Monday, 16th December 2024

Drone Pratap: ಕೃಷಿ ಹೊಂಡದಲ್ಲಿ ಸ್ಪೋಟ ಕೇಸ್, ಡ್ರೋನ್ ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

Drone Prathap

ತುಮಕೂರು : ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಭಾರಿ ಸ್ಪೋಟ (Blast Case) ನಡೆಸಿದ ಪ್ರಕರಣದಲ್ಲಿ ಡ್ರೋನ್ ಪ್ರತಾಪ್‌ಗೆ (Drone Pratap) ಡಿಸೆಂಬರ್ 26ರವರೆಗೆ ನ್ಯಾಯಾಂಗ ಬಂಧನಕ್ಕೆ (Judicial Custody) ನೀಡಿ ತುಮಕೂರಿನ (Tumkur news) ಮಧುಗಿರಿ ಜೆಎಂಎಫ್ ಸಿ ಕೋರ್ಟ್ ಆದೇಶ ಹೊರಡಿಸಿದೆ.

ಕೃಷಿ ಹೊಂಡ ಒಂದರಲ್ಲಿ ಸೋಡಿಯಂ ಬಳಸಿ ಡ್ರೋನ್ ಪ್ರತಾಪ್ ಸ್ಪೋಟ ಪ್ರಯೋಗ ಮಾಡಿದ್ದರು. ಈ ಸಂಬಂಧ ಕೇಸ್ ದಾಖಲಾಗಿತ್ತು. ಆನಂತರ ಅವರನ್ನು ಮಿಡಿಗೇಶಿ ಪೊಲೀಸರು ಬಂಧಿಸಿದ್ದರು. ಇಂದು ಕೋರ್ಟ್‌ಗೆ ಡ್ರೋನ್ ಪ್ರತಾಪ್‌ರನ್ನು ಹಾಜರುಪಡಿಸಲಾಗಿದ್ದು, ಇದೀಗ ಡಿಸೆಂಬರ್ 26ರವರೆಗೆ ಅಂದರೆ 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್‌ ಆದೇಶ ಹೊರಡಿಸಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಡ್ರೋನ್ ಪ್ರತಾಪ್ ಕಳೆದ ಕೆಲವು ದಿನಗಳ ಹಿಂದೆ ಅನುಮತಿ ಪಡೆಯದೆ ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಪೋಟಿಸಿದ್ದರಲ್ಲದೆ, ಇದನ್ನು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಈ ವಿಚಾರವಾಗಿ ಮಧುಗಿರಿ ತಾಲೂಕು ಮಿಡಿಗೇಶಿ ಠಾಣೆ ಪೋಲಿಸರು ಪ್ರತಾಪ್‌ ಅವರನ್ನು ಆರೆಸ್ಟ್ ಮಾಡಿದ್ದರು. ಬಳಿಕ ಅವರ ಇಬ್ಬರು ಸ್ನೇಹಿತರನ್ನು ಕೂಡ ಆರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದರು.

ಡ್ರೋನ್ ಪ್ರತಾಪ್ ಅವರನ್ನು ಪೊಲೀಸರು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಅವೆನ್ಯೂ ರಸ್ತೆಯಲ್ಲಿ ಪ್ರತಾಪ್‌ ಸೋಡಿಯಂ ಖರೀದಿಸಿದ್ದು, ಈ ಅಂಗಡಿಗೂ ಕರೆದೊಯ್ದು ಸ್ಥಳ ಮಹಜರು ಮಾಡಿದ್ದಾರೆ. ಜೊತೆಗೆ ಡ್ರೋನ್ ಪ್ರತಾಪ್ ಮನೆ, ಕಚೇರಿಗೂ ಕರೆದೊಯ್ದು ಪರಿಶೀಲಿಸಿದ್ದಾರೆ.

ಕಳೆದ ಬಾರಿಯ ಬಿಗ್‌ ಬಾಸ್‌ ಕನ್ನಡ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡಿದ್ದ ಪ್ರತಾಪ್‌, ಡ್ರೋನ್‌ ತಯಾರಿಸಲು ತಾವು ಪಟ್ಟ ಕಷ್ವವನ್ನು ಎಳೆಎಳೆಯಾಗಿ ಬಣ್ಣಿಸಿದ್ದರು. ತಾವು ನಡೆಸುತ್ತಿರುವ ವಿಜ್ಞಾನ ಪ್ರಯೋಗಗಳಿಗೆ ಅನೇಕ ಕಷ್ಟ ಕೋಟಲೆಗಳನ್ನು ಎದುರಿಸಿರುವುದನ್ನು ಹೇಳಿಕೊಂಡಿದ್ದರು.

ಇದನ್ನೂ ಓದಿ: Drone Prathap: ಡ್ರೋನ್‌ ಪ್ರತಾಪ್‌ ಸ್ನೇಹಿತರಿಬ್ಬರು ಅರೆಸ್ಟ್‌