ನವದೆಹಲಿ: ದೇಶವು ತುರ್ತು ಪರಿಸ್ಥಿತಿಯನ್ನು(Emergency Situation) ಎದುರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಭಾಷಣ ಮಾಡುವುದನ್ನು ಬಿಟ್ಟು ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಮಾಜಿ ಕುಸ್ತಿಪಟು ಮತ್ತು ಕಾಂಗ್ರೆಸ್ ಶಾಸಕಿ ವಿನೇಶ್ ಫೋಗಟ್(Vinesh Phogat) ಹೇಳಿದ್ದಾರೆ.
Wrestler-turned-politician #VineshPhogat called for nationwide participation in the farmers' protest at the Khanauri border in #Haryana. The Congress leader joined the protest at the border
— The Times Of India (@timesofindia) December 15, 2024
Know more🔗https://t.co/VPE0tU9ZOC pic.twitter.com/rJYuseu2mx
ಪಂಜಾಬ್ ರೈತರ ಪ್ರತಿಭಟನೆ ಮುಂದುವರಿದಿದ್ದು, ಖಾನೌರಿ ಗಡಿಯಲ್ಲಿ( Khanauri Border) ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್(Jagjit Singh Dallewal) ಅವರನ್ನು ವಿನೇಶ್ ಫೋಗಟ್ ಭಾನುವಾರ (ಡಿ. 15) ಭೇಟಿಯಾಗಿದ್ದಾರೆ. ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಫೋಗಟ್ “ದಲ್ಲೆವಾಲ್ ಇತರರಿಗಾಗಿ ತನ್ನ ಪ್ರಾಣವನ್ನು ಪಣಕ್ಕಿಡಲು ಸಿದ್ಧರಿದ್ದಾರೆ. ಪಂಜಾಬ್, ಹರಿಯಾಣ ಮತ್ತು ಇಡೀ ದೇಶದ ಜನತೆ ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ನಾನು ಕೋರುತ್ತೇನೆ. ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಪರಿಸ್ಥಿತಿ ಇದೆ. ಸರ್ಕಾರವು ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು. ನಮ್ಮ ಪ್ರಧಾನಿ ದೊಡ್ಡ ಭಾಷಣಗಳನ್ನು ಮಾಡುತ್ತಾರೆ. ನಿನ್ನೆ ಸಂಸತ್ತಿನಲ್ಲೂ ಉದ್ದುದ್ದ ಭಾಷಣ ಮಾಡಿದರು. ಭಾಷಣವನ್ನು ಹೊರತುಪಡಿಸಿ ಏನಾದರೂ ಮಾಡಬೇಕಾಗಿದೆ. ಅವರು ಸಮಸ್ಯೆಗಳಿಗೆ ಪರಿಹಾರ ನೀಡಬೇಕು ” ಎಂದು ಹೇಳಿದ್ದಾರೆ.
ನಾಳೆ ಟ್ರ್ಯಾಕ್ಟರ್ ಜಾಥಾ
ಕೇಂದ್ರ ಸರ್ಕಾರದ ವಿರುದ್ದ ಪಂಜಾಬ್ ರೈತರ ಪ್ರತಿಭಟನೆ ಮುಂದುವರಿದಿದ್ದು, ಶಂಭು ಗಡಿಯಿಂದ ದೆಹಲಿಗೆ ಮೂರು ಬಾರಿ ಪಾದಯಾತ್ರೆ ವಿಫಲವಾದ ನಂತರ ಇದೀಗ ರೈತ ಮುಖಂಡರು ಹೊಸ ತಂತ್ರ ರೂಪಿಸಿದ್ದಾರೆ ಎಂಬ ಮಾಹಿತಿಯಿದೆ. ಡಿಸೆಂಬರ್ 16ರಂದು ಅಂದರೆ ನಾಳೆ ಟ್ರ್ಯಾಕ್ಟರ್ ಜಾಥಾ ನಡೆಯಲಿದೆ ಎಂದು ರೈತ ಮುಖಂಡರೊಬ್ಬರು ತಿಳಿಸಿದ್ದಾರೆ. ಈ ಅವಧಿಯಲ್ಲಿ, ಪಂಜಾಬ್ ಹೊರತುಪಡಿಸಿ ಇಡೀ ದೇಶದಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಸುವಂತೆ ಕರೆ ನೀಡಲಾಗಿದೆ. ಇನ್ನು ಡಿಸೆಂಬರ್ 18ರಂದು ಮಧ್ಯಾಹ್ನ 12ರಿಂದ 3 ಗಂಟೆ ತನಕ ರೈಲುಗಳನ್ನು ತಡೆದು ರೈಲು ರೋಕೋ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ದೆಹಲಿಗೆ ಪಾದಯಾತ್ರೆ ನಡೆಸುವ ಮುಂದಿನ ತಂಡದಲ್ಲಿ ಹರಿಯಾಣದ ರೈತರು ಮತ್ತು ಮಹಿಳೆಯರೂ ಇರುತ್ತಾರೆ ಎನ್ನಲಾಗಿದೆ.
ಜಗಜಿತ್ ಸಿಂಗ್ ದಲ್ಲೆವಾಲ್ ಆಮರಣಾಂತರ ಉಪವಾಸ ಸತ್ಯಾಗ್ರಹ
ದೆಹಲಿಯ ಖನ್ನೌರಿ ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಸತತ 20ನೇ ದಿನವೂ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ. ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯರು ಮೆಡಿಕಲ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ. ಈ ನಡುವೆ, ದಲ್ಲೆವಾಲ್ ಅವರ ಆರೋಗ್ಯದ ಕಡೆಗೆ ಗಮನಹರಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. “ಸರ್ಕಾರದ ತಪ್ಪು ನೀತಿಗಳಿಂದ ಆತ್ಮಹತ್ಯೆಗೆ ಒಳಗಾಗುವ ರೈತರ ಜೀವನವು ನನ್ನ ಜೀವನಕ್ಕಿಂತ ಹೆಚ್ಚು ಮೌಲ್ಯ ಉಳ್ಳದ್ದು ಎಂದು ನಾನು ನಂಬುತ್ತೇನೆ. ಕಳೆದ 25 ವರ್ಷಗಳಲ್ಲಿ 5 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂಬುದನ್ನು ಅವರು ನೆನಪಿಸಿದ್ದಾರೆ. ಈ ಮಧ್ಯೆ ಭಾರತೀಯ ಕಿಸಾನ್ ಯೂನಿಯನ್ ಜೊತೆಗೆ ಸಂಬಂಧಿಸಿದ ರೈತರು ಸಭೆ ನಡೆಸಿ ಖಾನೌರಿ ಗಡಿ ತಲುಪಿ, ಪ್ರತಿಭಟನೆಗೆ ಕೈಜೋಡಿಸಲು ನಿರ್ಧರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Mani Shankar Aiyar: ‘ನನ್ನ ರಾಜಕೀಯ ಜೀವನದ ಹುಟ್ಟು- ಸಾವು ಎರಡಕ್ಕೂ ಗಾಂಧಿ ಕುಟುಂಬವೇ ಕಾರಣʼ; ಮಣಿಶಂಕರ್ ಅಯ್ಯರ್ ಮತ್ತೆ ವಿವಾದ