ಮುಂಬೈ: ಸೋಶಿಯಲ್ ಮಿಡಿಯಾಗಳಲ್ಲಿ ‘ಡ್ಯಾನ್ಸಿಂಗ್ ಕಾಪ್’ ಎಂದು ಕರೆಯಲ್ಪಡುವ ಅಮೋಲ್ ಕಾಂಬ್ಳೆ ಅವರು ಮುಂಬೈನ ಬೀದಿಗಳಲ್ಲಿ ಡ್ಯಾನ್ಸ್ ಮಾಡಿದ ಹೊಸ ವಿಡಿಯೊ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಮುಂಬೈ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಉತ್ತಮ ಡ್ಯಾನ್ಸರ್ ಆಗಿರುವ ಕಾಂಬ್ಳೆ, ರ್ಯಾಪ್ ಕಲಾವಿದೆ ಪಂಜಾಬಿ ಎಂಸಿ ಅವರ ಜನಪ್ರಿಯ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ಇನ್ನು ಇವರ ಜೊತೆಗೆ ಲಂಡನ್ ಮೂಲದ ‘ಸ್ಟ್ರೀಟ್ ಡ್ಯಾನ್ಸರ್’ ಫ್ರಾನ್ಸಿಸ್ ರಫ್ಲಿ ಹೆಜ್ಜೆ ಸೇರಿಸಿದ್ದಾರೆ. ರೆಮೋ ಡಿಸೋಜಾ ನಿರ್ದೇಶನದ ಸ್ಟ್ರೀಟ್ ಡ್ಯಾನ್ಸರ್ 3ಡಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಫ್ಲಿ ಅವರೊಂದಿಗೆ ಮುಂಬೈನ ‘ಡ್ಯಾನ್ಸಿಂಗ್ ಕಾಪ್’ ಡ್ಯಾನ್ಸ್ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ.
ಲಂಡನ್ ಮೂಲದ ಡ್ಯಾನ್ಸರ್ ಆಟೋ ರಿಕ್ಷಾದಲ್ಲಿ ಹೋಗುವ ದೃಶ್ಯದ ಮೂಲಕ ಈ ವಿಡಿಯೊ ಶುರುವಾಗುತ್ತದೆ. ಆಟೋರಿಕ್ಷಾದಲ್ಲಿ ರಫ್ಲಿ ತಾನು ಇಳಿಯಬೇಕಾದ ಸ್ಥಳ ತಲುಪಿ ಚಾಲಕನಿಗೆ ಹಣ ನೀಡಲು ಹೋದಾಗ ಅಲ್ಲಿ ಅವರಿಬ್ಬರ ನಡುವೆ ಜಗಳ ನಡೆಯುತ್ತದೆ. ಆಗ ಅಲ್ಲಿಗೆ ಬಂದ ಮುಂಬೈ ಪೋಲೀಸ್ ಮಧ್ಯಪ್ರವೇಶಿಸಿ ರಫ್ಲಿ ಅವರಿಗೆ ಸಹಾಯ ಮಾಡಿದ್ದಾರೆ. ಆಟೋರಿಕ್ಷಾ ಚಾಲಕನಿಂದ ಲಂಡನ್ ವ್ಯಕ್ತಿಗೆ ಮೋಸವಾಗದಂತೆ ಮುಂಬೈ ಪೊಲೀಸರು ಸಹಾಯ ಮಾಡುತ್ತಾರೆ. ಈ ಮುಖಾಮುಖಿಯ ನಂತರ, ಡ್ಯಾನ್ಸ್ ಶುರುವಾಗಿದೆ. ಇಬ್ಬರು ಡ್ಯಾನ್ಸರ್ಗಳು ‘ಜೋಗಿ’ ಹಾಡಿಗೆ ಅತ್ಯಂತ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಮುಂಬೈಯ ಭೀಕರ ಬಸ್ ದುರಂತ: ವೈರಲ್ ಆಯ್ತು ಅಪಘಾತದ ವಿಡಿಯೊ
ನವೆಂಬರ್ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾದ ಈ ವಿಡಿಯೊ ವೈರಲ್ ಆಗಿದೆ. ಇದು 68,000 ಲೈಕ್ಗಳನ್ನು ಮತ್ತು ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಕಾಮೆಂಟ್ ವಿಭಾಗದಲ್ಲಿ ಇವರಿಬ್ಬರ ಡ್ಯಾನ್ಸ್ ಬಗ್ಗೆ ನೆಟ್ಟಿಗರು ಹೊಗಳಿದ್ದಾರೆ. “ಅದ್ಭುತ” ಎಂದು ಒಬ್ಬರು ಹೇಳಿದರೆ, “ಸೂಪರ್” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ವೈರಲ್ ಡ್ಯಾನ್ಸ್ ರೀಲ್ಗೆ ಪ್ರತಿಕ್ರಿಯಿಸಿದ ಕೆಲವರು ಫೈಯರ್ ಮತ್ತು ಹಾರ್ಟ್ ಎಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ.