ಸಂದರ್ಶನ: ಶೀಲಾ ಸಿ. ಶೆಟ್ಟಿ
ಸೀರೆಯಲ್ಲೂ ಗ್ಲಾಮರ್ ಡಾಲ್‌ನಂತೆ ಕಾಣಿಸುವ ಸ್ಯಾಂಡಲ್‌ವುಡ್ ನಟಿ ಸಂಗೀತಾ ಭಟ್ (Star Saree Fashion) ಸಖತ್ ಫ್ಯಾಷೆನಬಲ್ ನಟಿ & ಮಾಡೆಲ್. ಸೀರೆಯಲ್ಲಿ ಮಾತ್ರವಲ್ಲ, ಎಲ್ಲಾ ಬಗೆಯ ಔಟ್‌ಫಿಟ್‌ಗಳಲ್ಲೂ ಸಖತ್ತಾಗಿ ಕಾಣಿಸುತ್ತಾರೆ. ಮಾತ್ರವಲ್ಲ, ಅಷ್ಟೇ ಚೆನ್ನಾಗಿ ತಮ್ಮದೇ ಆದ ಸ್ಟೈಲ್ ಸ್ಟೇಟ್‌ಮೆಂಟ್ಸ್ ಕೂಡ ಫಾಲೋ ಮಾಡುತ್ತಾರೆ.
ಸೀರೆ ಫ್ಯಾಷನ್ & ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದ ನಟಿ ಸಂಗೀತಾ ಭಟ್ ತಮ್ಮ ಸೀರೆ ಒಲವಿನ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ಓದುಗರಿಗೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ. ಅವರ ಸಂದರ್ಶನದ ಸಾರಾಂಶ ಇಲ್ಲಿದೆ.
ವಿಶ್ವವಾಣಿ ನ್ಯೂಸ್: ಸೀರೆಯಲ್ಲಿ ಗ್ಲಾಮರ್ ಡಾಲ್‌ನಂತೆ ಕಾಣಿಸುವ ನಿಮ್ಮ ಸೀರೆ ಲವ್ ಬಗ್ಗೆ ಹೇಳಿ?
ಸಂಗೀತಾ ಭಟ್: ಮದುವೆಯಾದ ಆರಂಭದಲ್ಲಿ ಹೆವ್ವಿ ರೇಷ್ಮೆ ಸೀರೆಗಳನ್ನು ಉಟ್ಟುಕೊಳ್ಳುವುದು ಕಷ್ಟವೆನಿಸುತ್ತಿತ್ತು. ಆಗೆಲ್ಲಾ ಸೀರೆಯೆಂದರೇ ದೂರ ಇರುತ್ತಿದ್ದ ನಾನು ಬರಬರುತ್ತಾ ಸೀರೆಯನ್ನು ಇಷ್ಟಪಡಲಾರಂಭಿಸಿದೆ. ಅದರಲ್ಲೂ ಮೃದುವಾದ ಮಲ್ ಕಾಟನ್ ಸೀರೆ ನನಗೆ ಪ್ರಿಯವಾಗತೊಡಗಿತು. ಸೀರೆಯುಡಲಾರಂಭಿಸಿದೆ. ಪರಿಣಾಮ, ಸೀರೆ ಲವ್ ಹೆಚ್ಚಾಯಿತು.
ವಿಶ್ವವಾಣಿ ನ್ಯೂಸ್: ನಿಮ್ಮ ಡೈಲಿ ರುಟೀನ್‌ನಲ್ಲಿರುವ ಫ್ಯಾಷನ್ ಏನು?
ಸಂಗೀತಾ ಭಟ್: ಕಂಫರ್ಟಬಲ್ ವೇರ್ಸ್ ನನ್ನ ವಾರ್ಡ್ರೋಬ್‌ನಲ್ಲಿವೆ. ನಿಮಗೆ ಗೊತ್ತೇ! ನನ್ನ ಪತಿ ಸುದರ್ಶನ್ ಧರಿಸಿ, ಲೂಸಾಗಿರುವ ಟೀ ಶರ್ಟ್ & ಔಟ್‌ಫಿಟ್‌ಗಳನ್ನು ನಾನು ಮನೆಯಲ್ಲಿ ಧರಿಸುತ್ತೇನೆ ಎಂದರೇ ನಿಮಗೆ ಅಚ್ಚರಿಯಾಗಬಹುದು!
ವಿಶ್ವವಾಣಿ ನ್ಯೂಸ್: ಫೋಟೋಶೂಟ್‌ಗಳಲ್ಲಿ ನಿಮ್ಮ ಸೀರೆ ಚಾಯ್ಸ್ ಹೇಗೆ?
