ಚೀನಾ : ಕೆಲವೊಂದು ಕಂಪೆನಿಗಳಲ್ಲಿ ಉದ್ಯೋಗಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಅವರನ್ನು ತುಂಬಾ ಕ್ರೂರವಾಗಿ ದಂಡಿಸುವ ಬಗ್ಗೆ ಆಗಾಗ ಸುದ್ದಿಗಳು ಕೇಳಿಬರುತ್ತಿರುತ್ತವೆ. ಇದೀಗ ಚೀನಾದ ಕಂಪನಿಯೊಂದು ತನ್ನ ವಿಲಕ್ಷಣ ಕೆಲಸದ ಸಂಸ್ಕೃತಿ ಮತ್ತು ಉದ್ಯೋಗಿಗಳನ್ನು ಶಿಕ್ಷಿಸುವ ರೀತಿ ಸೋಶಿಯಲ್ ಮೀಡಿಯಾ ನೆಟ್ಟಿಗರ ಗಮನ ಸೆಳೆದಿದೆ. ಗೊತ್ತುಪಡಿಸಿದ ಕಾರ್ಯಗಳಲ್ಲಿ ವಿಫಲರಾದಾಗ ಅಲ್ಲಿನ ಉದ್ಯೋಗಿಗಳು ನೆಲದ ಮೇಲೆ ಮಲಗಿ ಬಾಸ್ಗೆ ವಿಶ್ ಮಾಡುವ ಹಾಗೂ ಮೆಣಸಿನಕಾಯಿ ತಿನ್ನುವಂತಹ ಶಿಕ್ಷೆ ವಿಧಿಸಲಾಗುತ್ತದೆ. ಮೂಲಕ ತಮ್ಮ ಬಾಸ್ಗೆ ಗೌರವ ನೀಡುವಂತೆ ಮಾಡುತ್ತಾರೆ. ಇದೀಗ ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ (Viral Video)ಆಗಿದೆ.
ಹಲವು ಕಚೇರಿಗಳಲ್ಲಿನ ಹೆಚ್ಚಿನ ಉದ್ಯೋಗಿಗಳು ತಮ್ಮ ಬಾಸ್ ಅನ್ನು “ಹಲೋ” ಅಥವಾ “ಗುಡ್ ಮಾರ್ನಿಂಗ್” ಎಂದು ಸ್ವಾಗತಿಸುವುದನ್ನು ಕಾಣಬಹುದು. ಆದರೆ ‘ಕ್ವಿಮಿಂಗ್’ ಎಂದು ಕರೆಯಲ್ಪಡುವ ಚೀನಾದ ಸಂಸ್ಥೆಯೊಂದರಲ್ಲಿ ತಮ್ಮ ಮೇಲಧಿಕಾರಿಯನ್ನು ಸ್ವಾಗತಿಸಲು ಉದ್ಯೋಗಿಗಳು ನೆಲದ ಮೇಲೆ ಮಲಗುವಂತೆ ಆದೇಶಿಸಲಾಗಿದೆ.
👀 20 empleados fueron captados tirados al suelo para saludar a su jefe, en una ciudad china.
— RT en Español (@ActualidadRT) December 13, 2024
🎥 Más videos en Rumble 👉 https://t.co/InXJUxJraH pic.twitter.com/o0AiAHknCQ
ಕಚೇರಿಯಲ್ಲಿ ಬಾಸ್ ಅನ್ನು ಸ್ವಾಗತಿಸಲು ಉದ್ಯೋಗಿಗಳನ್ನು ನೆಲದ ಮೇಲೆ ಮಲಗಿಸುವುದಲ್ಲದೆ, ಬಾಸ್ ಮತ್ತು ಕಂಪನಿಗೆ ಬಹುಪರಾಕ್ ಹಾಕಬೇಕಂತೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರು ತಮ್ಮ ಜೀವನದಲ್ಲಿ ಎಲ್ಲಕ್ಕಿಂತ ಕೆಲಸವನ್ನು ಹೆಚ್ಚು ಗೌರವಿಸುತ್ತಾರೆ ಮತ್ತು ಆದ್ಯತೆ ನೀಡುತ್ತಾರೆ ಎಂದು ಈ ಬಗ್ಗೆ ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿದೆ.
ಈ ಕಚೇರಿಯ ಆಚರಣೆಯಲ್ಲಿ ತೊಡಗಿರುವ ಉದ್ಯೋಗಿಗಳ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರೂ ಕೂಡ ಕಂಪನಿಯ ಪ್ರತಿನಿಧಿಯೊಬ್ಬರು ಅಲ್ಲಿ ಅಂತಹ ಅಭ್ಯಾಸಗಳನ್ನು ನಡೆಸಲಾಗುತ್ತಿಲ್ಲ ಎಂದು ಹೇಳುವ ಮೂಲಕ ಆರೋಪ ನಿರಾಕರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ನಡುಬೀದಿಯಲ್ಲಿ ಹುಡುಗಿಯ ಕೂದಲು ಹಿಡಿದೆಳೆದು ಥಳಿಸಿದ ಕಿರಾತಕರು-ವಿಡಿಯೊ ವೈರಲ್
ಹಾಗೇ ಕಂಪನಿಯು ತನ್ನ ಸಿಬ್ಬಂದಿಯು ಹೇಳಿದ ಕೆಲಸ ಮಾಡಲು ವಿಫಲರಾದರೆ, ಮೆಣಸಿನಕಾಯಿ ತಿನ್ನುವಂತೆ ಶಿಕ್ಷೆ ವಿಧಿಸಲಾಗುತ್ತದೆಯಂತೆ. ಉದ್ಯೋಗಿಗಳನ್ನು ಶಿಕ್ಷಿಸುವ ನೆಪದಲ್ಲಿ ಕಂಪನಿಯು ಅವರಲ್ಲಿ ಕೆಲವರಿಗೆ ಮೆಣಸಿನಕಾಯಿಗಳನ್ನು ತಿನ್ನಲು ಆದೇಶಿಸಿದೆ ಎಂದು ವರದಿಯಾಗಿದೆ. ಜುಲೈ 2000 ರಲ್ಲಿ, ಚೀನಾದ ಚೆಂಗ್ಡು ಪ್ರದೇಶದ ಹಣಕಾಸು ಸಂಸ್ಥೆಯೊಂದು ಕಳಪೆ ಕೆಲಸ ಮಾಡಿದ್ದಕ್ಕಾಗಿ ಉದ್ಯೋಗಿಗಳಿಗೆ ಮೆಣಸಿನಕಾಯಿ ತಿನ್ನುವ ಶಿಕ್ಷೆ ವಿಧಿಸಿದೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಇಬ್ಬರು ಮಹಿಳಾ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಇದು ಚೀನಾದ ಕೆಲಸದ ಸ್ಥಳದಲ್ಲಿ ಇತ್ತೀಚೆಗೆ ಆಚರಿಸಲಾಗುವ ಆಚರಣೆಯಾಗಿದ್ದು, ಈ ಆಚರಣೆಯು ಅನೇಕ ಜನರನ್ನು ಬೆಚ್ಚಿಬೀಳಿಸಿದೆ.