Tuesday, 17th December 2024

Swallowing Live Chick: ಅಯ್ಯೋ! ಹೀಗೂ ಉಂಟಾ?; ಕೋಳಿ ಮರಿ ನುಂಗಿ ಪ್ರಾಣ ಕಳೆದುಕೊಂಡ ವ್ಯಕ್ತಿ; ಕೋಳಿ ಇನ್ನೂ ಜೀವಂತ!

ರಾಯ್‌ ಪುರ: ಒಂದಿಷ್ಟು ವಿಚಿತ್ರ ಘಟನೆಗಳು ಜನರನ್ನು ಆಗಾಗ್ಗೆ ಬೆಚ್ಚಿ ಬೀಳಿಸುತ್ತವೆ. ಇಲ್ಲೊಬ್ಬ ವ್ಯಕ್ತಿ ಜೀವಂತ ಕೋಳಿ ಮರಿಯನ್ನು ನುಂಗಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಅಚ್ಚರಿ ಎಂದರೆ ಕೋಳಿ ಇನ್ನೂ ಜೀವಂತವಾಗಿದೆ. ಇಂಥ ಆಘಾತಕಾರಿ ಘಟನೆ ಛತ್ತೀಸ್‌ಗಢದ (Chhattisgarh) ಅಂಬಿಕಾಪುರ (Ambikapura) ಜಿಲ್ಲೆಯಲ್ಲಿ ನಡೆದಿದೆ (Swallowing Live Chick).

35 ವರ್ಷದ ವ್ಯಕ್ತಿಯೊಬ್ಬ ಕೋಳಿ ನುಂಗಿ ಮೃತಪಟ್ಟಿರುವ ಘಟನೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂಡ್ಕಾಲೋ (Chhindkalo) ಗ್ರಾಮದಲ್ಲಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಯಿಂದ ಅಲ್ಲಿನ ಸ್ಥಳೀಯರು ಮತ್ತು ವೈದ್ಯರು ಕಕ್ಕಾಬಿಕ್ಕಿಯಾಗಿದ್ದಾರೆ.

ಕುಟುಂಬಸ್ಥರು ನೀಡಿರುವ ಮಾಹಿತಿಯ ಪ್ರಕಾರ, ಮೃತ ಆನಂದ್ ಯಾದವ್(Anand Yadav) ಸ್ನಾನದ ನಂತರ ಇದ್ದಕ್ಕಿದ್ದಂತೆ ಕುಸಿದು ಪ್ರಜ್ಞೆ ಕಳೆದುಕೊಂಡಿದ್ದಾರೆ. ಗಾಬರಿಗೊಂಡ ಸಂಬಂಧಿಕರು ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತಕ್ಷಣದ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಅವರ ಸಾವಿನ ಕಾರಣ ನಿಗೂಢವಾಗಿಯೇ ಉಳಿದಿತ್ತು.

ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ವೈದ್ಯರು ಸಾವಿನ ನಿಜವಾದ ಕಾರಣವನ್ನು ಪತ್ತೆಹಚ್ಚಿದ್ದು,ಎಲ್ಲರೂ ಒಂದು ಕ್ಷಣ ಗಾಬರಿಯಾಗಿದ್ದಾರೆ. ಗಂಟಲಿನ ಪರೀಕ್ಷೆ ಮಾಡಿದಾಗ 20-ಸೆಂಟಿಮೀಟರ್ ಉದ್ದದ ಜೀವಂತವಾದ ಕೋಳಿ ಮರಿ ಸಿಕ್ಕಿದೆ. ಮರಿಯು ಶ್ವಾಸನಾಳದಲ್ಲಿ ಸಿಲುಕಿಕೊಂಡಿರುವುದು ಕಂಡು ಬಂದಿತ್ತು. ಮರಣೋತ್ತರ ಪರೀಕ್ಷೆಯನ್ನು ನಡೆಸಿದ ಹಲವು ವೈದ್ಯರು, ತಮ್ಮ ವೃತ್ತಿ ಜೀವನದಲ್ಲಿ 15,000ಕ್ಕೂ ಹೆಚ್ಚು ಶವ ಪರೀಕ್ಷೆಗಳನ್ನು ಮಾಡಿದ್ದು,ಇಂತಹ ಪ್ರಕರಣವನ್ನು ಇದೇ ಮೊದಲ ಬಾರಿಗೆ ನೋಡಿರುವುದು ಎಂದಿದ್ದಾರೆ.

