Wednesday, 18th December 2024

J&K Fire accident: ಭೀಕರ ಅಗ್ನಿ ದುರಂತ- ಮಾಜಿ ಡಿಎಸ್ಪಿ ಸೇರಿದಂತೆ 6 ಜನರ ದುರ್ಮರಣ

fire accident

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಮನೆಯೊಂದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ(J&K Fire accident) ಮಾಜಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅವರ ಮೂರು ವರ್ಷದ ಮೊಮ್ಮಗ ಸೇರಿದಂತೆ ಒಟ್ಟು ಆರು ಮಂದಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಇತರ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರ ಪ್ರಕಾರ, ಬೆಳಗಿನ ಜಾವ 2:30 ರ ಸುಮಾರಿಗೆ ಮನೆಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಅದರ ನಿವಾಸಿಗಳನ್ನು ರಕ್ಷಿಸಲು ಧಾವಿಸಿದರು. ಮನೆ ದಟ್ಟವಾದ ಹೊಗೆಯಿಂದ ತುಂಬಿತ್ತು. ಮನೆಯೊಳಗಿದ್ದ6 ಜನರು ನಿದ್ರೆಯಲ್ಲಿಯೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಇತರ ನಾಲ್ವರು ಉಸಿರುಗಟ್ಟಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಗಾಯಾಳುಗಳನ್ನು ಕಥುವಾದಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು (ಜಿಎಂಸಿ) ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮೃತರನ್ನು 81 ವರ್ಷದ ಮಾಜಿ ಉಪ ಎಸ್ಪಿ ಅವತಾರ್ ಕೃಷ್ಣ ರೈನಾ, ಅವರ ಪುತ್ರಿ ಬರ್ಖಾ ರೈನಾ, ಪುತ್ರ ತಕಾಶ್, ಗಂಗಾ ಭಗತ್, 15 ವರ್ಷದ ದಾನಿಶ್ ಭಗತ್ ಮತ್ತು 6 ವರ್ಷದ ಅದ್ವಿಕ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 61 ವರ್ಷದ ಸ್ವರ್ಣ (ಅವತಾರ್ ಕ್ರಿಶನ್ ರೈನಾ ಅವರ ಪತ್ನಿ), 40 ವರ್ಷದ ನೀತು ದೇವಿ, 15 ವರ್ಷದ ಅರುಣ್ ಕುಮಾರ್ ಮತ್ತು 69 ವರ್ಷದ ಮಹಿಳೆ ಗಾಯಾಳುಗಳು. ಇನ್ನು ಮಾಜಿ ಡಿಎಸ್‌ಪಿಯ ಕುಟುಂಬ ಮಾಜಿಗೆ ಮನೆಯಲ್ಲಿ ವಾಸವಾಗಿತ್ತು ಎನ್ನಲಾಗಿದೆ.

ಕೇಂದ್ರ ಸಚಿವ ಸಂತಾಪ

ಇನ್ನು ಈ ದುರ್ಘಟನೆ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪ್ರತಿಕ್ರಿಯಿಸಿದ್ದು, ಸಾವಿಗೆ ಸಂತಾಪ ಸೂಚಿಸಿದ್ದಾರೆ. ಈ ವಿಷಯದ ಬಗ್ಗೆ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ. ಕಥುವಾ ನಗರದ ಶಿವನಗರ ಪ್ರದೇಶದಲ್ಲಿ ಬೆಂಕಿ ಅವಘಡದಿಂದ ಒಂದು ಕುಟುಂಬದ 6 ಸದಸ್ಯರು ಆಕಸ್ಮಿಕವಾಗಿ ಸಾವನ್ನಪ್ಪಿದ ಬಗ್ಗೆ ತಿಳಿದು ತೀವ್ರ ಆಘಾತವಾಗಿದೆ” ಎಂದು ಸಿಂಗ್ ಅವರ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:ಜಮ್ಮು-ಕಾಶ್ಮೀರದಲ್ಲಿ ಭೂಕಂಪನ