ಮುಂಬಯಿ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ(AUS vs IND) ಮಹತ್ವ ಬದಲಾವಣೆಯೊಂದನ್ನು ಮಾಡಲು ನಿರ್ಧರಿಸಿರುವುದಾಗಿ ವರದಿಯಾಗಿದೆ. ಹಿರಿಯ ವೇಗಿ ಉಮೇಶ್ ಯಾದವ್(Umesh Yadav) ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮುಂದಾಗಿದೆ ಎಂದು ತಿಳಿದುಬಂದಿದೆ. ನಾಲ್ಕನೇ ಟೆಸ್ಟ್ ಪಂದ್ಯ ಡಿ.26 ರಿಂದ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಇದು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವಾಗಿದೆ.
ಮೊಹಮ್ಮದ್ ಶಮಿ ಅವರನ್ನು ಮೂರನೇ ಟೆಸ್ಟ್ ವೇಳೆ ತಂಡಕ್ಕೆ ಸೇರ್ಪಡೆಗೊಳಿಸಲು ಮ್ಯಾನೇಜ್ಮೆಂಟ್ ಎದರುನೋಡುತ್ತಿತ್ತು. ಆದರೆ ಶಮಿ ಸಂಪೂರ್ಣ ಫಿಟ್ ಆಗದ ಕಾರಣ ಇದೀಗ ಉಮೇಶ್ ಯಾದವ್ ಅವರನ್ನು ಆಯ್ಕೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಉಮೇಶ್ ಯಾದವ್ ಅವರು ಈ ಹಿಂದಿನ ಎರಡು ಆಸೀಸ್ ಪ್ರವಾಸದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಗಮನಸೆಳೆದಿದ್ದರು. ಉಮೇಶ್ ಇದುವರೆಗೆ ಆಸೀಸ್ ನೆಲದಲ್ಲಿ 10 ಪಂದ್ಯಗಳನ್ನಾಡಿ 31 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಒಂದು ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಇತಿಹಾಸದಲ್ಲಿ 16 ಪಂದ್ಯವನ್ನಾಡಿ 51 ವಿಕೆಟ್ ಕಿತ್ತಿದ್ದಾರೆ.
ಇದನ್ನೂ ಓದಿ AUS vs IND: ಭಾರತಕ್ಕೆ 275 ರನ್ ಗೆಲುವಿನ ಗುರಿ ನೀಡಿದ ಆಸೀಸ್
ಉಮೇಶ್ ಯಾದವ್ ಅವರು ಭಾರತ ಪರ 57 ಟೆಸ್ಟ್ ಪಂದ್ಯಗಳನ್ನಾಡಿ 170 ವಿಕೆಟ್ ಕಿತ್ತಿದ್ದಾರೆ. ಉಮೇಶ್ ಭಾರತ ಪರ ಕೊನೆಯ ಪಂದ್ಯವನ್ನಾಡಿದ್ದು 2023ರಲ್ಲಿ. ಆಸೀಸ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಇದಾಗಿತ್ತು. ಆ ಬಳಿಕ ಅವರು ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ.
ರವೀಂದ್ರ ಜಡೇಜಾಗೆ ರಾಹುಲ್ ಮೆಚ್ಚುಗೆ
ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ (IND vs AUS) ನಾಲ್ಕನೇ ದಿನ ಅರ್ಧಶತಕ ಸಿಡಿಸಿದ ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಸಹ ಆಟಗಾರ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
“ರವೀಂದ್ರ ಜಡೇಜಾ ಅವರು ನಮಗೆ ಕಳೆದ ಹಲವು ವರ್ಷಗಳಿಂದ ಕೆಳ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ನಾವು ಇದನ್ನೇ ನಿರೀಕ್ಷೆ ಮಾಡುತ್ತೇವೆ. ಹಲವು ವರ್ಷಗಳಿಂದ ಅವರು ಇದನ್ನು ಸಾಬೀತುಪಡಿಸಿದ್ದಾರೆ. ಅವರು ಕ್ರೀಸ್‌ಗೆ ಬಂದಾಗ ನಮ್ಮ ನಡುವಣ ಜತೆಯಾಟದಿಂದಾಗಿ ನನಗೆ ತುಂಬಾ ಖುಷಿ ಇದೆ,” ಎಂದು ಕೆಎಲ್ ರಾಹುಲ್ ತಿಳಿಸಿದ್ದರು.