Friday, 22nd November 2024

ಗೃಹಿಣಿ, ಪ್ರಬಲ ರಾಜಕಾರಣಿ ಸೋನಿಯಾ ಬದುಕು ಪ್ರೇರಣಾದಾಯಕ

ಅಭಿವ್ಯಕ್ತಿ

ಆರ್‌.ವಿ.ದೇಶಪಾಂಡೆ, ಕಾಂಗ್ರೆಸ್‌ ಹಿರಿಯ ಮುಖಂಡರು

ಸೋನಿಯಾರ ಬದುಕು ಹಲವರಿಗೆ ಪ್ರೇರಣೆ. ಸೋನಿಯಾ ಗಾಂಧಿ ಭಾರತದ ರಾಜಕಾರಣದಲ್ಲಿ ಮಹಾಶಕ್ತಿ, ದೇಶ ಹಾಗೂ ಜಾಗತಿಕ ರಂಗದಲ್ಲಿ ಪ್ರಭಾವಿ ಮಹಿಳೆ, ಧೀಮಂತ ರಾಜಕಾರಣಿ. ದೇಶವು ಕಂಡ ಅತ್ಯಂತ ಪ್ರಬಲ ಪ್ರಧಾನಿಯ ಸೊಸೆ, ದೇಶಕೆ ನವಯುಗ
ತಂತ್ರಜ್ಞಾನದ ಪಥ ತೋರಿದ ಪ್ರಧಾನಿಯ ಪತ್ನಿ. ಭಾರತದ ಅತ್ಯಂತ ಶಕ್ತಿಯುತ ಕುಟುಂಬದ

ಸೊಸೆಯಾಗಿ, ಮಡದಿಯಾಗಿ, ಗೃಹಿಣಿಯಾಗಿ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ, ಯುಪಿಎ ಸರಕಾರದ ಮುಖ್ಯಸ್ಥರಾಗಿ ಇವರು ಸಾಗಿ ಬಂದ ಮಾರ್ಗ ಅತ್ಯಂತ ಸಂಕಷ , ತ್ಯಾಗದಿಂದ ಕೂಡಿದು  ಪ್ರೇರಣಾದಾಯಕವಾಗಿದೆ. ಹಲವಾರು ಬಾರಿ ಅವರನ್ನು ನಾನು ಭೇಟಿಯಾಗಿ ದ್ದೇನೆ. ಪ್ರತಿ ಬಾರಿ ಭೇಟಿಯಾದಾಗಲೂ ಅವರು ನಗುಮುಖದೊಂದಿಗೆ ಸಕಾರಾತ್ಮಕ ಚಿಂತನೆ ಯೊಂದಿಗೆ ಚರ್ಚಿಸುತ್ತ ಅಭಿವೃದ್ಧಿಪರ ಆಶಾದಾಯಕ ವಿಚಾರಗಳನ್ನು ಪ್ರಸ್ತಾಪಿಸಿ ಅವುಗಳ ಅನುಷ್ಟಾನಕ್ಕೆ ಒತ್ತು ನೀಡುತ್ತಿದ್ದರು.

ಭಾರತದ ರಾಜಕಾರಣದಲ್ಲಿ ಇವರ ಪ್ರವೇಶ ಆಕಸ್ಮಿಕವೂ ಹೌದು. ಅತ್ತೆಯಾದ ಪ್ರಧಾನಿ ಇಂದಿರಾ ಗಾಂಧಿ ದಾರುಣ ಸಾವನ್ನು ಕಂಡ ಸೋನಿಯಾ ಕುಟುಂಬಕ್ಕೆ ಬಂದೊದಗಿದ ದುಃಖ ಆಘಾತದ ಸಮಯದಲ್ಲಿ ಪತಿಗೆ ಧೈರ್ಯ ತುಂಬಿ ಸಾಥ್ ನೀಡಿದರು. ಪ್ರಧಾನಿ ಪಟ್ಟವೇರಿದ ಪತಿ ರಾಜೀವ ಗಾಂಧಿಯ ಪ್ರತಿಯೊಂದು ಅಭಿವೃದ್ಧಿಪರ ಯೋಜನೆಗಳ ಹಿಂದೆ ಪ್ರೇರಣೆಯ ಶಕ್ತಿಯಾಗಿ ಸಹಕರಿಸಿದರು.

ತದನಂತರ ಬಂದೊದಗಿದ ರಾಜೀವ ಗಾಂಧಿಯ ದಾರುಣ ಸಾವಿನ ನೋವನ್ನು ಎದೆಯಲ್ಲಿ ಒತ್ತಿಕೊಂಡ ಸೋನಿಯಾ ಗಾಂಧಿ, ಕಾಂಗ್ರೆಸ್ ಪಕ್ಷದ ಅಪೇಕ್ಷೆಯಂತೆ ಪಕ್ಷದ ಚುಕ್ಕಾಣಿ ಹಿಡಿದರು. ಪಕ್ಷವನ್ನು ಸಮರ್ಥವಾಗಿ ಸಂಘಟಿಸಿದರು, ಬೆಳೆಸಿದರು, ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತಂದರು. ಯಾರು ಏನೇ ಹೇಳಲಿ, ಟೀಕಿಸಲಿ ಸೋನಿಯಾರ ಬದುಕು ಇಂದಿನ ರಾಜಕಾರಣಿಗಳಿಗೆ, ರಾಜಕಾರಣಕ್ಕೆ ಕಾಲಿಡುವ ಯುವ ರಾಜಕಾರಣಿಗಳಿಗೆ ಸೂರ್ತಿ ದಾಯಕ ಎಂದರೆ ತಪ್ಪಾಗಲಾರದು.