ಮಕ್ಕಳಿಲ್ಲದ ಆನಂದ್‌ ಮಗುವಾಗಲಿ ಎಂಬ ಆಸೆಯಿಂದ ಕಳೆದ ಕೆಲವು ತಿಂಗಳುಗಳಿಂದ ಚಿತ್ರ-ವಿಚಿತ್ರ ಕೆಲಸಗಳನ್ನು ಮಾಡಿದ್ದು, ವಾಮಚಾರ ಮತ್ತು ಮಾಟ ಮಂತ್ರಕ್ಕೆ ಬಲಿಯಾಗಿ ಮಂತ್ರವಾದಿಯೊಬ್ಬನ ಮಾತು ಕೇಳಿ ಕೋಳಿ ಮರಿಯನ್ನು ನುಂಗಿರಬಹುದು ಎಂದು ಸ್ಥಳೀಯರು ಮಾತನಾಡಿದ್ದಾರೆ.

ಪೂರಿ ತಿಂದು ಬಾಲಕ ಸಾವು

ಇತ್ತೀಚೆಗಷ್ಟೇ ಹೈದರಾಬಾದ್‌ನ ಖಾಸಗಿ ಶಾಲೆಯೊಂದರ 6ನೇ ತರಗತಿಯ ವಿದ್ಯಾರ್ಥಿಯೊಬ್ಬ ಗಂಟಲಲ್ಲಿ ಪೂರಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದ ಘಟನೆ ವರದಿಯಾಗಿತ್ತು. ಸಿಕಂದರಾಬಾದ್‌ನ ಶಾಲೆಯೊಂದರಲ್ಲಿ ಈ ಘಟನೆ ನಡೆದಿತ್ತು. ವಿಕಾಸ್ ಜೈನ್ ಎಂಬ ಬಾಲಕ ಊಟದ ಸಮಯದಲ್ಲಿ ಟಿಫಿನ್‌ನಿಂದ ಮೂರು ಪೂರಿಗಳನ್ನು ತೆಗೆದುಕೊಂಡು ಒಂದೇ ಬಾರಿಗೆ ಎಲ್ಲವನ್ನೂ ಬಾಯಿಗೆ ಹಾಕಿಕೊಂಡಿದ್ದ.

ಮೂರು ಪೂರಿಗಳನ್ನು ಒಟ್ಟಿಗೆ ಬಾಯಿಗೆ ಹಾಕಿಕೊಂಡ ತಕ್ಷಣ ಬಾಲಕ ಉಸಿರಾಡಲು ಪರದಾಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಚಿಕಿತ್ಸೆ ನೀಡುವ ಮುನ್ನವೇ ಬಾಲಕ ಮೃತಪಟ್ಟಿದ್ದ. ವಿಕಾಸ್ ಜೈನ್ ತಿವೋಲಿ ಥಿಯೇಟರ್ ಬಳಿ ಇರುವ ಶಾಲೆಯಲ್ಲಿ 6ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಮನೆಯಿಂದ ತಂದ ಪೂರಿಯನ್ನು ಸಹಪಾಠಿಯೊಂದಿಗೆ ಸೇವಿಸಲು ಮುಂದಾದಾಗ ಈ ಆಘಾತಕಾರಿ ಘಟನೆ ನಡೆದಿತ್ತು.

ಈ ಸುದ್ದಿಯನ್ನೂ ಓದಿ:Atul Subhash Case: ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ; ಬಿಲ್‍ ಮೂಲಕ ಸಂತಾಪ ಸೂಚಿಸಿದ ರೆಸ್ಟೋರೆಂಟ್