ಮುಂಬೈ: ಎಲಿಫೆಂಟಾ ದ್ವೀಪದಿಂದ (Elephanta Island) ಮುಂಬೈಯ ಐಕಾನಿಕ್ ಗೇಟ್ವೇ ಆಫ್ ಇಂಡಿಯಾ (Iconic Gateway of India)ಕ್ಕೆ 35 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಬುಧವಾರ ಸಂಜೆ ಸರಿ ಸುಮಾರು 4 ಗಂಟೆಗೆ ಮುಳುಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ (Boat Capsized).
#WATCH I A ferry carrying 35 tourists from Elephanta Island to Gateway of India capsized off the island at around 4pm. Coast Guard and Indian Navy vessels have been pressed into service and most passengers are safe. Search ops for the remaining are on, reports @Journoyogesh pic.twitter.com/xqu9qqFiC8
— HTMumbai (@HTMumbai) December 18, 2024
35 ಪ್ರಯಾಣಿಕರಲ್ಲಿ ಈವರೆಗೆ ಒಟ್ಟು 21 ಜನರನ್ನು ರಕ್ಷಿಸಲಾಗಿದ್ದು, ಅದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ. ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರಿಕಾ ದೋಣಿಗಳ ಸಹಾಯದಿಂದ ಪ್ರಯಾಣಿಕರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ. ದೋಣಿಯ ಹೆಸರು ನೀಲ್ಕಮಲ್ ಎಂದು ತಿಳಿದು ಬಂದಿದ್ದು, ಮಾಹಿತಿ ಪ್ರಕಾರ ದೋಣಿಯಲ್ಲಿ 30ರಿಂದ 35 ಪ್ರಯಾಣಿಕರಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ಯಂತ್ರೋಪಕರಣಗಳನ್ನು ಒದಗಿಸಲು ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
एलिफंटाकडे जाणाऱ्या नीलकमल या बोटीचा अपघात घडल्याचे वृत्त प्राप्त झाले. नौदल, कोस्टगार्ड, पोर्ट, पोलिस पथकच्या बोटी तातडीने मदतीसाठी रवाना करण्यात आल्या आहेत. जिल्हा आणि पोलिस प्रशासनाशी सातत्याने आम्ही संपर्कात असून, सुदैवाने बहुसंख्य नागरिकांना वाचविण्यात आले आहे. तथापि अजूनही…
— Devendra Fadnavis (@Dev_Fadnavis) December 18, 2024
“ಎಲಿಫೆಂಟಾ ಕಡೆಗೆ ಹೋಗುತ್ತಿದ್ದ ನೀಲ್ಕಮಲ್ ದೋಣಿ ಅಪಘಾತಕ್ಕೀಡಾಗಿರುವ ಬಗ್ಗೆ ವರದಿಗಳು ಬಂದಿವೆ. ನೌಕಾಪಡೆ, ಕೋಸ್ಟ್ ಗಾರ್ಡ್, ಬಂದರು ಮತ್ತು ಪೊಲೀಸ್ ತಂಡಗಳ ದೋಣಿಗಳನ್ನು ಸಹಾಯಕ್ಕಾಗಿ ತಕ್ಷಣವೇ ಕಳುಹಿಸಲಾಗಿದೆ. ನಾವು ಜಿಲ್ಲಾ ಮತ್ತು ಪೊಲೀಸ್ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅದೃಷ್ಟವಶಾತ್ ಹೆಚ್ಚಿನ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ಯಂತ್ರೋಪಕರಣಗಳನ್ನು ನಿಯೋಜಿಸಲು ಜಿಲ್ಲಾಡಳಿತಕ್ಕೆ ಆದೇಶ ನೀಡಲಾಗಿದೆʼʼ ಎಂದು ಸಿಎಂ ಫಡ್ನವೀಸ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:ಆಂಬ್ಯುಲೆನ್ಸ್ ವಿಳಂಬದಿಂದ ಬುಡಕಟ್ಟು ಮಹಿಳೆಯ ಮೃತದೇಹ ಆಟೋರಿಕ್ಷಾದಲ್ಲಿ ಸಾಗಿಸಿದ ಕುಟುಂಬ; ಸಂಸದೆ ಪ್ರಿಯಾಂಕಾ ವಿರುದ್ಧ ಬಿಜೆಪಿ ನಾಯಕ ಕಿಡಿ