ಬೆಳಗಾವಿ: ಲಡಾಖ್ನಲ್ಲಿ ಗುಡ್ಡ ಕುಸಿದು ಬೆಳಗಾವಿ ಮೂಲದ ಯೋಧರೊಬ್ಬರು (Soldier Dies) ಮೃತಪಟ್ಟಿದ್ದಾರೆ. ಜಿಲ್ಲೆಯ ಗೋಕಾಕ್ ತಾಲೂಕಿನ ಇರಣಟ್ಟಿ ಗ್ರಾಮದ ಮಹೇಶ್ ಅವರು ಡಿ. 14ರಂದು ಲಡಾಖ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಗುಡ್ಡ ಕುಸಿದು ಕೊನೆಯುಸಿರೆಳೆದಿದ್ದರು. ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವ ಹೊರತೆಗೆದಿದ್ದರು.
ಸೈನಿಕ ಮಹೇಶ್ ಅವರ ಪಾರ್ಥಿವ ಶರೀರ ಮಂಗಳವಾರ ಸಂಜೆ ಇರಣಟ್ಟಿ ಗ್ರಾಮಕ್ಕೆ ಆಗಮಿಸಿತು. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಗೌರವ ಸಮರ್ಪಿಸಿದರು. ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರಿನಲ್ಲಿ ಮಹೇಶ್ ಅವರ ಅಂತ್ಯಸಂಸ್ಕಾರ ನೆರವೇರಿದೆ. ಎರಡು ತಿಂಗಳ ಹಿಂದೆಯಷ್ಟೇ ಸೈನಿಕ ಮಹೇಶ್ ಅವರ ನಿಶ್ಚಿತಾರ್ಥ ಕೂಡ ಆಗಿದ್ದು, ಮದುವೆ ದಿನಾಂಕ ಕೂಡ ನಿಗದಿಯಾಗಿತ್ತು. ಆದರೆ ಲಡಾಖ್ನಲ್ಲಿ ನಡೆದ ದುರಂತದಲ್ಲಿ ಮಹೇಶ್ ಪ್ರಾಣ ತೆತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ | J&K Fire accident: ಭೀಕರ ಅಗ್ನಿ ದುರಂತ- ಮಾಜಿ ಡಿಎಸ್ಪಿ ಸೇರಿದಂತೆ 6 ಜನರ ದುರ್ಮರಣ
ವಿವಾಹೇತರ ಪ್ರೇಮ ಪುರಾಣ; ನದಿಗೆ ಹಾರಿದ ಪ್ರೇಯಸಿ, ನೇಣು ಹಾಕಿಕೊಂಡ ಪ್ರಿಯಕರ
ಮಂಡ್ಯ: ವಿವಾಹೇತರ ಪ್ರೇಮ ಸಂಬಂಧ (Illicit relationship) ಬಯಲಾದುದರಿಂದ ಪ್ರೇಮಿಗಳಿಬ್ಬರು ಪ್ರತ್ಯೇಕವಾಗಿ ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ಮಂಡ್ಯ (Mandya news) ಜಿಲ್ಲೆಯಲ್ಲಿ ನಡೆದಿದೆ. ವಿವಾಹಿತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಚಾರ ತಿಳಿದ ಪ್ರಿಯಕರ ನೇಣು ಹಾಕಿಕೊಂಡಿದ್ದಾನೆ.
ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದ ಸೃಷ್ಟಿ (20) ಹಾಗೂ ಬನ್ನಹಳ್ಳಿ ಗ್ರಾಮದ ಪ್ರಸನ್ನ (25) ಸಾವಿಗೆ ಶರಣಾದವರು. ಕಳೆದ ಕೆಲವು ವರ್ಷಗಳಿಂದ ಪ್ರಸನ್ನ ಹಾಗೂ ಸೃಷ್ಟಿ ಪ್ರೀತಿಸುತ್ತಿದ್ದರು. ಒಂದೂವರೆ ವರ್ಷದ ಹಿಂದೆ ದಿನೇಶ್ ಎಂಬವರ ಜೊತೆಗೆ ಸೃಷ್ಟಿಯ ಮದುವೆ ನಡೆದಿತ್ತು. ಈ ನಡುವೆ ಸೃಷ್ಟಿಯ ಸ್ನೇಹಿತೆಯಾಗಿರುವ ಸ್ಪಂದನಾ ಎಂಬಾಕೆಯನ್ನು ಪ್ರಸನ್ನ ಪ್ರೀತಿಸಿ ಮದುವೆಯಾಗಿದ್ದ.
ಬೇರೆ ಬೇರೆ ಮದುವೆಯಾಗಿದ್ದರೂ ಪ್ರಸನ್ನ ಹಾಗೂ ಸೃಷ್ಟಿ ನಡುವೆ ಪ್ರೀತಿಯ ಸಂಬಂಧ ಮುಂದುವರಿದಿತ್ತು. ಈ ವಿಚಾರಕ್ಕೆ ಸೃಷ್ಟಿ ಹಾಗೂ ಪತಿ ದಿನೇಶ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅತ್ತ ಪ್ರಸನ್ನ- ಸ್ಪಂದನಾ ನಡುವೆಯೂ ವಾಗ್ಯುದ್ಧ ನಡೆಯುತ್ತಿತ್ತು.
ಡಿ.11ರಂದು ಪತಿ ಮನೆಯಿಂದ ಸೃಷ್ಟಿ ನಾಪತ್ತೆಯಾಗಿದ್ದಳು. ಪತ್ನಿ ನಾಪತ್ತೆಯಾದ ಬೆನ್ನಲ್ಲೇ ದಿನೇಶ್ ಅವರು ಕೆಸ್ತೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಡಿ.16ರಂದು ಶಿಂಷಾ ನದಿಯಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿತ್ತು. ಇದು ಸೃಷ್ಟಿಯ ಶವ ಎಂದು ದೃಢಪಟ್ಟಿತ್ತು. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದು ಪ್ರಸನ್ನ ವಿಚಲಿತಗೊಂಡಿದ್ದ.
ಸೃಷ್ಟಿ ಆತ್ಮಹತ್ಯೆಯ ಹಿನ್ನೆಲೆ ತನಿಖೆ ನಡೆಸಲು ಪೊಲೀಸರು ಮುಂದಾಗುತ್ತಿದ್ದಂತೆ ಪ್ರಸನ್ನ ತನ್ನ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಈ ಮೂಲಕ ತ್ರಿಕೋನ ಪ್ರೇಮ ಕಥೆ ಇಬ್ಬರ ಸಾವಿನ ಮೂಲಕ ಮುಕ್ತಾಯವಾಗಿದೆ. ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೃಷ್ಟಿ ಹಾಗೂ ಸ್ಪಂದನಾ ಇಬ್ಬರು ಒಂದೇ ತರಗತಿಯಲ್ಲಿ ಓದುತ್ತಿದ್ದರು. ಪ್ರಸನ್ನ ಸೃಷ್ಟಿಯನ್ನು ಪ್ರೀತಿಸುತ್ತಿದ್ದ ವಿಚಾರ ಸ್ಪಂದನಾಗೆ ಗೊತ್ತಿರಲಿಲ್ಲ. ಮದುವೆಗೂ ಮೊದಲು ಪ್ರಸನ್ನ ಸೃಷ್ಟಿಯ ವಿಚಾರಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೂ ಯತ್ನಿಸಿದ್ದ ವಿಚಾರ ಈಗ ತಿಳಿದುಬಂದಿದೆ.
ಇದನ್ನೂ ಓದಿ: Self Harming: ಕೆಲಸದ ಒತ್ತಡದಿಂದ ಬೇಸತ್ತು ಮುಖ್ಯೋಪಾಧ್ಯಾಯ ಆತ್ಮಹತ್ಯೆ