶನ್ ಹೋರಾಟ ನಡೆಸಿದ್ದು, ಕೊನೆಗೂ ದರ್ಶನ್ ಪವಿತ್ರಾ ಗೌಡ ಸೇರಿ 7 ಮಂದಿಗೆ ಜಾಮೀನು ಮಂಜೂರು ಮಾಡಿದೆ.
ಇವರು ಹೊರಗಡೆ ಬರಬೇಕೆಂದರೆ ತಲಾ ಇಬ್ಬರು ಶ್ಯೂರಿಟಿ ನೀಡಬೇಕಿದೆ. ಆದರೆ ಶ್ಯೂರಿಟಿ ಪ್ರಕ್ರಿಯೆ ಮುಗಿಸಿ ಬಿಡುಗಡೆ ಪತ್ರ ಜೈಲಿನ ಅಧಿಕಾರಿಗಳ ಕೈ ಸೇರಲು ಪವಿತ್ರಾ ಗೌಡ ಹಾಗೂ ಇನ್ನುಳಿದ ಆರೋಪಿಗಳು ಸೋಮವಾರದವರೆಗೂ ಕಾಯಬೇಕಾಗುತ್ತದೆ. ಯಾಕೆಂದರೆ, ಶನಿವಾರ ಹಾಗೂ ಭಾನುವಾರ ರಜೆ ಇದೆ. ಇಂದು ಶನಿವಾರ ಹಾಗೂ ಡಿಸೆಂಬರ್ 15ರಂದು ಭಾನುವಾರ ಕೋರ್ಟ್ ಪ್ರೋಸಿಜರ್ ಆಗುವುದಿಲ್ಲ. ಈ ಹಿನ್ನೆಲೆ ಪವಿತ್ರಾ ಗೌಡ ಸೋಮವಾರವೇ ಜೈಲಿನಿಂದಲೇ ಬಿಡುಗಡೆಯಾಗಲಿದ್ದಾರೆ.
ನಟ ದರ್ಶನ್ ಈಗಾಗಲೇ ಸರ್ಜರಿಗೆಂದು ಮಧ್ಯಂತರ ಜಾಮೀನಿನ ಮೇಲೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿದ್ದಾರೆ. ಹೈಕೋರ್ಟ್ ಜಾಮೀನು ಮಂಜೂರು ಆಗಿರುವ ವಿಚಾರ ತಿಳಿದ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಸಂತಸಪಟ್ಟಿದ್ದಾರೆ. ಕಳೆದ 7 ತಿಂಗಳಿನಿಂದ ಜೈಲಿನಲ್ಲಿರುವ ಪವಿತ್ರಾ ಜಾಮೀನಿಗಾಗಿ ತುಂಬಾ ಪರದಾಡಿದ್ದರು. ಅವರು ಸಿಂಗಲ್ ಪೇರೆಂಟ್ ಎಂಬ ವಿಷಯವನ್ನಿಟ್ಟುಕೊಂಡು ಪವಿತ್ರಾ ಗೌಡ ಪರ ವಕೀಲರು ವಾದ ಮಂಡಿಸಿದ್ದರು.
ಇದನ್ನೂ ಓದಿ: Actor Darshan: ನಟ ದರ್ಶನ್, ಪವಿತ್ರಾ ಗೌಡಗೆ ಬಿಗ್ ರಿಲೀಫ್; ಹೈಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು