Monday, 16th December 2024

Viral News: ಸಂಗಾತಿಗಾಗಿ 3 ವರ್ಷ ಒಂದಲ್ಲ… ಎರಡಲ್ಲ ಬರೋಬ್ಬರಿ 200 ಕಿ.ಮೀ. ಕ್ರಮಿಸಿದ ಹುಲಿರಾಯ!

Viral Video

ಜನರು ತಾವು ಪ್ರೀತಿಸಿದವರನ್ನು ಭೇಟಿಯಾಗಲು ಮೈಲುಗಟ್ಟಲೆ ಕ್ರಮಿಸುವವರ ಕಥೆಗಳನ್ನು ನೀವು ಕೇಳಿರಬಹುದು, ನೋಡಿರಬಹುದು. ಇತ್ತೀಚೆಗೆ, ತಿಮಿಂಗಿಲ ಕೂಡ ಸಂಗಾತಿಯನ್ನು ಹುಡುಕುತ್ತಾ ಅತಿ ದೂರ ಪ್ರಯಾಣಿಸಿದೆಯಂತೆ. ಇದೇ ರೀತಿಯ ಪ್ರಕರಣದಲ್ಲಿ, ಹುಲಿಯೊಂದು ತನ್ನ ಮಾಜಿ ಸಂಗಾತಿಯೊಂದಿಗೆ ಮತ್ತೆ ಒಂದಾಗಲು ಹಲವು ಕಿಲೋಮೀಟರ್ ದೂರ ಪ್ರಯಾಣಿಸಿದೆ ಎಂದು ವರದಿಯಾಗಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.

ಸೈಬೀರಿಯನ್ ಹುಲಿ ಸುಮಾರು ಮೂರು ವರ್ಷಗಳ ಅವಧಿಯಲ್ಲಿ ರಷ್ಯಾದಾದ್ಯಂತ 200 ಕಿ.ಮೀ ನಡೆದಿದೆ. ಈ ಹಿಂದೆ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು, ಹುಲಿಯೊಂದು ತನ್ನ  ಮಾಜಿ ಸಂಗಾತಿಯನ್ನು ಭೇಟಿಯಾಗಲು ಸಾಕಷ್ಟು ದೀರ್ಘ ಪ್ರಯಾಣ ಮಾಡುತ್ತಿರುವ  ಪ್ರಕರಣವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. “ಮಾನವರು ಪ್ರೀತಿಗಾಗಿ ಮೈಲುಗಟ್ಟಲೆ ಹೋಗಬಹುದಾದರೆ, ಹುಲಿಗಳು ಸಹ ಹೋಗಬಹುದು” ಎಂದು ಅವರು ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಬಾಲ್ಯದ ಸಂಗಾತಿ ಸ್ವೆಟ್ಲಾಯಾದೊಂದಿಗೆ ಮತ್ತೆ ಒಂದಾಗಲು ರಷ್ಯಾದ ಭೂಮಿಯಲ್ಲಿ ಮೈಲುಗಟ್ಟಲೆ ಪ್ರಯಾಣಿಸಿದ ಬೋರಿಸ್ ಬಗ್ಗೆ ಸಾಹು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಗೆ ಮಾಹಿತಿ ನೀಡಿದ್ದಾರೆ. ವರ್ಷಗಳ ನಂತರ, ಒಂದು ಹುಲಿ ತನ್ನ ಬಾಲ್ಯವನ್ನು ಹಂಚಿಕೊಂಡ ಮತ್ತೊಂದು ಹುಲಿಯೊಂದಿಗೆ ಒಂದಾಗಲು ಕಿಲೋಮೀಟರ್ ದೂರ ನಡೆದುಕೊಂಡು ಬಂದಿದೆ. ಎಲ್ಲಾ ಅಡೆತಡೆಗಳನ್ನು ಮೀರಿ, ಬೋರಿಸ್ ದೀರ್ಘ ಪ್ರಯಾಣವನ್ನು ಕೈಗೊಂಡಿದ್ದು,  ಅದು ಈಗ ಎರಡು ಹುಲಿಗಳ ಪುನರ್ಮಿಲನದೊಂದಿಗೆ ಕೊನೆಗೊಂಡಿತು ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:ಅಯ್ಯೋ… ಇದೆಂಥಾ ಬಾಯಿ ರುಚಿನೋ? ಚಿಕನ್ ಟಿಕ್ಕಾವನ್ನು ಚಾಕೋಲೆಟ್‌ ಜೊತೆ ಬೆರೆಸಿ ತಿಂದ ಭೂಪಾ!

120 ಮೈಲಿ ಪ್ರಯಾಣದಲ್ಲಿ ಬೋರಿಸ್ ಸ್ವೆಟ್ಲಾಯಾ ಅದರೊಂದಿಗೆ ಮತ್ತೆ ಒಂದಾಗಿದೆ. ಕಾಡಿನಲ್ಲಿ ಅವುಗಳ ಪುನರ್ಮಿಲನವು ಹೊಸ ಅಧ್ಯಾಯಕ್ಕೆ ಕಾರಣವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.