ಸಂಗೀತಾ ಭಟ್: ಬಹುತೇಕ ಸೀರೆ ಸ್ಟೈಲಿಂಗ್ ಹಾಗೂ ಆಯ್ಕೆ ನನ್ನ ಐಡಿಯಾವೇ ಆಗಿರುತ್ತದೆ. ಇದರೊಂದಿಗೆ ಮೇಕಪ್ ಹಾಗೂ ಫೋಟೋಗ್ರಾಫಿ ಟೀಮ್ ಸಪೋರ್ಟ್ ಕೂಡ ಅತ್ಯುತ್ತಮ ಔಟ್‌ಫುಟ್ ದೊರೆಯಲು ಸಹಾಯ ಮಾಡುತ್ತದೆ.
ವಿಶ್ವವಾಣಿ ನ್ಯೂಸ್: ಸೀರೆ ಪ್ರೇಮಿಯಾಗಿರುವ ನೀವು ಸೀರೆಗಳ ಬಗ್ಗೆ ಹೇಳುವುದೇನು?
ಸಂಗೀತಾ ಭಟ್: ಸೀರೆ ಕೂಡ ನಮ್ಮ ಎಮೋಷನ್ ಬಿಂಬಿಸಬಲ್ಲದು. ತೀರಾ ಮೃದುವಾದ ಮಲ್ ಕಾಟನ್ ಅಥವಾ ಸಿಲ್ಕ್ ಸೀರೆಗಳು ಪ್ರತಿ ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತವೆ. ಅದನ್ನು ನಾವು ಸ್ಟೈಲಿಂಗ್ ಮಾಡುವುದರ ಆಧಾರದ ಮೇಲೆ ಅವು ಗ್ಲಾಮರಸ್ ಆಗಿ ಕಾಣಿಸುತ್ತವೆ. ನನಗದು ಸಿದ್ಧಿಸಿದೆ.
ವಿಶ್ವವಾಣಿ ನ್ಯೂಸ್: ನಿಮ್ಮ ಯೂನಿಕ್ ಫ್ಯಾಷನ್?
ಸಂಗೀತಾ ಭಟ್: ಯೂನಿಕ್ ಫ್ಯಾಷನ್ ಎಂಬುದಿಲ್ಲ! ನಾನು ನಾನಾಗಿದ್ದಾಗ ನನ್ನ ಬಾಡಿ ಟೈಪ್‌ಗೆ ಹೊಂದುವಂತೆ ಫ್ಯಾಷನ್ ಮಾಡಿದಾಗ ಅದು ಯೂನಿಕ್ ಫ್ಯಾಷನ್ ಆಗುತ್ತದೆ ಅಲ್ಲವೇ!
ವಿಶ್ವವಾಣಿ ನ್ಯೂಸ್: ಸೀರೆಯಲ್ಲೂ ಕನಸು ಕಾಣುತ್ತೀರಾ?
ಸಂಗೀತಾ ಭಟ್: ಹೌದು, ಚಿಕ್ಕವಳಿದ್ದಾಗಿನಿಂದಲೂ ಕರಣ್ ಜೋಹರ್ ಸಿನಿಮಾ ನೋಡಿ ಬೆಳೆದ ನನಗೆ ಸ್ನೋ ಫಾಲ್ ಜಾಗದಲ್ಲಿ ಬಾಲಿವುಡ್ ನಾಯಕಿಯರಂತೆ, ನಾನು ಕೂಡ ಸೀರೆಯಲ್ಲಿ ಉಟ್ಟು, ಗಾಳಿಯಲ್ಲಿ ಸೆರಗು ಹಾರಿಸುತ್ತಾ, ಹಾಡೊಂದರಲ್ಲಿ ಕಾಣಿಸಿಕೊಳ್ಳಬೇಕೆಂಬ ಕನಸಿದೆ.
ಈ ಸುದ್ದಿಯನ್ನೂ ಓದಿ | Feather Accessories Fashion: ಯುವತಿಯರನ್ನು ಸೆಳೆಯುತ್ತಿದೆ ಫಂಕಿ ಫೆದರ್ ಆಕ್ಸೆಸರೀಸ್!
ವಿಶ್ವವಾಣಿ ನ್ಯೂಸ್: ಓದುಗರಿಗೆ ಫ್ಯಾಷನ್ ಟಿಪ್ಸ್ ನೀಡುತ್ತೀರಾ?
ಸಂಗೀತಾ ಭಟ್: ಸದಾ, ಕಂಫರ್ಟಬಲ್ ಫ್ಯಾಷನ್ ಫಾಲೋ ಮಾಡಿ. ಅವರಿವರ ಫ್ಯಾಷನ್ ಫಾಲೋ ಮಾಡಬೇಡಿ. ನಿಮ್ಮ ಬಾಡಿ ಟೈಪ್‌ಗೆ ತಕ್ಕಂತೆ ಫ್ಯಾಷನ್ ಫಾಲೋ ಮಾಡಿ. ಚಳಿಗಾಲದಲ್ಲೂ ಲೈಟ್ ಕಾಟನ್ ಸೀರೆ ಆಯ್ಕೆ ಮಾಡಿ. ಉಡಿ. ಆಕರ್ಷಕವಾಗಿ ಕಾಣಿಸುವಿರಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)