ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹನ್ನೆರಡನೇ ವಾರಕ್ಕೆ ಕಾಲಿಟ್ಟಿದೆ. ಬರಬರುತ್ತಾ ಟಾಸ್ಕ್ ಕಠಿಣವಾಗುತ್ತಾ ಸಾಗುತ್ತಿದ್ದು, ಇನ್ಮುಂದೆ ಸ್ಪರ್ಧಿಗಳಿಗೆ ನೈಜ್ಯ ಪರೀಕ್ಷೆ ಶುರುವಾಗಲಿದೆ. ಇದರ ನಡುವೆ ಭಾನುವಾರ ಅನೇಕ ಆಘಾತಕಾರಿ ಘಟನೆ ನಡೆಯಿತು. ಮುಖ್ಯವಾಗಿ ಫೈನಲ್ ಸ್ಪರ್ಧಿ ಅಂದುಕೊಂಡಿದ್ದ ಶಿಶಿರ್ ಶಾಸ್ತ್ರೀ ಅಚ್ಚರಿ ಎಂಬಂತೆ ಬಿಗ್ ಬಾಸ್ನಿಂದ ಎಲಿಮಿನೇಟ್ ಆಗಿದ್ದಾರೆ. ಹನ್ನೊಂದನೇ ವಾರಕ್ಕೆ ಶಿಶಿರ್ ಬಿಗ್ ಬಾಸ್ ಪ್ರಯಾಣ ಕೊನೆಗೊಳಿಸಿದ್ದಾರೆ.
ಈ ವಾರ ಮನೆಯಿಂದ ಹೊರಹೋಗಲು ಎಂಟು ಮಂದಿ ನಾಮಿನೇಟ್ ಆಗಿದ್ದರು. ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್ ಆಚಾರ್, ಶಿಶಿರ್, ರಜತ್ ಕಿಶನ್, ಹನುಮಂತ, ಮೋಕ್ಷಿತಾ ಪೈ ಹಾಗೂ ಚೈತ್ರಾ ಕುಂದಾಪುರ ನಾಮಿನೇಟ್ ಲಿಸ್ಟ್ನಲ್ಲಿ ಇದ್ದರು. ಈ ಪೈಕಿ ಶನಿವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ತ್ರಿವಿಕ್ರಮ್ ಹಾಗೂ ಹನುಮಂತ ಅವರನ್ನು ಮೊದಲಿಗೆ ಸೇಫ್ ಮಾಡಿದ್ದರು. ಇನ್ನುಳಿದ 6 ಮಂದಿಯಲ್ಲಿ ಯಾರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರ್ತಾರೆ ಅನ್ನೋ ಕುತೂಹಲ ಎಲ್ಲರಲ್ಲಿತ್ತು.
ಅದರಂತೆ ಶಿಶಿರ್ ಶಾಸ್ತ್ರೀ ಮನೆಯಿಂದ ಆಚೆ ಬಂದಿದ್ದಾರೆ. ಕೊನೆಯದಾಗಿ ಭವ್ಯ ಹಾಗೂ ಶಿಶಿರ್ ಅವರು ಡೇಂಜರ್ಝೋನ್ನಲ್ಲಿ ಉಳಿದುಕೊಂಡಿದ್ದರು. ಭವ್ಯ ಹಾಗೂ ಶಿಶಿರ್ ಅವರ ಮಧ್ಯೆ ಈ ವಾರದ ಎಲಿಮಿನೇಷನ್ ರೇಸ್‌ನಲ್ಲಿ ಭವ್ಯ ಬಚಾವ್ ಆಗಿದ್ದಾರೆ. ಕಳೆದ ವಾರ ಶಿಶಿರ್ ಹೆಚ್ಚು ಆ್ಯಕ್ಟಿವ್ ಆಗಿರಲಿಲ್ಲ. ಜೊತೆಗೆ ಐಶ್ವರ್ಯಾ, ಮೋಕ್ಷಿತಾ ಜೊತೆ ಸೇರಿಕೊಂಡ ಶಿಶಿರ್ ಟಾರ್ಗೆಟ್ ಎಲಿಮಿನೇಷನ್ ಬಗ್ಗೆ ಚರ್ಚೆ ಮಾಡಿ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಪ್ರೇಕ್ಷಕರಿಂದ ಕಡಿಮೆ ವೋಟ್ ಬಂದಿದ್ದೆ ಶಿಶಿರ್ ಹೊರಗೆ ಹೋಗಲು ಕಾರಣ ಎನ್ನಲಾಗುತ್ತಿದೆ.
ಶೋ ಆರಂಭವಾದಾಗ ಶಿಶಿರ್ ಶಾಸ್ತ್ರೀ ಕಠಿಣ ಸ್ಪರ್ಧಿಯಂತೆ ಕಂಡಿದ್ದರು. ಅದರಂತೆ ಎರಡನೇ ವಾರ ಕ್ಯಾಪ್ಟನ್ ಕೂಡ ಆದರು. ಆದರೆ, ನಂತರ ಇವರ ಆಟ ನಿಧಾನವಾಗತೊಡಗಿತು. ಆಟದಲ್ಲಿ ಹೆಚ್ಚೇನು ಕಾಣಿಸಲಿಲ್ಲ. ಮೂಲೆಗುಂಪಾದಂತೆ ಕಂಡರು. ಕಿಚ್ಚ ವೀಕೆಂಡ್ನಲ್ಲಿ ಬಂದು ಇವರಿಗೆ ಅನೇಕ ಭಾರೀ ಎಚ್ಚರಿಕೆ ನೀಡಿದರು ಅದು ಪ್ರಯೋಜನ ಆಗಲಿಲ್ಲ. ಕಳೆದ ಎರಡು ವಾರಗಳಿಂದ ಡೇಂಜರ್ಝೋನ್ನಲ್ಲಿ ಹೆಚ್ಚು ಕಾಣಿಸಿಕೊಂಡರು. ಇದೀಗ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ.
Bigg Boss Kannada 11: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಗೋಲ್ಡ್ ಸುರೇಶ್; ತುರ್ತು ನಿರ್ಗಮನಕ್ಕೆ ಕಾರಣವೇನು?