ಬೆಂಗಳೂರು. ಸ್ಯಾಂಡಲ್‌ವುಡ್‌ನ ಭರವಸೆ ನಟ, ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ (Roopesh Shetty) ಅಭಿನಯದ ʼಅಧಿಪತ್ರʼ ಸಿನಿಮಾ (Adhipathra Movie) ತೆರೆಗೆ ಬರಲು ರೆಡಿಯಾಗಿದೆ. ಫೆ. 7ಕ್ಕೆ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ʼಅಧಿಪತ್ರʼದಲ್ಲಿ ಕರಾವಳಿ ಭಾಗದ ಕಥೆಯನ್ನು ಕಟ್ಟಿ ಕೊಡಲಾಗಿದೆ.
ಕರಾವಳಿ ಭಾಗದ ವಿಶೇಷ ಆಚರಣೆಗಳಾದ ಆಟಿ ಕಳಂಜ, ಯಕ್ಷಗಾನ, ಹುಲಿ ಕುಣಿತ ಜತೆಗೆ ʼಅಧಿಪತ್ರʼ ಚಿತ್ರದಲ್ಲಿ ಹೊಸ ರೀತಿಯ ಕಥೆಯನ್ನೆ ಹೆಣೆಯಲಾಗಿದೆ. ಚಯನ್ ಶೆಟ್ಟಿ ಒಂದ್ ಒಳ್ಳೆ ಗಟ್ಟಿಕಥೆಯ ಜತೆಗೆ ಅದ್ಭುತ ಮೇಕಿಂಗ್ ಮೂಲಕ ಸಿನಿಮಾ ಗಮನ ಸೆಳೆಯುತ್ತಿದೆ. ಬಹುತೇಕ ಚಿತ್ರೀಕರಣ ಕರಾವಳಿ ಭಾಗದಲ್ಲಿಯೇ ನಡೆದಿದೆ. ಈಗಾಗಲೇ ಚಿತ್ರದ ಡಬ್ಬಿಂಗ್ ಹಾಗೂ ಓಟಿಟಿ ಹಕ್ಕುಗಳಿಗೆ ಬೇಡಿಕೆ ಬಂದಿದೆ.
‘ಅಧಿಪತ್ರ’ ಚಿತ್ರದಲ್ಲಿ ರೂಪೇಶ್ ಶೆಟ್ಟಿಗೆ ನಿರೂಪಕಿ ಜಾಹ್ನವಿ ಜೋಡಿ ಆಗಿದ್ದಾರೆ. ಸಿನಿಮಾದಲ್ಲಿ ನುರಿತ ಕಲಾವಿದರ ದಂಡೇ ಇದೆ. ಎಂ.ಕೆ.ಮಠ, ʼಕಾಂತಾರʼ ಚಿತ್ರ ಖ್ಯಾತಿಯ ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್, ದೀಪಕ್ ರೈ, ಕಾರ್ತಿಕ್ ಭಟ್, ಅನಿಲ್ ಉಪ್ಪಾಲ್, ಪ್ರಶಾಂತ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
‘ಅಧಿಪತ್ರ’ ಸಿನಿಮಾವು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿದೆ. ‘ಕೆ.ಆರ್. ಸಿನಿ ಕಂಬೈನ್ಸ್’ ಬ್ಯಾನರ್ ಮೂಲಕ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮೇ ಗೌಡ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಹಾಗೂ ಬೆಳಕು ಫಿಲಂಸ್ ಅಡಿಯಲ್ಲಿ ಕಾರ್ತಿಕ್ ಶೆಟ್ಟಿ ಮತ್ತು ಸತೀಶ್ ಶೆಟ್ಟಿ ಶ್ವೇತಾ ರವಿಚಂದ್ರ ಶೆಟ್ಟಿ ಕೂಡ ಸಹ-ನಿರ್ಮಾಪಕರಾಗಿದ್ದಾರೆ. ʼಅಧಿಪತ್ರʼ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಡಿ. 27ಕ್ಕೆ ಚಿತ್ರದ ಮೊದಲ ಹಾಡು ಲಹರಿ ಮ್ಯೂಸಿಕ್‌ನಲ್ಲಿ ರಿಲೀಸ್ ಆಗಲಿದೆ.
ಈ ಸುದ್ದಿಯನ್ನೂ ಓದಿ: UI movie: ಉಪೇಂದ್ರ ನಟನೆಯ ಯುಐ ಚಿತ್ರ ಡಿ.20ರಂದು ವಿಶ್ವಾದ್ಯಂತ 2000 ತೆರೆಗಳಲ್ಲಿ ಬಿಡುಗಡೆ