Monday, 16th December 2024

Viral News: ಪನೀರ್‌ ಡಿಶ್‌ಗೆ 3000 ರೂ.; ಭಾರೀ ಸದ್ದು ಮಾಡ್ತಿದೆ ಇಂಡಿಯನ್‌ ರೆಸ್ಟೋರೆಂಟ್‍ ಬಿಲ್‌ನ ಫೋಟೊ

Viral News

ನವದೆಹಲಿ: ಯೂಟ್ಯೂಬರ್ ಒಬ್ಬರು ಗ್ರಾಹಕರಿಂದ ಸೇವಾ ಶುಲ್ಕವನ್ನು ವಿಧಿಸದ ರೆಸ್ಟೋರೆಂಟ್‍ನ ನೀತಿಯನ್ನು ಹೊಗಳಿ ಫುಡ್ ಬಿಲ್‍ನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅವರು ಹಂಚಿಕೊಂಡ ಫೋಟೊ ಇದೀಗ ನೆಟ್ಟಿಗರ ಗಮನವನ್ನು ಸೆಳೆದಿದೆ. ಹಾಗಾಗಿ ಇದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.  

ಸ್ಟಾರ್ಟ್ಅಪ್ ಸಂಸ್ಥಾಪಕ ಮತ್ತು ಉದ್ಯಮಿ ಇಶಾನ್ ಶರ್ಮಾ ಅವರು ರೆಸ್ಟೋರೆಂಟ್‍ನಲ್ಲಿ ಒಳ್ಳೆ ಊಟವನ್ನು ಮಾಡಿ ನಂತರ ಫುಡ್‍ಬಿಲ್‍ನ ಫೋಟೋವನ್ನು ಪೋಸ್ಟ್ ಮಾಡಿ ರೆಸ್ಟೋರೆಂಟ್‍ನ ಬೆಲೆ ಮಾದರಿಯನ್ನು ಹೊಗಳಿದ್ದಾರೆ. ಇದರಲ್ಲಿ ಅವರು ಸೇವಿಸಿದ ಐದು ಆಹಾರ ಪದಾರ್ಥಗಳ ಬಿಲ್ ಇದ್ದು, ಈ ಊಟದಲ್ಲಿ ಪನೀರ್ ಖುರ್ಚನ್, ದಾಲ್ ಭುಖಾರಾ, ಖಾಸ್ತಾ ರೊಟ್ಟಿಯೊಂದಿಗೆ ಪನೀರ್ ಮಖಾನಿ ಮತ್ತು ಪುದಿನಾ ಪರೋಟಾ ಸೇರಿ ಈ ಐದು ಫುಡ್ ಐಟಂಗಳ ಬಿಲ್ ರೂ. 10,030 ಆಗಿತ್ತು. ಇಷ್ಟು ದೊಡ್ಡ ಮೊತ್ತದ ಕೆಳಗೆ, “ನಾವು ಯಾವುದೇ ಸೇವಾ ಶುಲ್ಕವನ್ನು ವಿಧಿಸುವುದಿಲ್ಲ” ಎಂದು ರಸೀದಿಯಲ್ಲಿ ಬರೆಯಲಾಗಿತ್ತು. ಶರ್ಮಾ ರೆಸ್ಟೋರೆಂಟ್‍ನ ಈ ಕ್ರಮವನ್ನು ಹೊಗಳಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಇದಕ್ಕೆ ಖ್ಯಾತೆ ತೆಗೆದಿದ್ದಾರೆ. ಯಾಕೆಂದರೆ ಊಟಕ್ಕಾಗಿ ಇಷ್ಟು ದೊಡ್ಡ ಮಟ್ಟದ ಹಣವನ್ನು ಖರ್ಚು ಮಾಡಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ.

ಉತ್ತರ ಭಾರತದ ವಿಶಿಷ್ಟ ಊಟಕ್ಕೆ ಶರ್ಮಾ ಇಷ್ಟು ದೊಡ್ಡ ಮೊತ್ತದ ಬೆಲೆಯನ್ನು ಪಾವತಿಸಿದ್ದಾರಾ…? ಎಂದು ಅನೇಕ ನೆಟ್ಟಿಗರು ಶಾಕ್‌ ಆಗಿದ್ದಾರೆ. “ಪನೀರ್ ಮಖಾನಿಗೆ ರೂ.2900, ಮೂರು ಪರೋಟಾಗಳಿಗೆ ರೂ. 1125 ಮತ್ತು ರೊಟ್ಟಿಗೆ ರೂ. 400” ಎಂದು ನೆಟ್ಟಿಗರು ಹೌಹಾರಿದ್ದಾರೆ. ಹೆಚ್ಚಿನ ಜನರು ವಾರಾಂತ್ಯದ ರಜಾದಿನಗಳಲ್ಲಿ ಅಥವಾ ದೊಡ್ಡ ಶಾಪಿಂಗ್‍ಗಾಗಿ 10,000 ರೂ.ಗಳನ್ನು ಖರ್ಚು ಮಾಡುತ್ತಾರೆ. ಇದರ ಬದಲಿಗೆ ಉತ್ತಮ ಗುಣಮಟ್ಟದ ಇಯರ್ ಫೋನ್‍ಗಳನ್ನು ಖರೀದಿಸಬಹುದಿತ್ತು ಎಂದು ನೆಟ್ಟಿಗರೊಬ್ಬರು ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: ಚೆನ್ನಾಗಿದ್ದ ಹಲ್ಲು ಕಿತ್ತು ಚಿನ್ನದ ದಂತಪಂಕ್ತಿ ಫಿಕ್ಸ್- ಈತನ ವಿಡಿಯೊ ವೈರಲ್‌; ನೆಟ್ಟಿಗರು ಹೇಳಿದ್ದೇನು?

ಆಹಾರಕ್ಕಾಗಿ ಈಗಾಗಲೇ ಸಾಕಷ್ಟು ಹಣವನ್ನು ಪಾವತಿಸಿ ಸೇವಾ ಶುಲ್ಕವನ್ನು ತೆಗೆದುಕೊಳ್ಳದೇ ಇರುವ ಕ್ರಮವನ್ನು ಹೊಗಳಿದಕ್ಕಾಗಿ  ಇತರರು ಶರ್ಮಾ ಅವರನ್ನು ಗೇಲಿ ಮಾಡಿದ್ದಾರೆ. “ಬ್ರೋ ಅವರು 25 ರೂ.ಗಳ ರೋಟಿಗೆ ನಿಮಗೆ 375 ರೂ.ಗಳನ್ನು ವಿಧಿಸಿದ್ದಾರೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ.