Saturday, 21st September 2024

ಶಿವಸೇನಾ ಮುಖಂಡ ಮೋಹನ ರಾವಲೆ ನಿಧನ

ಮುಂಬೈ: ಶಿವಸೇನಾ ಮುಖಂಡ, ಐದು ಬಾರಿ ಸಂಸದರಾಗಿದ್ದ ಮೋಹನ ರಾವಲೆ (72) ಶನಿವಾರ ಗೋವಾದಲ್ಲಿ ಹೃದಯಾಘಾತ ದಿಂದ ನಿಧನ ಹೊಂದಿದರು. ದಕ್ಷಿಣ ಮಧ್ಯ ಮುಂಬೈ ಲೋಕಸಭಾ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ್ದರು.

‘ಮೋಹನ ರಾವಲೆ ಅವರು ನಿಜವಾದ ಶಿವಸೈನಿಕ ಹಾಗೂ ವಿಶಾಲ ಹೃದಯದ ಸ್ನೇಹಿತರಾಗಿದ್ದರು’ ಎಂದು ಶಿವಸೇನಾ ಮುಖಂಡ ಸಂಜಯ್‌ ರಾವತ್‌ ಟ್ವೀಟ್‌ ಮಾಡಿದ್ದಾರೆ. 2013ರಲ್ಲಿ ಶಿವಸೇನೆ ತೊರೆದಿದ್ದ ಮೋಹನ್‌ ಅವರು ಬಳಿಕ ಮತ್ತೆ ಶಿವಸೇನೆ ಸೇರಿದ್ದರು.