ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡನ್ ಅವರು ಭಾರತ ಮೂಲದ ಅಮೆರಿಕನ್ ವೇದಾಂತ್ ಪಟೇಲ್ ಅವರನ್ನು ಶ್ವೇತಭವನದ ಸಂವಹನ ವಿಭಾಗದ ಸಹಾಯಕ ಮಾಧ್ಯಮ ಕಾರ್ಯದರ್ಶಿ ಯನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ.
ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಪಟೇಲ್ ಅವರು ಬೈಡನ್ ಪರ ಪ್ರಚಾರ ಕಾರ್ಯದ ಪ್ರಾದೇಶಿಕ ಸಂವಹನ ನಿರ್ದೇಶಕ ರಾಗಿದ್ದರು. ಪ್ರಸ್ತುತ ಅವರು ಬೈಡನ್ ಅವರ ವಕ್ತಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.