Wednesday, 18th December 2024

Laapataa Ladies: ಆಸ್ಕರ್‌ ಪ್ರ‍ಶಸ್ತಿ ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್

Laapataa Ladies

ಮುಂಬೈ: ಆಸ್ಕರ್‌ ಪ್ರಶಸ್ತಿ(Oscars 2025)ಗೆ ಅಧಿಕೃತ ಪ್ರವೇಶ ಪಡೆದಿದ್ದ ಲಾಪತಾ ಲೇಡೀಸ್‌(Laapataa Ladies) ಸಿನಿಮಾ ಇದೀಗ ಆ ರೇಸ್‌ನಿಂದ ಹೊರಬಿದ್ದಿದೆ. ಅತ್ಯುತ್ತಮ ಅಂತರಾಷ್ಟ್ರೀಯ ಫೀಚರ್ ವಿಭಾಗದಲ್ಲಿ ಆಸ್ಕರ್ 2025ರ ಕಿರುಪಟ್ಟಿಗೆ ಪ್ರವೇಶಿಸಲು ವಿಫಲವಾಗಿದೆ. ಅಂತಿಮ ಪಟ್ಟಿಯನ್ನು ಡಿಸೆಂಬರ್ 17 ರಂದು ಪ್ರಕಟಿಸಲಾಗಿದೆ. ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ವರ್ಗದಲ್ಲಿ ಲಾಪತಾ ಲೇಡೀಸ್ ಸಿನಿಮಾ 97ನೇ ಅಕಾಡೆಮಿ ಅವಾರ್ಡ್ಸ್ ಗೆ ಭಾರತದಿಂದ ಅಧಿಕೃತವಾಗಿ ಪ್ರವೇಶ ಪಡೆದಿತ್ತು.

ಕಿರಣ್ ರಾವ್ ನಿರ್ದೇಶಿಸಿರುವ ಈ ಸಿನಿಮಾ, 15 ಫೀಚರ್ ಫಿಲ್ಮ್ ಗಳ ಪಟ್ಟಿಯ ಪೈಕಿ ಆಯ್ಕೆಯಾಗಿತ್ತು. ಆದರೆ ಈಗ ಅಂತಿಮವಾಗಿ 5 ಸಿನಿಮಾಗಳು ಆಯ್ಕೆಯಾಗಿವೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್& ಸೈನ್ಸಸ್ ಘೋಷಿಸಿದೆ. ಇನ್ನು ಬ್ರಿಟಿಷ್-ಭಾರತೀಯ ಚಲನಚಿತ್ರ-ನಿರ್ಮಾಪಕಿ ಸಂಧ್ಯಾ ಸೂರಿಯವರ ಸಂತೋಷ್‌‌‌ (Santhosh) ಪಟ್ಟಿಯಲ್ಲಿ ಸ್ಥಾನ ಪಡೆದಿದುಕೊಂಡಿದೆ.

ಲಾಪತಾ ಲೇಡೀಸ್ ಸಿನಿಮಾ 97ನೇ ಅಕಾಡೆಮಿ ಅವಾರ್ಡ್ಸ್ ಗೆ ಭಾರತದಿಂದ ಅಧಿಕೃತವಾಗಿ ಪ್ರವೇಶ ಪಡೆದಿತ್ತು. ಅಸ್ಸಾಮಿ ಚಲನಚಿತ್ರ ನಿರ್ಮಾಪಕ ಜಾಹ್ನು ಬರುವಾ ಅಧ್ಯಕ್ಷತೆಯ 13 ಸದಸ್ಯರ ಆಯ್ಕೆ ಸಮಿತಿಯು ಈ ಸಿನಿಮಾವನ್ನು ಆಯ್ಕೆ ಮಾಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ಈ ಚಿತ್ರ ರೇಸ್‌ನಿಂದ ಹೊರಬಿದ್ದಿದೆ.

ಶಾರ್ಟ್‌ಲಿಸ್ಟ್‌ ನಲ್ಲಿ ಇರುವ ಸಿನಿಮಾಗಳು

  • “ಐ ಆ್ಯಮ್‌‌ ಸ್ಟಿಲ್‌‌ ಹಿಯರ್‌”-ಬ್ರೆಜಿಲ್
  • “ಯುನಿವರ್ಸಲ್ ಲ್ಯಾಂಗ್ವೇಜ್”-ಕೆನಡಾ
  • “ವೇವ್ಸ್”-ಜೆಕ್ ರಿಪಬ್ಲಿಕ್
  • “ದಿ ಗರ್ಲ್ ವಿತ್ ದಿ ಸೂಜಿ”-ಡೆನ್ಮಾರ್ಕ್
  • “ಎಮಿಲಿಯಾ ಪೆರೆಜ್”-ಫ್ರಾನ್ಸ್
  • “ಟಚ್”-ಐಸ್ಲ್ಯಾಂಡ್
  • “ಫ್ಲೋ”-ಲಾಟ್ವಿಯಾ
  • “ಅರ್ಮಾನ್”-ನಾರ್ವೆ
  • “ಡಹೋಮಿ”-ಸೆನೆಗಲ್
  • “ಸಂತೋಷ್”-ಯುನೈಟೆಡ್ ಕಿಂಗ್ಡಮ್

ಅಂತಿಮ ಆಸ್ಕರ್ ನಾಮನಿರ್ದೇಶನಗಳನ್ನು ಜನವರಿ 17 ರಂದು ಪ್ರಕಟಿಸಲಾಗುತ್ತದೆ ಎಂದು ವರದಿಯಾಗಿದೆ. ಅಮೀರ್ ಖಾನ್ ಮತ್ತು ಕಿರಣ್ ರಾವ್ ಕಳೆದ ಕೆಲವು ವಾರಗಳಿಂದ ಅಮೆರಿಕದಲ್ಲಿ ಚಿತ್ರದ ಪ್ರಚಾರ ನಡೆಸುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ, ಅಲ್ಫೊನ್ಸೊ ಕ್ಯುರಾನ್ ಚಿತ್ರಕ್ಕಾಗಿ BAFTA ಪ್ರಚಾರಕ್ಕಾಗಿ ಪ್ರದರ್ಶನವನ್ನು ಆಯೋಜಿಸಿದರು.

ಈ ಚಿತ್ರ ಒಟಿಟಿಗೆ ಬಂದ ಬಳಿಕ ಜನರು ಹೆಚ್ಚು ಮೆಚ್ಚಿಕೊಂಡರು. ಆಸ್ಕರ್ ಮಟ್ಟದಲ್ಲಿ ಸಿನಿಮಾ ಕ್ಯಾಂಪೇನ್ ಮಾಡಲು ಈ ಚಿತ್ರಕ್ಕೆ ‘ಲಾಸ್ಟ್ ಲೇಡಿಸ್’ ಎಂದು ಹೆಸರನ್ನು ಇಡಲಾಗಿತ್ತು. ಮುಖ್ಯವಾದ ಮೂರು ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸ್ಪರ್ಶ್ ಶ್ರೀವಾಸ್ತವ, ಪ್ರತಿಭಾ ರಂಟಾ, ನಿತಾಂಶಿ ಗೋಯಲ್ ಅವರಿಗೆ ಇದು ಮೊದಲ ಸಿನಿಮಾ. ರವಿ ಕಿಶನ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಷ್ಟೇ ಅಲ್ಲದೇ ಈ ಚಿತ್ರವನ್ನು ಸುಪ್ರೀಂ ಕೋರ್ಟ್ ನ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಶೇಷವಾಗಿ ಪ್ರದರ್ಶಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: Laapataa Ladies: ಆಸ್ಕರ್‌ಗಾಗಿ ʻಲಾಪತಾ ಲೇಡಿಸ್‌ʼ ಚಿತ್ರದ ಟೈಟಲ್‌ ಚೇಂಜ್‌; ಪೋಸ್ಟರ್‌ ರಿಲೀಸ್‌