ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi Serial) ಜನರ ಮನ್ನಣೆಗೆ ಪಾತ್ರವಾಗಿದೆ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರೂ, ತನಗೊದಗಿದ ಪರಿಸ್ಥಿತಿಯನ್ನು ಎದುರಿಸುತ್ತಾ ಕೆಚ್ಚು, ಮಹತ್ವಾಕಾಂಕ್ಷೆಗಳ ಹಾದಿ ತುಳಿದ ಭಾಗ್ಯಳ ಪಯಣ ವೀಕ್ಷಕರ ಮನಸನ್ನು ಇನ್ನಿಲ್ಲದಂತೆ ತಟ್ಟಿದೆ. ಎದುರಾದ ಸವಾಲುಗಳನ್ನೆಲ್ಲಾ ನಿಭಾಯಿಸುತ್ತಾ, ಎಲ್ಲ ನಿರೀಕ್ಷೆಗಳು ಹುಸಿಯಾಗುವಂತೆ ಬೆಳೆಯುತ್ತಿರುವ ಭಾಗ್ಯಾಳ ಕತೆ ನಾಡಿನ ಹೆಣ್ಣು ಮಕ್ಕಳಿಗೆ ಹೊಸ ಹುರುಪು ತುಂಬುತ್ತಿದೆ.
ಸದ್ಯ ಭಾಗ್ಯಾ-ತಾಂಡವ್ ಡಿವೋರ್ಸ್ ವಿಚಾರ ಸಾಕಷ್ಟು ಕುತೂಹಲ ಕೆರಳಿಸಿದೆ. ಭಾಗ್ಯಾ ತಾಂಡವ್ ಮುಖಕ್ಕೆ ಡಿವೋರ್ಸ್ ಪೇಪರ್ಸ್ ಎಸೆದಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಈ ಮೂಲಕ ಭಾಗ್ಯ ತನ್ನ ಬದುಕಿನ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾಳೆ. ಹಿಂದಿನ ಎಪಿಸೋಡ್ನಲ್ಲಿ, ನನ್ನ ಅಮ್ಮನನ್ನು ಬಿಡಿಸುವ ದಾರಿ ನನಗೆ ಗೊತ್ತಾಯಿತು. ಯಾರ ಸಹಾಯವೂ ಇಲ್ಲದೆ ನನ್ನ ತಾಯಿಯನ್ನು ನಾನು ಬಿಡಿಸುತ್ತೇನೆ ಎಂದು ತಾಂಡವ್-ಶ್ರೇಷ್ಠ ಬಳಿ ಭಾಗ್ಯಾ ಹೇಳುತ್ತಾಳೆ. ಪೊಲೀಸ್ ಸ್ಟೇಷನ್‌ಗೆ ಬರುವ ಮುನ್ನವೇ ಬೇಲ್‌ಗೆ ಅರೇಂಜ್ ಮಾಡಿರುತ್ತಾಳೆ. ಲಾಯರ್ ಮೂಲಕ ಭಾಗ್ಯಾ, ಸುನಂದಾಳನ್ನು ಬಿಡಿಸುತ್ತಾಳೆ. ತಾಂಡವ್ ಹಾಗೂ ಶ್ರೇಷ್ಠಾ ಬೇರೆ ವಿಧಿ ಇಲ್ಲದೆ ಅಲ್ಲಿಂದ ಹೊರ ಹೋಗುತ್ತಾರೆ.
ಆಗ ಭಾಗ್ಯಾ ಹೊರಬಂದು ನಿಮ್ಮ ಬಳಿ ಒಂದು ಕೆಲಸ ಬಾಕಿ ಇದೆ ಎಂದು ತಾಂಡವ್‌ಗೆ ಹೇಳುತ್ತಾಳೆ. ಡೀವೋರ್ಸ್ ಪೇಪರ್‌ಗೆ ಸಹಿ ಹಾಕಿ ಅದನ್ನು ತಾಂಡವ್ ಮುಖದ ಮೇಲೆ ಎಸೆಯುತ್ತಾಳೆ. ಇದನ್ನು ಕಂಡು ಶ್ರೇಷ್ಠಾ ಖುಷಿಯಾದರೆ ಅತ್ತ ತಾಂಡವ್ ಶಾಕ್ ಆದಂತೆ ನಟಿಸುತ್ತಾನೆ. ನೀನು ನನಗೆ ಡಿವೋರ್ಸ್ ಕೊಡುತ್ತಿದ್ದೀಯ ಎಂದು ಕೇಳುತ್ತಾನೆ. ಹೌದು ನಾನೇ ನಿನಗೆ ಡಿವೋರ್ಸ್ ಕೊಡುತ್ತಿರುವುದು, ಇದನ್ನು ತೆಗೆದುಕೊಂಡು ಹೋಗುತ್ತಿರಿ ಎನ್ನುತ್ತಾಳೆ.