ಕೇವಲ ಅಧಿಕಾರ, ಕುರ್ಚಿಗಾಗಿ ಹಪಹಪಿಸುವ, ಪಕ್ಷಾಂತರ ಮಾಡುವ, ಕೆಳಮಟ್ಟಕ್ಕಿಳಿದು ವಿವಿಧ ಕಸರತ್ತು ನಡೆಸುವ ರಾಜಕಾರಣಿ, ಮುಖಂಡರ ನಡುವೆ ಸೋನಿಯಾ ಗಾಂಧಿ ಇಂದು ಸಂಪೂರ್ಣ ಭಿನ್ನವಾಗಿ ಕಾಣುತ್ತಾರೆ. ಪ್ರಧಾನಿಯಾಗುವ ಸರಳ ಸುಲಭವಾದ ಅವಕಾಶವನ್ನು ನಿರಾಕರಿಸಿದ ಸೋನಿಯಾ ಗಾಂಧಿ ಅರ್ಥಶಾಸ್ತ್ರಸಜ್ಞರಾದ ಮನಮೋಹನ ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡುವಲಿ ಕೈಗೊಂಡ ನಿರ್ಧಾರವು ಇತಿಹಾಸದ ಪುಟಗಳಲ್ಲಿ ಬರೆದಿಡುವ ದೇಶದ ಪ್ರಮುಖ ರಾಜಕಾರಣದ ಕಾಲ ಘಟ್ಟವಾಗಿದೆ.

ದೇಶಕ್ಕೆ ಸಮರ್ಥ ಆಡಳಿತ ನೀಡಿದ ಯು.ಪಿ.ಎ ಮುಂದಾಳತ್ವ ವಹಿಸಿದ ಸೋನಿಯಾರ ನಾಯಕತ್ವ ಅದ್ಭುತ. ಭಿನ್ನ ನೀತಿ, ಧೋರಣೆಗಳನ್ನು ಹೊಂದಿರುವ ದೇಶದ ಹಲವಾರು ಪಕ ಗಳನ್ನು ಸೇರಿಸಿ, ಸಂಘಟಿಸಿ ಯು.ಪಿ.ಎ ಸರಕಾರ ಹುಟ್ಟು ಹಾಕಿದ ಸೋನಿಯಾ ಸಂಘಟನಾ ಶಕ್ತಿ ಅನುಪಮ. ಮಾಹಿತಿ ಹಕ್ಕು ಕಾಯಿದೆಯ ಮೂಲಕ ಆಡಳಿತ ಪಾರದರ್ಶಕತೆ, ಮಹಿಳಾ ಮೀಸಲಾತಿಯ ಕಾನೂನಿನ ಮೂಲಕ ಮಹಿಳಾ ಸಬಲೀಕರಣ, ದೇಶದ ನಾಗರಿಕರಿಗೆ ಗುರುತನ್ನು ನೀಡುವಂತಹ ಆಧಾರ್ ಕಾರ್ಡ್ ವ್ಯವಸ್ಥೆ ಹಾಗೂ ನರೇಗಾ ಯೋಜನೆ ಮಸೂದೆಯ ಮೂಲಕ ಸರ್ವರಿಗೂ ಉದ್ಯೋಗ ಖಾತ್ರಿಯನ್ನು ಕಲ್ಪಿಸುವ
ಕಾರ್ಯ ಕ್ರಮಗಳನ್ನು ತರುವಲ್ಲಿ ಪ್ರೇರಣೆಯನ್ನು ನೀಡಿದರು.

ದೇಶಕ್ಕೆ ಬಂದೊದಗಿರುವ ಕರೋನಾ ಸಂಕಷ್ಟದ ಸಮಯದಲ್ಲಿ ದೇಶದ ಬಹುಪಾಲು ಜನತೆಗೆ ಆಸರೆ ನೀಡುವಲ್ಲಿ ಇಂದು ನರೇಗಾ ಯೋಜನೆ ಪ್ರಮುಖ ಪಾತ್ರವಹಿಸಿದ್ದು, ಸೋನಿಯಾ ನೇತೃತ್ವದ ಯು.ಪಿ.ಎ ಸರಕಾರ ಕೈಗೊಂಡ ದೂರಗಾಮಿ ಯೋಜನೆ ಸಾರ್ಥ ಕತೆಗೆ ಸಾಕ್ಷಿ ಎನ್ನಬಹುದು.ಹೀಗೆ ದೇಶದ ರಾಜಕಾರಣದಲ್ಲಿ, ದೇಶದ ಅಭಿವೃದ್ಧಿ ಬೆಳವಣಿಗೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಸೋನಿಯಾ ಗಾಂಧಿಯ ಬದುಕಿನ ಪ್ರತಿ ಹೆಜ್ಜೆಗಳು ಭವಿಷ್ಯದ ನಾಯಕರಿಗೆ ಪ್ರೇರಣಾದಾಯಕ.