Monday, 16th December 2024

Zee Kannada: ವಾರವಿಡೀ ನಿಮ್ಮ ನೆಚ್ಚಿನ ಧಾರಾವಾಹಿಗಳ ‘ಮಹಾಸಂಚಿಕೆಯ ಮೆರವಣಿಗೆ’!

Zee Kannada

ಬೆಂಗಳೂರು: ಸದಾ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡುತ್ತಿರುವ ಝೀ ಕನ್ನಡ (Zee Kannada) ಇದೀಗ ವಾರವಿಡೀ ಮನರಂಜನೆ ನೀಡಲು ಸಜ್ಜಾಗಿದೆ. ಇಡೀ ವಾರ ನಿಮ್ಮ ನೆಚ್ಚಿನ ಧಾರಾವಾಹಿಗಳು ಪ್ರಸರವಾಗಲಿದ್ದು, ಮಹಾಸಂಚಿಕೆಗಳು ಪ್ರಸಾರವಾಗಲಿವೆ. (Kannada Serial) ಸೋಮವಾರದಿಂದ ಶುಕ್ರವಾರದವರೆಗೆ ನೆಚ್ಚಿನ ಧಾರಾವಾಹಿಗಳ ಮೂಲಕ ಪ್ರೇಕ್ಷಕರಿಗೆ ಒಂದು ಗಂಟೆಗಳ ಮಹಾಸಂಚಿಕೆಯ ಮೆರವಣಿಗೆ ನೀಡಲು ಝೀ ಕನ್ನಡ ಸಜ್ಜಾಗಿದೆ.

ಸೋಮವಾರ ಸಂಜೆ 6:30 ರಿಂದ 7:30ಕ್ಕೆ ಪುಟ್ಟಕ್ಕನ ಮಕ್ಕಳು, ಮಂಗಳವಾರ ಸಂಜೆ 7 ರಿಂದ 8 ಗಂಟೆಯವರೆಗೆ ಅಮೃತಧಾರೆ, ಬುಧವಾರ ರಾತ್ರಿ 8 ರಿಂದ 9 ಗಂಟೆಯವರೆಗೆ ಲಕ್ಷ್ಮಿ ನಿವಾಸ, ಗುರುವಾರ ರಾತ್ರಿ 9 ರಿಂದ 10 ಗಂಟೆಯವರೆಗೆ ಶ್ರಾವಣಿ ಸುಬ್ರಮಣ್ಯ, ಶುಕ್ರವಾರ ರಾತ್ರಿ 10 ರಿಂದ 11 ಗಂಟೆಯವರೆಗೆ ಬ್ರಹ್ಮಗಂಟು ಧಾರಾವಾಹಿಗಳು ಹಲವಾರು ತಿರುವುಗಳೊಂದಿಗೆ ನಿಮಗೆ ಒಂದು ಗಂಟೆಯ ಮಹಾ ಮನರಂಜನೆ ನೀಡಲಿವೆ. ತಪ್ಪದೇ ಸೋಮವಾರದಿಂದ ಶುಕ್ರವಾರದವರೆಗೆ ಜೀ಼ ಕನ್ನಡ ವಾಹಿನಿಯನ್ನು ವೀಕ್ಷಿಸಿ ಮನರಂಜನೆಯ ರಸದೌತಣ ಸವಿಯಿರಿ.

ಶುರುವಾಗಲಿದೆ ಸರಿಗಮಪ

ವಾರಾಂತ್ಯದಲ್ಲಿ ಪ್ರೇಕ್ಷರಿಗೆ ಮನರಂಜನೆ ನೀಡಲು ಸರಿಗಮಪ ಸೀಸನ್‌ 21 ಶುರುವಾಗಲಿದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ಪ್ರಸಾರವಾಗಲಿದೆ. ರಾಜ್ಯದ ವಿವಿಧ ಜಿಲ್ಲೆಗಳ ಎಲ್ಲ ಜನರಿಗೂ ಮುಕ್ತ ಅವಕಾಶ ನೀಡಲಾಗಿದ್ದು, ಈ ಬಾರಿಯ ಆಡಿಷನ್‌ನ್ನು ಕೊಂಚ ಭಿನ್ನವಾಗಿ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನರಿಗೇ ಆಯ್ಕೆ ಮಾಡುವ ಸ್ವಾತ್ರಂತ್ರ್ಯವನ್ನು ಝೀ ತಂಡ ನೀಡಿದೆ. 60 ಜನರನ್ನು ಆಯ್ಕೆ ಮಾಡಿದ್ದು, ಮೆಗಾ ಆಡಿಶನ್‌ ಅಲ್ಲಿ ತೀರ್ಪುಗಾರರು ಆಯ್ಕೆ ಮಾಡಲಿದ್ದಾರೆ.

ಈ ಸುದ್ದಿಯನ್ನೂ ಓದಿ : TV Serials: ಶೂಟಿಂಗ್‌ ನಿಲ್ಲಿಸಿ ಕಿರುತೆರೆ ಕಾರ್ಮಿಕರ ಪ್ರತಿಭಟನೆ, ಸೀರಿಯಲ್‌ಗಳಿಗೆ ಸ್ಥಗಿತದ ಆತಂಕ