Tuesday, 17th December 2024

Viral News: ಚೈನೀಸ್‌ ಭೇಲ್‌ ತಯಾರಿಸುವಾಗ ಗ್ರೈಂಡರ್‌ ಒಳಗೆ ಕೈ ಹಾಕಿದ ವ್ಯಕ್ತಿ; ಕ್ಷಣಾರ್ಧದಲ್ಲಿ ದೇಹವೇ ಛಿದ್ರ !

Viral News

ಮುಂಬೈ: ಸಾವು ಹೇಗೆ, ಯಾವ ರೂಪದಲ್ಲಿ ಬರುತ್ತದೆ ಎಂದು ಊಹೆ ಮಾಡಲು ಸಾಧ್ಯವಿಲ್ಲ. ಒಂದು ಕ್ಷಣ ಮೈ ಮರೆತರೆ ಜೀವ ಹೋಗಿ ಬಿಡುತ್ತದೆ. ಅದಕ್ಕೆ ಉದಾಹರಣೆ ಎಂಬಂತೆ ಚೈನೀಸ್‌ ಭೇಲ್‌ ತಯಾರಿಸುವಾಗ ಗ್ರೈಂಡರ್‌ಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ (Maharashtra) ವರ್ಲಿಯಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು 19 ವರ್ಷದ ಸೂರಜ್ ನಾರಾಯಣ್ ಯಾದವ್ ಎಂದು ಗುರುತಿಸಲಾಗಿದೆ. ಈತ ಜಾರ್ಖಂಡ್ ನಿವಾಸಿಯಾಗಿದ್ದು, ಇತ್ತೀಚೆಗೆ ವರ್ಲಿಯಲ್ಲಿ ರಸ್ತೆ ಬದಿಯ ಚೈನೀಸ್ ಸ್ಟಾಲ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದ ಎಂದು ತಿಳಿದು ಬಂದಿದೆ (Viral News).

ಅಂಗಡಿಯ ಮಾಲೀಕ ಸಚಿನ್ ಕೊತೇಕರ್ ವಿರುದ್ಧ ವರ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಮೃತ ಸೂರಜ್ ಮಂಚೂರಿಯನ್ ಚೈನೀಸ್ ಭೇಲ್‌ ತಯಾರಿಸುತ್ತಿರುವಾಗ ಗ್ರೈಂಡರ್‌ ಉಪಯೋಗಿಸಿದ್ದಾನೆ. ಗ್ರೈಂಡರ್‌ ಒಳಗೆ ತನ್ನ ಕೈಯನ್ನು ಹಾಕಿದಾಗ ಆತನ ಶರ್ಟ್ ಗ್ರೈಂಡರ್‌ ಒಳಗೆ ಸಿಲುಕಿ ಹಾಕಿಕೊಡಿದೆ. ಕೆಲವೇ ಸೆಕೆಂಡುಗಳಲ್ಲಿ ಆತನ ದೇಹ ಗ್ರೈಂಡರ್‌ ಒಳಗೆ ಸಿಲುಕಿ ಛಿದ್ರಗೊಂಡಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 ಪೊಲೀಸ್‌ ತನಿಖೆಯಲ್ಲಿ ಮೃತನಿಗೆ ಉಪಕರಣಗಳನ್ನು ನಿರ್ವಹಿಸುವ ಯಾವುದೇ ಪೂರ್ವ ಅನುಭವ ಅಥವಾ ತಾಂತ್ರಿಕ ಜ್ಞಾನವನ್ನು ಇರಲಿಲ್ಲ ಎನ್ನುವುದು ತಿಳಿದು ಬಂದಿದೆ.

ಪತಿ ಬೈದಿದ್ದಕ್ಕೆ ಪತ್ನಿ ಆತ್ಮಹತ್ಯೆ

ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. 30 ವರ್ಷದ ಮಹಿಳೆಯೊಬ್ಬರು ಪತಿಯೊಂದಿಗೆ ಜಗಳವಾಡಿ ಕಟ್ಟಡದ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಘಟನೆಯನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು ಹೆಚ್ಚು ವೈರಲ್ ಆಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಎರಡು ಮಕ್ಕಳ ತಾಯಿಯಾಗಿರುವ ಅಂಗೂರಿ ಬಾಯಿ ನಗರದ ಲಾಸುಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಾಪುರ ಟೌನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಮರೇಂದ್ರ ಸಿಂಗ್ ಹೇಳಿದ್ದಾರೆ. ಶಾಲೆಯೊಂದರಲ್ಲಿ ಕೇರ್ ಟೇಕರ್ ಆಗಿದ್ದ ಅಂಗೂರಿ ಆಗಾಗ್ಗೆ ಪತಿಯೊಂದಿಗೆ ಜಗಳವಾಡುತ್ತಿದ್ದಳು. ಭಾನುವಾರ ಸಂಜೆ ಕೂಡ ಪತಿಯೊಂದಿಗೆ ಜಗಳವಾಡಿದ್ದಳು. ಇದಾದ ನಂತರ ಮಹಿಳೆ ತನ್ನ ಮನೆಯ ಛಾವಣಿಯ ಮೇಲೆ ಹತ್ತಿದಳು.

ಮೇಲ್ಛಾವಣಿಯನ್ನು ಹತ್ತಿದ ನಂತರ ಅಂಗೂರಿ ಬಾಯಿ ಅಲ್ಲಿಂದ ಜಿಗಿಯುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದಳು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆಕೆಯ ಪತಿ ಮತ್ತು ನೆರೆಹೊರೆಯವರು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಅವಳು ಒಪ್ಪಲಿಲ್ಲ. ಪತಿ ಆಕೆಯನ್ನು ಹಿಡಿಯಲು ಬಂದ ಕೂಡಲೇ ಮೇಲಿನಿಂದ ಜಿಗಿದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ . ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮಹಿಳೆಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Yahya Sinwar: ಇಸ್ರೇಲಿ ಸೇನೆಯಿಂದ ಹತನಾದ ಯಹ್ಯಾ ಸಿಹ್ವಾರ್‌ನ ಮತ್ತೊಂದು ವಿಡಿಯೋ ವೈರಲ್‌