ಇದು ಖುಷಿ ಪಡಬೇಕಾದ ವಿಚಾರ ಏಕೆ ಬೇಜಾರು ಮಾಡಿಕೊಂಡಿದ್ದೀಯ ಎಂದು ಶ್ರೇಷ್ಠಾ ಕೇಳುತ್ತಾಳೆ. ನಾನು ಅವಳಿಗೆ ಡಿವೋರ್ಸ್ ಕೊಟ್ಟು, ಮುಖದ ಮೇಲೆ ಪೇಪರ್ ಎಸೆಯಬೇಕು ಎಂದುಕೊಂಡಿದ್ದೆ, ಆದರೆ ಅವಳೇ ಹಾಗೆ ಮಾಡಿದಳು, ಭಾಗ್ಯಾಗೆ ಇಷ್ಟು ಧೈರ್ಯ ಎಲ್ಲಿಂದ ಬಂತು? ಅವಳು ಖುಷಿಯಾಗಿರಲು ನಾನು ಬಿಡುವುದಿಲ್ಲ ಎಂದು ತಾಂಡವ್ ಕೋಪಗೊಳ್ಳುತ್ತಾನೆ.
ಇದಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದ ಶ್ರೇಷ್ಠಾ ಅವಳು ಖುಷಿಯಾಗಿರಬಾರದು ಎಂದಾದರೆ ನಾವಿಬ್ಬರೂ ಮದುವೆ ಆಗಬೇಕು ಎಂದು ಹೇಳುತ್ತಾಳೆ. ಸರಿ ಹಾಗಾದರೆ ನಾಳೆ ಮದುವೆ ಆಗೋಣ ರೆಡಿ ಇರು ಎಂದು ತಾಂಡವ್ ಹೇಳುತ್ತಾನೆ. ಅವನ ಮಾತುಗಳನ್ನು ಕೇಳಿ ಶ್ರೇಷ್ಠಾ ಇನ್ನಷ್ಟು ಖುಷಿಯಾಗುತ್ತಾಳೆ. ಇವರಿಬ್ಬರು ಮದುವೆಯಾಗಲು ತಯಾರಾಗುತ್ತಾರೆ. ಮನೆಯ ಒಳಗೆ ಇಬ್ಬರು ಹಸೆಮಣೆ ಏರಲು ಸಜ್ಜಾಗುತ್ತಾರೆ. ಆದರೆ, ಇನ್ನೇನು ತಾಳಿ ಕಟ್ಟ ಬೇಕು ಎಂಬಷ್ಟರಲ್ಲಿ ಅಲ್ಲಿಗೆ ಭಾಗ್ಯಾ ಎಂಟ್ರಿ ಆಗುತ್ತದೆ.
ಮದುವೆ ಶಾಸ್ತ್ರ ನಡೆಯುತ್ತಿರುವ ಸಂದರ್ಭ ತಾಳಿ ಕಟ್ಟುವಾಗ ಅಲ್ಲಿಗೆ ಪೊಲೀಸರ ಜೊತೆ ಬಂದ ಭಾಗ್ಯ ನಿಲ್ಸಿ ಎಂದು ಕೂಗಾಡುತ್ತಾಳೆ. ಇದರಿಂದ ಕೋಪಗೊಂಡ ತಾಂಡವ್, ಡಿವೋರ್ಸ್ ಕೊಟ್ಟು ನನ್ನ ದಾರಿ ನನಗೆ ನಿನ್ನ ದಾರಿ ನಿನಗೆ ಅಂತ ಹೇಳಿದಮೇಲೂ ಇಲ್ಲಿ ಯಾಕೆ ಬಂದು ವಕ್ರುಸಿದ್ದೀಯಾ ಎಂದು ಕೇಳುತ್ತಾನೆ. ಇದಕ್ಕೆ ನಗುತ್ತಾ ಉತ್ತರ ಕೊಟ್ಟ ಭಾಗ್ಯ, ಕೋರ್ಟ್ ನಮ್ಮಿಬ್ಬರನ್ನೂ ಸಪರೇಟ್ ಮಾಡುವವರೆಗೂ ನಾನು ನೀನು ಗಂಡ-ಹೆಂಡ್ತೀನೆ. ಒಬ್ಬ ಹೆಂಡ್ತಿ ಇರುವಾಗ್ಲೇ ಇನ್ನೊಬ್ಬಳನ್ನ ಮದುವೆ ಆಗೋದು ಕಾನೂನಿನ ಪ್ರಕಾರ ತಪ್ಪು ಎಂದು ಹೇಳಿ ತಾಂಡವ್-ಶ್ರೇಷ್ಠಾಳ ಮದುವೆಗೆ ಬ್ರೇಕ್ ಹಾಕಿದ್ದಾಳೆ.
BBK 11: ಸುದೀಪ್ ಮಾತಿಗೆ ಡೋಂಟ್ ಕೇರ್: ಬಿಗ್ ಬಾಸ್ನಲ್ಲಿ ನಿಲ್ಲದ ರಜತ್ ಆರ್ಭಟ