ಬ್ರಿಸ್ಬೇನ್: ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ(AUS vs IND) ತಂಡ ಭಾರತಕ್ಕೆ 275 ರನ್‌ಗಳ ಗೆಲುವಿನ ಗುರಿ ನೀಡಿದೆ. ಅಂತಿಮ ದಿನವಾದ ಇಂದು ದ್ವಿತೀಯ ಇನಿಂಗ್ಸ್ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 7 ವಿಕೆಟ್‌ಗೆ 89 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಸದ್ಯ ಭಾರತ ಗುರಿ ಬೆನ್ನಟ್ಟಲಾರಂಭಿಸಿದೆ. ಭಾರತ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಎದುರು ನೋಡುತ್ತಿದ್ದರೆ, ಎದುರಾಳಿ ಆಸೀಸ್ ಬಡಬಡನೆ ವಿಕೆಟ್ ಕಿತ್ತು ಪಂದ್ಯವನ್ನು ಗೆಲ್ಲುವ ಜಿದ್ದಿಗೆ ಬಿದ್ದಿದೆ. ಇದರ ಮಧ್ಯೆ ಆಗಾಗ ಮಳೆ ಕೂಡ ಕಣ್ಣಾಮುಚ್ಚಾಲೆ ಆಟ ಆರಂಭಿಸಿದೆ.
4ನೇ ದಿನದ ಕೊನೆಯಲ್ಲಿ 9 ವಿಕೆಟಿಗೆ 252 ರನ್ ಗಳಿಸಿದ್ಧ ಭಾರತ ಬುಧವಾರ 260 ರನ್‌ಗೆ ಆಲೌಟ್ ಆಯಿತು. ಫಾಲೋಆನ್ ತೂಗುಗತ್ತಿಯಿಂದ ತಂಡೌನ್ನು ಪಾರು ಮಾಡಿದ್ದ ವೇಗಿಗಳಾದ ಆಕಾಶ್‌ದೀಪ್ ಅತ್ಯಮೂಲ್ಯ 31 ರನ್ ಕೊಡುಗೆ ನೀಡಿದರು. ಜಸ್‌ಪ್ರೀತ್ ಬುಮ್ರಾ 10 ರನ್ ಬಾರಿಸಿ ಅಜೇಯರಾಗಿ ಉಳಿದರು. ಆಸೀಸ್ ಪರ ಪ್ಯಾಟ್ ಕಮಿನ್ಸ್ 4, ಮಿಚೆಲ್ ಸ್ಟಾರ್ಕ್ 3 ವಿಕೆಟ್ ಕಿತ್ತು ಮಿಂಚಿದರು.
ಇದನ್ನೂ ಓದಿ FIFA World Cup 2034: ಸೌದಿಯಲ್ಲಿ ಮದ್ಯ ನಿಯಮ ಸಡಿಲಿಕೆ ಅನುಮಾನ?
185 ರನ್ ಲೀಡ್‌ನೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಬಿರುಸಿನ ಬ್ಯಾಟಿಂಗ್ ನಡೆಸಲು ಮುಂದಾಗಿ ಸತತವಾಗಿ ವಿಕೆಟ್ ಕಳೆದುಕೊಂಡಿತು. ನಾಯಕ ಪ್ಯಾಟ್ ಕಮಿನ್ಸ್(22) ಮತ್ತು ಅಲೆಕ್ಸ್ ಕ್ಯಾರಿ(20*) ರನ್ ಗಳಿಸಿದರು. ಇವರದ್ದೇ ತಂಡದ ಪರ ಅತ್ಯಧಿಕ ಗಳಿಕೆ.
ಮೊದಲ ಇನಿಂಗ್ಸ್ ಶತಕ ವೀರ ಟ್ರಾವಿಸ್ ಹೆಡ್ 17 ರನ್ ಗಳಿಸಿದರು. ಭಾರತ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ಜಸ್‌ಪ್ರೀತ್ ಬುಮ್ರಾ 18 ರನ್‌ಗೆ 3 ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ತಲಾ 2 ವಿಕೆಟ್ ಕಿತ್ತರು. ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ಚಹಾ ವಿರಾದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿದೆ. ಜೈಸ್ವಾಲ್(4) ಮತ್ತು ಕೆ.ಎಲ್ ರಾಹುಲ್(4) ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.