Wednesday, 18th December 2024

BBK 11: ‘ನನ್ನ ಕೈಯಲ್ಲಿ ಆಗೋದಿಲ್ಲ’: ಟಾಸ್ಕ್ ಆಡಲಾಗದೆ ಕಣ್ಣೀರಿಟ್ಟ ಚೈತ್ರಾ ಕುಂದಾಪುರ

Chaithra Kundapura (11)

ಬಿಗ್ ಬಾಸ್ ಮನೆಯಲ್ಲಿ (Bigg Boss Kannada 11) ಈ ವಾರ ಗ್ರೂಪ್ ಟಾಸ್ಕ್ ನಡೆಯುತ್ತಿದೆ. ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಂಗಡನೆ ಮಾಡಲಾಗಿದೆ. ತ್ರಿವಿಕ್ರಮ್ ನಾಯಕನಾಗಿರುವ ಗ್ರೂಪ್​ನಲ್ಲಿ ಭವ್ಯಾ, ಗೌತಮಿ ಜಾಧವ್, ಮಂಜು ಹಾಗೂ ಚೈತ್ರಾ ಕುಂದಾಪುರ ಇದ್ದರೆ ಅತ್ತ ರಜತ್ ಗುಂಪಿನಲ್ಲಿ ಧನರಾಜ್, ಹನುಮಂತ, ಐಶ್ವರ್ಯಾ ಹಾಗೂ ಮೋಕ್ಷಿತಾ ಪೈ ಇದ್ದಾರೆ.

ಈ ಎರಡೂ ಗ್ರೂಪ್​ಗಳ ಮಧ್ಯೆ ಕಾಲಕಾಲಕ್ಕೆ ಟಾಸ್ಕ್ ನಡೆಯುತ್ತೆ. ಹೀಗೆ ಟಾಸ್ಕ್​ನಲ್ಲಿ ಗೆದ್ದ ತಂಡ ಎದುರಾಳಿ ತಂಡದಲ್ಲಿರುವ ಸದಸ್ಯರನ್ನು ನಾಮಿನೇಟ್ ಮಾಡುವ ಅವಕಾಶ ಪಡೆಯುತ್ತಾರೆ. ಜೊತೆಗೆ ನಾಮಿನೇಷನ್​ನಿಂದ ಪಾರಾಗುವ ಅವಕಾಶ ಕೂಡ ನೀಡಲಾಗುತ್ತಿದೆ. ಅದರಂತೆ ಇಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಿದ್ದಾರೆ. ಇದರಲ್ಲಿ ಗೆದ್ದರೆ ನಾಮಿನೇಷನ್​ನಿಂದ ಪಾರಾಗಬಹುದು. ಆದರೆ, ಈ ಟಾಸ್ಕ್ ಆಡಲಾಗದೆ ಚೈತ್ರಾ ಕುಂದಾಪುರ ಪರದಾಡಿ ಕಣ್ಣೀರಿಟ್ಟಿದ್ದಾರೆ.

ಚೆಂಡನ್ನು ಕೋಲಿನಿಂದ ಸಾಗಿಸುವ ಟಾಸ್ಕ್​​ ನೀಡಲಾಗಿದೆ. ಚೈತ್ರಾ ಕುಂದಾಪುರ ಈ ಆಟದಲ್ಲಿ ಸಫಲರಾಗಿಲ್ಲ. ಆತುರ ಬೇಡ ಚೈತ್ರಕ್ಕ ಎಂದು ಸಹಸ್ಪರ್ಧಿಗಳು ಸೂಚಿಸಿದ್ದಾರೆ. ತ್ರಿವಿಕ್ರಮ್​ ಪ್ರತಿಕ್ರಿಯಿಸಿ, ಅಮ್ಮೋ ಐವತ್ ಚಾನ್ಸ್ ಆಯ್ತು ಒಂದೇ ಒಂದು ಬಾಲ್​ ತಳ್ಳಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಆಟದ ನಡುವೆಯೇ ನನ್ನ ಕೈಯಲ್ಲಿ ಆಗುತ್ತಿಲ್ಲ ಎಂದು ಚೈತ್ರಾ ತಿಳಿಸಿದ್ದು, ಆಗೋಲ್ಲ ಅಂದ್ರೆ ಹೇಗೆ ಅಂತಾ ಭವ್ಯಾ ಹೇಳಿದ್ದಾರೆ.

ಚೈತ್ರಾ ಕುಂದಾಪುರ ಈ ಟಾಸ್ಕ್​ ಅನ್ನು ಆಡಲು ಆಗದೇ ಕಣ್ಣೀರು ಹಾಕಿದ್ದಾರೆ. ಬಿಗ್​ಬಾಸ್​ ಕೊಟ್ಟ ಟಾಸ್ಕ್​ ಅನ್ನು ಆಡಲು ಆಗದೇ ಅದೇ ಕೋಲಿನಿಂದ ತಲೆಗೆ ಚಚ್ಚಿಕೊಂಡಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರು ಬಾಲ್ ಟಾಸ್ಕ್ ಆಡೋದಕ್ಕೆ ಇವರಿಗೆ ಆಗಲಿಲ್ಲ. ಹೀಗಾಗಿ ಅವರ ತಂಡದ ಸದಸ್ಯರೇ ಚೈತ್ರಾ ಮೇಲೆ ರೇಗಾಡಿದ್ದಾರೆ.

ಚೈತ್ರಾ ಬಳಿ ಕ್ಷಮೆ ಕೇಳಿದ ರಜತ್:

ಉಸ್ತುವಾರಿ ವಹಿಸಿದ್ದ ಚೈತ್ರಾ ಅವರನ್ನು ಟಾಸ್ಕ್ ಮಧ್ಯೆ ಒಂದು ಹಂತದಲ್ಲಿ ರಜತ್ ಅವರು ತಳ್ಳಿ ಬಿಟ್ಟರು. ಟಾಸ್ಕ್ ಮುಗಿದ ಬಳಿಕ ಮೋಕ್ಷಿತಾ ಹಾಗೂ ಐಶ್ವರ್ಯಾ ಅವರು ರಜತ್​ಗೆ ಕಿವಿಮಾತು ಹೇಳಿದ್ದಾರೆ. ನೀವು ಚೈತ್ರಾನ ತಳ್ಳಿದ್ದು ತಪ್ಪು. ಕೋಪ ಕಡಿಮೆ ಮಾಡಿಕೊಳ್ಳಬೇಕು. ಚೈತ್ರಾ ಬಳಿ ಕ್ಷಮೆ ಕೇಳಿ ಎಂದಿದ್ದರು. ತನ್ನ ತಪ್ಪಿನ ಅರಿವಾಗಿ ರಜತ್ ಅವರು ನೇರವಾಗಿ ಚೈತ್ರಾ ಬಳಿ ತೆರಳಿ, ತಪ್ಪಾಯಿತು. ನೀನು ನನ್ನ ತಂಗಿ ಸಮಾನ ಎಂದು ರಜತ್ ಹೇಳಿದ್ದಾರೆ.

BBK 11: ‘ಚೈತ್ರಾ ಜಾಗದಲ್ಲಿ ಗಂಡ್​​ಮಕ್ಕಳಿದ್ದಿದ್ರೆ..’: ಬಿಗ್ ಬಾಸ್​ನಲ್ಲಿ ಮೊದಲ ಬಾರಿ ರೊಚ್ಚಿಗೆದ್ದ ಹನುಮಂತ