ಬೆಂಗಳೂರು: ಭಾನುವಾರ ನಡೆದ ಮೂರನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಮಿನಿ ಹಾರಾಜಿನಲ್ಲಿ ಸಿಮ್ರಾನ್ ಶೇಖ್ ಗರಿಷ್ಠ 1.90 ಕೋಟಿ, 16 ವರ್ಷದ ಜಿ. ಕಮಲಿನಿ 1.60 ಕೋಟಿ ರೂ. ಪಡೆದು ಗಮನ ಸೆಳೆದರು. ಅನುಭವಿ ಆಟಗಾರ್ತಿಯರು ಈ ಬಾರಿ ಅನ್‌ಸೋಲ್ಡ್ ಆಗಿದ್ದು ಅಚ್ಚರಿಗೆ ಕಾರಣವಾಯಿತು. 5 ತಂಡಗಳು 19 ಸ್ಥಾನ ತುಂಬಿಸಲು ಪೈಪೋಟಿ ನಡೆಸಿದ ಸಣ್ಣ ಮಟ್ಟದ ಹರಾಜು ಪ್ರಕ್ರಿಯೆ(WPL Auction 2025) ಇದಾಗಿತ್ತು.
ದುಬಾರಿ ಮೊತ್ತ ಪಡೆದ ತಂಡ ಸೇರಿದರು. ಕಣದಲ್ಲಿ ಒಟ್ಟು 120 ಆಟಗಾರ್ತಿಯರಿದ್ದರು. ಇದರಲ್ಲಿ 91 ಮಂದಿ ಭಾರತೀಯರು, 29 ಮಂದಿ ವಿದೇಶಿಯರು ಸೇರಿದ್ದರು. ಸಿಮ್ರಾನ್ ಶೇಖ್ ಗರಿಷ್ಠ 1.90 ಕೋಟಿ ಮೊತ್ತ ಪಡೆದು ಗುಜರಾತ್ ಟೈಟಾನ್ಸ್ ತಂಡ ಸೇರಿದರು. ಜತೆಗೆ ಮಿನಿ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದ ಆಟಗಾರ್ತಿ ಎನ್ನುವ ಹಿರಿಮೆಗೂ ಪಾತ್ರರಾದರು.
ಗರಿಷ್ಠ 50 ಲಕ್ಷ ಮೂಲ ಬೆಲೆ ಹೊಂದಿದ್ದ ಇಂಗ್ಲೆಂಡ್ ತಂಡದ ನಾಯಕಿ ಹೀದರ್ ನೈಟ್ ಅನ್ ಸೋಲ್ಡ್ ಆದರು. ಭಾರತ ತಂಡದ ಅನುಭವಿ ಆಲ್‌ರೌಂಡರ್ ಸ್ನೇಹಾ ರಾಣಾ ಕೂಡ ಖರೀದಿಯಾಗದ್ದು ಅಚ್ಚರಿ ಮೂಡಿಸಿತು. ಅನ್‌ಕ್ಯಾಪ್ಡ್ ಆಟಗಾರ್ತಿಯರಾದ ತಮಿಳುನಾಡಿನ 16 ವರ್ಷದ ಬ್ಯಾಟರ್ ಜಿ. ಕಮಲಿನಿ 1.60 ಕೋಟಿ ರೂ. ಪಡೆದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸೇರಿದರೆ, ಆರ್‌ಸಿಬಿ ಪ್ರೇಮಾ ರಾವತ್ ಅವರನ್ನು 1.20 ಕೋಟಿ ನೀಡಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಉಭಯ ಆಟಗಾರ್ತಿಯರು ತಲಾ 10 ಲಕ್ಷ ಮೂಲ ಬೆಲೆ ಹೊಂದಿದ್ದರು. ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಕರ್ನಾಟಕ ನಾಲ್ವರು ಆಟಗಾರ್ತಿಯರ ಪೈಕಿ ನಿಕ್ಕಿ ಪ್ರಸಾದ್ ಮಾತ್ರ ಹರಾಜಾದರು. ಮೂಲ ಬೆಲೆ 10 ಲಕ್ಷ ರೂ. ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾದರು.
