ತುಮಕೂರು : ಶಾರ್ಟ್ ಸರ್ಕೀಟ್‌ನಿಂದ ನಗರದ ಬಿ.ಎಚ್. ರಸ್ತೆಯ(ಅಶೋಕ ನಗರ) ಮೂರು ಮಳಿಗೆಗಳಲ್ಲಿ ಸೋಮವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ.
ಆಕಸ್ಮಿಕ ಬೆಂಕಿ ಮೊದಲಿಗೆ ಮೊಬೈಲ್ ಮಾರಾಟ ಮಳೆಗೆಯಲ್ಲಿ ಬೆಂಕಿ ಕಾಣಿಸಿಕೊಂಡು ಸುತ್ತಮುತ್ತಲಿನ ಮಳಿಗೆ ಗಳಿಗೆ ಹರಡಿದೆ. ಎಸ್‌ಎಂಎಲ್ ತರಕಾರಿ ಅಂಗಡಿ, ಮೊಬೈಲ್ ಮಾರ್ಟ್, ಸೌತ್ ಹೋಳಿಗೆ ಮನೆ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು ಮೊಬೈಲ್ ಗಳು, ಸಿ.ಸಿ ಟಿ.ವಿ ಕ್ಯಾಮೆರಾ, ಫ್ರಿಡ್ಜ್ ಸುಟ್ಟು ಕರಕಲಾಗಿವೆ.
ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಹೊಸಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: #TumkurCrime