ಹೊಸದಿಲ್ಲಿ: ಸಾಮಾನ್ಯವಾಗಿ ಮದುವೆಯ ದಿನ ವಧುವನ್ನು ಕಾರಿನಲ್ಲಿ ಅಥವಾ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿಕೊಂಡು ಹೋಗುತ್ತಾರೆ. ಆದರೆ ಇಲ್ಲೊಬ್ಬ ವಧು “ಫಿರ್ ಭಿ ನಾ ಮಿಲಾ ಸಜ್ನಾ” ಹಾಡು ಹಾಕಿಕೊಂಡು ತನ್ನ ವರನನ್ನು ಹುಡುಕುತ್ತಾ ಲೆಹೆಂಗಾ ಧರಿಸಿ ಬೈಕ್ ಓಡಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video) ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಈ ವೈರಲ್ ವಿಡಿಯೊದಲ್ಲಿ, ಮರೂನ್ ಬಣ್ಣದ ಲೆಹೆಂಗಾ ಮತ್ತು ಸಾಂಪ್ರದಾಯಿಕ ಆಭರಣಗಳನ್ನು ಧರಿಸಿದ ವಧು, “ಫಿರ್ ಭಿ ನಾ ಮಿಲಾ ಸಜ್ನಾ” ಹಾಡು ಹಾಕಿಕೊಂಡು ಬೈಕ್ನಲ್ಲಿ ರಸ್ತೆಯಲ್ಲಿ ವೇಗವಾಗಿ ಹೋಗಿದ್ದಾರೆ. ವಧು ಮದುವೆಯ ಉಡುಗೆ-ತೊಡುಗೆಯಲ್ಲಿ ಬೈಕ್ನಲ್ಲಿ ಹೋಗುವುದನ್ನು ಕಂಡು ದಾರಿಹೋಕರು ಶಾಕ್ ಆಗಿದ್ದಾರೆ.
ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿರುವ ಹಾಡು ವಧು ಕಳೆದುಹೋದ ಪ್ರೀತಿಯನ್ನು ಹುಡುಕುತ್ತಿರುವಂತೆ ಭಾಸವಾಗುತ್ತಿದೆ. ವೈರಲ್ ವಿಡಿಯೊಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಕೆಲವರು ಕಾಮೆಂಟ್ ಮಾಡಿ ವಧುವಿನ ಸಾಹಸ ಮನೋಭಾವದ ಬಗ್ಗೆ ತಮಾಷೆ ಮಾಡಿದರೆ, ಇತರರು ಅವರ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ.
ಈ ವಿಡಿಯೊ ಮಾಡಿದ್ದು ಯಾರು?
ಅಂದಹಾಗೇ ಈ ವಿಡಿಯೊದಲ್ಲಿ ಇರುವ ವಧು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ತುಬಾ ಪಾಷಾ ಎಂದು ತಿಳಿದುಬಂದಿದೆ. ತುಬಾ ಆಗಾಗ್ಗೆ ವಿವಿಧ ವಿನ್ಯಾಸದ ಲೆಹೆಂಗಾಗಳಲ್ಲಿ ವಧುವಿನಂತೆ ಉಡುಪು ಧರಿಸಿದ ವಿಡಿಯೊಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಅವರ ಇನ್ಸ್ಟಾಗ್ರಾಂ ಖಾತೆಯು 2.36 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ.
ಈ ಸುದ್ದಿಯನ್ನೂ ಓದಿ: ಸಂಗಾತಿಗಾಗಿ 3 ವರ್ಷ ಒಂದಲ್ಲ… ಎರಡಲ್ಲ ಬರೋಬ್ಬರಿ 200 ಕಿ.ಮೀ. ಕ್ರಮಿಸಿದ ಹುಲಿರಾಯ!
ತುಬಾ ಸ್ಟೈಲಿಶ್ ಮತ್ತು ಸಾಹಸಮಯ ವಿಡಿಯೊಗಳಿಗೆ ಹೆಸರುವಾಸಿಯಾಗಿದ್ದಾರೆ. ಇದರಲ್ಲಿ ವಧುವಿನ ಉಡುಗೆಯಲ್ಲಿ ಬೈಕ್ ಸವಾರಿ ಮಾಡುವುದು ಮತ್ತು ವಿವಿಧ ವಿನ್ಯಾಸದ ಲೆಹೆಂಗಾಗಳಲ್ಲಿ ಮಾಡೆಲಿಂಗ್ ಮಾಡುವುದು ಸೇರಿವೆ. ವಧುವಿನ ಲೆಹೆಂಗಾದಲ್ಲಿ ಬೈಕ್ ಸವಾರಿ ಮಾಡುವ ಅವರ ವಿಡಿಯೊ ಭಾರಿ ಗಮನ ಸೆಳೆದಿದೆ. 81.7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು, 13 ಲಕ್ಷಕ್ಕೂ ಹೆಚ್ಚು ಲೈಕ್ಗಳು ಬಂದಿದ್ದು 23,000ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.