Wednesday, 18th December 2024

Viral Video: ನಡುಬೀದಿಯಲ್ಲಿ ಹುಡುಗಿಯ ಕೂದಲು ಹಿಡಿದೆಳೆದು ಥಳಿಸಿದ ಕಿರಾತಕರು-ವಿಡಿಯೊ ವೈರಲ್  

Viral Video

ಕಾನ್ಪುರ: ಹಾಡಹಗಲೇ ನಡುಬೀದಿಯಲ್ಲಿ ಯುವತಿಯೊಬ್ಬಳ ಮೇಲೆ ಇಬ್ಬರು ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್(Viral Video) ಆಗಿದೆ.

ಇಬ್ಬರು ಕಿಡಿಗೇಡಿಗಳು ವಿಪುಲ್ ಯಾದವ್ ಮತ್ತು ಸಂಜಯ್ ನಿಷಾದ್ ಎಂದು ಗುರುತಿಸಲಾಗಿದೆ. ಯುವತಿಯನ್ನು ತಮ್ಮ ಮನೆಗೆ ಕರೆದೊಯ್ಯಲು ಪ್ರಯತ್ನಿಸಿದಾಗ ಆಕೆ ಬರಲು ಒಪ್ಪದಿದ್ದಕ್ಕೆ ಆಕೆಯ ಕೂದಲನ್ನು ಹಿಡಿದೆಳೆದು ಥಳಿಸಿದ್ದಾರೆ. ಯುವತಿ  ಅವರ ಕೃತ್ಯಗಳನ್ನು ಪ್ರತಿರೋಧಿಸಲು ಪ್ರಯತ್ನಿಸುತ್ತಾ ಕಿರುಚಾಡಿದಾಗ ಅನೇಕ ಜನರು ರಸ್ತೆಯಲ್ಲಿ ಜಮಾಯಿಸಿದ್ದಾರೆ. ಆದರೆ  ಯಾರು ಆಕೆಯ ಸಹಾಯಕ್ಕೆ ಬರಲಿಲ್ಲ. ಕೆಲವರು ಯುವತಿಯ ಕೂಗಿಗೆ ಕಿವಿ ಕೊಡದೇ ನಿರ್ದಯವಾಗಿ ನಡೆದುಕೊಂಡು ಹೋಗಿದ್ದಾರೆ.

ಈ ಆಘಾತಕಾರಿ ಘಟನೆಯನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಿದ ಒಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.ಈ ವಿಡಿಯೊ ತುಣುಕಿನಲ್ಲಿ ಒಬ್ಬ ವ್ಯಕ್ತಿ ಯುವತಿಯ ಕೂದಲನ್ನು ಎಳೆದುಕೊಂಡು ಬೀದಿಗೆ ಎಳೆದೊಯ್ಯುವುದನ್ನು ಸೆರೆಹಿಡಿಯಲಾಗಿದೆ. ಇನ್ನೊಬ್ಬ ವ್ಯಕ್ತಿ ಕಾವಲು ಕಾಯುತ್ತಿದ್ದು, ಕೆಲವು ಮಹಿಳೆಯರು ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದಾಗ, ಈ ವ್ಯಕ್ತಿ ಅವರನ್ನು ತಳ್ಳಿ ಮುಂದೆ ಹೋಗಿದ್ದಾನೆ.

ಡಿಸೆಂಬರ್ 14ರಂದು ಈ ಘಟನೆ ನಡೆದಿದೆ. ಹಲ್ಲೆಯ ಹಿಂದಿನ ಕಾರಣ ತಿಳಿದುಬಂದಿಲ್ಲ. ಆದರೆ ಅವರು ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಮತ್ತು ತಮ್ಮ ನಿವಾಸಕ್ಕೆ ಎಳೆಯಲು ಪ್ರಯತ್ನಿಸಿದ್ದಾರೆ ಎಂದು ಯುವತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ  ಕಾಣಿಸಿಕೊಂಡು ವೈರಲ್ ಆಗುತ್ತಿದ್ದಂತೆ, ಪೊಲೀಸರು ಈ ಘಟನೆಯನ್ನು ಗಮನಿಸಿದ್ದಾರೆ. ಸ್ಥಳೀಯ ಪೊಲೀಸರು ಹತ್ತಿರದ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ  ಇಬ್ಬರು ಪುರುಷರು ಈ ಯುವತಿಯನ್ನು ಥಳಿಸುತ್ತಿರುವುದು ರೆಕಾರ್ಡ್ ಆಗಿದೆ. ವರದಿಗಳ ಪ್ರಕಾರ, ಯಾದವ್ ಮತ್ತು ನಿಷಾದ್ ಅವರನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:ರೈಲಿನ ಮಹಿಳಾ ಬೋಗಿಯೊಳಗೆ ಬೆತ್ತಲೆಯಾಗಿ ನುಗ್ಗಿದ ವ್ಯಕ್ತಿ; ವಿಡಿಯೊ ವೈರಲ್

ಈ ತಿಂಗಳು ಕಾನ್ಪುರದಲ್ಲಿ ನಡೆದ ಮತ್ತೊಂದು ಹಲ್ಲೆ ಘಟನೆಯಲ್ಲಿ, ಅಪ್ರಾಪ್ತ ಬಾಲಕಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. 17 ವರ್ಷದ ದಲಿತ ಬಾಲಕಿಯ ಮೇಲೆ 18 ವರ್ಷದ ಯುವಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ.