Monday, 16th December 2024

Virat Kohli: 3 ರನ್‌ ಗಳಿಸಿದರೂ ದ್ರಾವಿಡ್‌ ದಾಖಲೆ ಮುರಿದ ಕೊಹ್ಲಿ

ಬ್ರಿಸ್ಬೇನ್‌: ಟೀಮ್‌ ಇಂಡಿಯಾದ ಹಿರಿಯ ಬ್ಯಾಟರ್‌ ವಿರಾಟ್‌ ಕೊಹ್ಲಿ(virat kohli) ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌(Border–Gavaskar Trophy) ಸರಣಿಯ ಮೂರನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 3 ರನ್‌ ಗಳಿಸಿ ವಿಫಲವಾದರೂ, ಮಾಜಿ ಆಟಗಾರ ರಾಹುಲ್‌ ದ್ರಾವಿಡ್‌(Rahul Dravid) ಅವರ ದಾಖಲೆಯೊಂದನ್ನು ಮುರಿದಿದ್ದಾರೆ.

ಕೊಹ್ಲಿ ಮೂರು ರನ್‌ ಬಾರಿಸುತ್ತಿದ್ದಂತೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ಅತ್ಯಧಿಕ ರನ್‌ ಕಲೆಹಾಕಿದ 3ನೇ ಭಾರತೀಯ ಬ್ಯಾಟರ್‌ ಎನಿಸಿಕೊಂಡರು. ದಾಖಲೆ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಹೆಸೆರಿನಲ್ಲಿದೆ. ಸಚಿನ್‌ 1996-2013 ಅವಧಿಯಲ್ಲಿ 34 ಪಂದ್ಯಳನ್ನಾಡಿ 3262 ರನ್‌ ಬಾರಿಸಿದ್ದಾರೆ. ಈ ವೇಳೆ ಅವರು 9 ಶತಕ ಮತ್ತು 16 ಅರ್ಧಶತಕ ಸಿಡಿಸಿದ್ದಾರೆ. 241* ಗರಿಷ್ಠ ವೈಯಕ್ತಿಕ ಗಳಿಕೆ.

ಇದುವರೆಗೆ ದ್ರಾವಿಡ್‌ ಮೂರನೇ ಸ್ಥಾನದಲ್ಲಿದ್ದರು. ರಾಹುಲ್ ದ್ರಾವಿಡ್ ಆಸ್ಟ್ರೇಲಿಯಾ ವಿರುದ್ಧ 62 ಇನ್ನಿಂಗ್ಸ್‌ಗಳಲ್ಲಿ 2166 ರನ್ ಗಳಿಸಿದ್ದರು. ಆದರೆ ವಿರಾಟ್ 48 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 2168 ರನ್ ಗಳಿಸಿದ್ದಾರೆ. ವಿವಿಎಸ್ ಲಕ್ಷ್ಮಣ್ (2,434) ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅತ್ಯಧಿಕ ರನ್‌ ಗಳಿಸಿದ ವಿಶ್ವ ದಾಖಲೆ ಇಂಗ್ಲೆಂಡ್‌ ದಿಗ್ಗಜ ಜಾನ್ ಬೆರ್ರಿ ಹಾಬ್ಸ್ ಹೆಸರಿನಲ್ಲಿದೆ. ಅವರು 71 ಇನಿಂಗ್ಸ್‌ ಆಡಿ 3636 ರನ್‌ ಬಾರಿಸಿದ್ದಾರೆ. ಸಚಿನ್‌(3262) 2ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ AUS vs IND 3rd Test: ಮೂರನೇ ಟೆಸ್ಟ್‌; ಸೋಲಿನ ಭೀತಿಯಲ್ಲಿ ಭಾರತ

ಕೊಹ್ಲಿ ಕಳಪೆ ಪ್ರದರ್ಶನದಿಂದ ಬೇಸರಗೊಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ಮತ್ತು ಆಕ್ರೋಶ ಹೊರಹಾಕಿದ್ದಾರೆ. ಭಾರತೀಯ ಕ್ರಿಕೆಟ್‌ ಸುಧಾರಣೆಗಾಗಿ ನೀವೂ ನಿವೃತ್ತಿ ತೆಗೆದುಕೊಳ್ಳಲು ಇದು ಸೂಕ್ತ ಸಮಯ ಎಂದಿದ್ದಾರೆ. ಇನ್ನು ಕೆಲವರು ಹೀಗಾದರೇ ಸಚಿನ್ ದಾಖಲೆ ಮುರಿಯುವುದು ಕಷ್ಟ ಎಂದಿದ್ದಾರೆ. ಮತ್ತೊಬ್ಬರು ‘ವಿರಾಟ್ ಕೊಹ್ಲಿ ರನ್ ಗಳಿಸುವ ಹಸಿವನ್ನು ಕಳೆದುಕೊಂಡಿದ್ದಾರೆ. ಬೇರೆ ಕಾರಣವಿಲ್ಲ’ ಎಂದು ಟೀಕಿಸಿದ್ದಾರೆ.

ಮೂರನೇ ಟೆಸ್ಟ್‌ ಪಂದ್ಯದ(AUS vs IND 3rd Test) ಮೂರನೇ ದಿನದಾಟವೂ ಹಲವು ಬಾರಿ ಮಳೆಯಿಂದ ಅಡಚಣೆಯಾಗಿ ಅರ್ಧಕ್ಕೆ ದಿನದಾಟವನ್ನು ರದ್ದುಗೊಳಿಸಲಾಯಿತು. ಸದ್ಯ ಭಾರತ 51 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇನ್ನೂ 394 ಬಾರಿಸಬೇಕಿದೆ. ರೋಹಿತ್‌(0) ಮತ್ತು ರಾಹುಲ್‌(33) ಕ್ರೀಸ್‌ನಲ್ಲಿದ್ದಾರೆ.

7 ವಿಕೆಟ್‌ಗೆ 405 ರನ್‌ ಗಳಿಸಿದ್ದಲ್ಲಿಂದ ಸೋಮವಾರ ಆಟ ಮುಂದುವರಿಸಿದ ಆಸ್ಟ್ರೇಲಿಯಾ 445 ರನ್‌ಗೆ ಆಲೌಟ್‌ ಆಯಿತು. 45 ರನ್‌ ಬಾರಿಸಿದ್ದ ಅಲೆಕ್ಸ್‌ ಕ್ಯಾರಿ 70 ರನ್‌ ಬಾರಿಸಿದರು. ಮಿಚೆಲ್‌ ಸ್ಟಾರ್ಕ್‌ 18 ರನ್‌ ಗಳಿಸಿದರು. ಭಾನುವಾರ 5 ವಿಕೆಟ್‌ ಕಿತ್ತಿದ್ದ ಜಸ್‌ಪ್ರೀತ್‌ ಬುಮ್ರಾ ಸೋಮವಾರ ಒಂದು ವಿಕೆಟ್‌ ಉರುಳಿಸಿದರು. ಒಟ್ಟು 76 ರನ್‌ಗೆ 6 ವಿಕೆಟ್‌ ಕಿತ್ತರು. ಮೊಹಮ್ಮದ್‌ ಸಿರಾಜ್‌ 2 ವಿಕೆಟ್‌ ಕಿತ್ತರು.