ಗರಿಷ್ಠ ಮೊತ್ತ ಪಡೆದ ಆಟಗಾರ್ತಿಯರು
ಶಿಮ್ರಾನ್ ಶೇಖ್-1.90 ಕೋಟಿ(ಗುಜರಾತ್ ಜೈಂಟ್ಸ್)
ಡಿಯೆಂಡ್ರಾ ಡಾಟಿನ್-1.70 ಕೋಟಿ(ಗುಜರಾತ್ ಜೈಂಟ್ಸ್)
ಜಿ.ಕಲಮಿನಿ-1.60 ಕೋಟಿ(ಮುಂಬೈ ಇಂಡಿಯನ್ಸ್)
ಪ್ರೇಮಾ ರಾವತ್-1.20 ಕೋಟಿ(ಆರ್‌ಸಿಬಿ)
ಇದನ್ನೂ ಓದಿ WPL Auction 2025: ಕೋಟಿ ಮೊತ್ತ ಜೇಬಿಗಿಳಿಸಿ ಕಮಾಲ್ ಮಾಡಿದ 16 ವರ್ಷದ ಕಮಲಿನಿ
ಹರಾಜಿನಲ್ಲಿ ಖರೀದಿಯಾದ ಆಟಗಾರ್ತಿಯರು
ಗುಜರಾತ್ ಜೈಂಟ್ಸ್: ಸಿಮ್ರಾನ್ ಶೇಖ್(1.90 ಕೋಟಿ), ಡಿಯಾಂಡ್ರಾ ಡಾಟಿನ್(1.70 ಕೋಟಿ), ಪ್ರಕಾಶಿಕಾ ನಾಯಕ್(10 ಲಕ್ಷ),ಡೇನಿಯಲ್ ಗಿಬ್ಸನ್(30 ಲಕ್ಷ).
ಆರ್‌ಸಿಬಿ: ಪ್ರೇಮಾ ರಾವತ್(1.20 ಕೋಟಿ), ರಾಘ್ವಿ ಬಿಸ್ಟ್(10 ಲಕ್ಷ), ಜಾಗ್‌ರವಿ ಪವಾರ್(10 ಲಕ್ಷ), ಜೋಶಿತಾ ವಿಜೆ(10 ಲಕ್ಷ).
ಮುಂಬೈ ಇಂಡಿಯನ್ಸ್: ಜಿ.ಕಮಲಿನಿ(1.60 ಕೋಟಿ), ನಾಡಿನ್ ಡಿ ಕ್ಲರ್ಕ್(30 ಲಕ್ಷ),ಸಂಸ್ಕೃತಿ ಗುಪ್ತಾ(10 ಲಕ್ಷ), ಅಕ್ಷಿತಾ ಮಹೇಶ್ವರಿ(20 ಲಕ್ಷ).
ಡೆಲ್ಲಿ ಕ್ಯಾಪಿಟಲ್ಸ್: ಎನ್ ಚರಣಿ(55 ಲಕ್ಷ),ನಂದಿನಿ ಕಶ್ಯಪ್(10 ಲಕ್ಷ),ಸಾರಾ ಬ್ರೈಸ್(10 ಲಕ್ಷ),ನಿಕ್ಕಿ ಪ್ರಸಾದ್(10 ಲಕ್ಷ)
ಯುಪಿ ವಾರಿಯರ್ಸ್: ಅಲಾನಾ ಕಿಂಗ್( 30 ಲಕ್ಷ),ಅರುಷಿ ಗೋಸ್(10 ಲಕ್ಷ ),ಕ್ರಾಂತಿ ಗೌಡ್(10 ಲಕ್ಷ).