ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಹನ್ನೆರಡನೇ ವಾರ ಸಾಗುತ್ತಿದೆ. ಈಗ ಟಾಸ್ಕ್ ಕಠಿಣವಾಗುತ್ತಾ ಸಾಗುತ್ತಿದ್ದು, ಇನ್ಮುಂದೆ ಸ್ಪರ್ಧಿಗಳಿಗೆ ನೈಜ್ಯ ಪರೀಕ್ಷೆ ಶುರುವಾಗಲಿದೆ. ಇದರ ನಡುವೆ ಕಳೆದ ಭಾನುವಾರ ಅನೇಕ ಆಘಾತಕಾರಿ ಘಟನೆ ನಡೆಯಿತು. ಮುಖ್ಯವಾಗಿ ಫೈನಲ್ ಸ್ಪರ್ಧಿ ಅಂದುಕೊಂಡಿದ್ದ ಶಿಶಿರ್ ಶಾಸ್ತ್ರೀ ಅಚ್ಚರಿ ಎಂಬಂತೆ ಬಿಗ್ ಬಾಸ್ನಿಂದ ಎಲಿಮಿನೇಟ್ ಆಗಿ ಹೊರಬಂದರು. ಹನ್ನೊಂದನೇ ವಾರಕ್ಕೆ ಶಿಶಿರ್ ಬಿಗ್ ಬಾಸ್ ಪ್ರಯಾಣ ಕೊನೆಗೊಳಿಸಿದರು.
ಆ ವಾರ ಮನೆಯಿಂದ ಹೊರಹೋಗಲು ಎಂಟು ಮಂದಿ ನಾಮಿನೇಟ್ ಆಗಿದ್ದರು. ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್ ಆಚಾರ್, ಶಿಶಿರ್, ರಜತ್ ಕಿಶನ್, ಹನುಮಂತ, ಮೋಕ್ಷಿತಾ ಪೈ ಹಾಗೂ ಚೈತ್ರಾ ಕುಂದಾಪುರ ನಾಮಿನೇಟ್ ಲಿಸ್ಟ್ನಲ್ಲಿ ಇದ್ದರು. ಆದರೆ, ಇವರಲ್ಲಿ ಶಿಶಿರ್ ಎಲಿಮಿನೇಟ್ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅಚ್ಚರಿ ಎಂಬಂತೆ ಸುದೀಪ್ ಅವರು ಶಿಶಿರ್ ಹೆಸರು ಘೋಷಿಸಿದರು.
ಅದರಂತೆ ಶಿಶಿರ್ ಶಾಸ್ತ್ರೀ ಮನೆಯಿಂದ ಆಚೆ ಬಂದಿದ್ದಾರೆ. ಶೋ ಆರಂಭವಾದಾಗ ಶಿಶಿರ್ ಶಾಸ್ತ್ರೀ ಕಠಿಣ ಸ್ಪರ್ಧಿಯಂತೆ ಕಂಡಿದ್ದರು. ಅದರಂತೆ ಎರಡನೇ ವಾರ ಕ್ಯಾಪ್ಟನ್ ಕೂಡ ಆದರು. ಆದರೆ, ನಂತರ ಇವರ ಆಟ ಕೊಂಚ ನಿಧಾನವಾಗತೊಡಗಿತು. ಆಟದಲ್ಲಿ ಹೆಚ್ಚೇನು ಕಾಣಿಸಲಿಲ್ಲ. ಮೂಲೆಗುಂಪಾದಂತೆ ಕಂಡರು. ಕಿಚ್ಚ ವೀಕೆಂಡ್ನಲ್ಲಿ ಬಂದು ಇವರಿಗೆ ಅನೇಕ ಭಾರೀ ಎಚ್ಚರಿಕೆ ನೀಡಿದರು ಅದು ಪ್ರಯೋಜನ ಆಗಲಿಲ್ಲ. ಹಿಂದಿನ ಎರಡು ವಾರಗಳಿಂದ ಡೇಂಜರ್ಝೋನ್ನಲ್ಲಿ ಹೆಚ್ಚು ಕಾಣಿಸಿಕೊಂಡರು.
ಇದೀಗ ಎಲಿಮಿನೇಟ್ ಆಗಿ ಹೊರಬಂದಿರುವ ಶಿಶಿರ್ ವಿಶ್ವವಾಣಿ ಜೊತೆ ಮಾತನಾಡಿದ್ದು ಮನೆಯೊಳಗಿನ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಚೈತ್ರಾ ಕುಂದಾಪುರ ಅವರು ಹೇಗೆ ಎಂಬುದನ್ನು ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಗ್ರಜ್ ಹಿಡ್ಕೊಂಡು ಇರಲು ಸಾಧ್ಯವಿಲ್ಲ. 30ನೇ ದಿನಕ್ಕೆ ಒಂದು ಘಟನೆ ನಡೆದರೆ ನಾನು ಆ ಮನೆಯಲ್ಲಿ ಇನ್ನೂ ಹೆಚ್ಚಿನ ದಿನ ಇರಬೇಕು. ಆ ಗ್ರಜ್ ಅನ್ನು ಇಟ್ಕೊಂಡು ಇರಲು ಸಾಧ್ಯವಿಲ್ಲ. ನನಗೆ ಸಿಟ್ಟನ್ನು ತೀರಿಸಿಕೊಳ್ಳಲು ನಾಮಿನೇಷನ್ ಮತ್ತು ಕಳಪೆ ಎಂಬ ವೇದಿಕೆ ಇತ್ತು. ಅಲ್ಲಿ ಚೈತ್ರಾ ಕುಂದಾಪುರ ಮೇಲೆ ನನ್ನ ಸಿಟ್ಟನ್ನು ತೀರಿಸಿಕೊಂಡೆ, ಅಲ್ಲಿಗೆ ಅದು ಮುಗಿಯಿತು ಎಂದು ಹೇಳಿದ್ದಾರೆ.
ಎಲ್ಲ ಘಟನೆ ಆದ ಬಳಿಕವೂ ಚೈತ್ರಾ ನನ್ನ ಬಳಿ ಜೆನ್ಯೂನ್ ಆಗಿಯೇ ಇದ್ದಳು. ಇವನ ಬೆನ್ನಿಗೆ ಎಷ್ಟೇ ಚೂರಿ ಹಾಕಿದ್ರು ಬಗ್ಗೋನು ಅಲ್ಲ, ಅವನ ಬಳಿಯಿಂದ ಬರೀ ಪ್ರೀತಿ ಮಾತ್ರ ಸಿಗೋದು ಎಂಬ ಅರಿವು ಆಕೆಗೆ ಆಯಿತು. ಚೈತ್ರಾ ಅವಳಲ್ಲಿ ಒಂದು ಮಗುನೂ ಇದೆ, ಅದೇ ಮಗು ಜೊತೆ ಕೋಪ ಇರುವ ಕಾಳಿ ಕೂಡ ಅವಳ ಜೊತೆ ಇದೆ. ಸ್ವಲ್ಪ ಅನವಶ್ಯಕ ಮಾತುಗಳನ್ನು ಕಡಿಮೆ ಮಾಡಿಕೊಂಡರೆ ಒಳ್ಳೆಯದು ಎಂದು ಶಿಶಿರ್ ಹೇಳಿದ್ದಾರೆ.
BBK 11: ಚೈತ್ರಾ ಕುಂದಾಪುರ ಬಳಿ ಕ್ಷಮೆ ಕೇಳಿದ ರಜತ್ ಕಿಶನ್: ಟಾಸ್ಕ್ನಲ್ಲಿ ಏನಾಗಿತ್ತು?